ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ನರಸಿಂಹ, 435 ಮಹಾದೇವ, ಸು. 1650 ಈತನು ಹೇರೂರುಹಣ್ಣಿನಸಾಂಗತ್ಯವನ್ನು ಬರೆದಿದ್ದಾನೆ. ಇವನು ವೀರಶೈವಕವಿ; ಸುಮಾರು 1650ರಲ್ಲಿ ಇದ್ದಿರಬಹುದು. ಇವನ ಗ್ರಂಥ - ಹೇರೂರುಹೆಣ್ಣಿನಸಾಂಗತ್ಯ ಸಂಧಿ 3, ಪದ್ಯ 456, ಇದರ ಕಧಾಗರ್ಭವನ್ನು ಕವಿ ಈಪದ್ಯ ದಲ್ಲಿ ಸೂಚಿಸಿದ್ದಾನೆ.. ಹೇರೂರ ಹೆಣ್ಣು ಜೈನನ ಕಂಡು ಮನಹೇಸಿ | ಮಾರಮರ್ದನನಿಳೆಗೈದಿ | ನಾರಿ ಗಂಡಾಗಿ ಧಾರಿಣಿಯೊಳು ಮೆದ ವಿ | ಚಾರ ವನೊಲಿದು ಬಣ್ಣಿಸುವೆ || - ತನ್ನ ಗ್ರಂಥದ ವಿಷಯವಾಗಿ ಹೀಗೆ ಹೇಳಿದ್ದಾನೆ-- ಗುರುತಾಯಿತಂದೆಗೋತ್ರವ ಕೊಂದ ಕಥೆಯಲ್ಲ | ನರರ ಹೊಗುವ ಮತವಲ್ಲ | ಪರಧನ ಪರಸತಿಗೆಳಸಿದ ನುಡಿಯಲ್ಲ { ಹರನ ಸಂಗತಿಯ ಕೇಳುವುದು | ಸಿರಿಯಾಳಸೆಟ್ಟಯ ಸಾಂಗತ್ಯವೂ ಏತತ್ಕವಿಕೃತವಾಗಿರಬಹುದು. ಇದರಲ್ಲಿ ಸಿರಿಯಾಳನೆಂಬ ಶಿವಭಕ್ಕನ ಕಥೆಹೇಳಿದೆ. ಸಂಧಿ 2ಪದ್ಯ 354, ನರಸಿಂಹ, ಸು. 1650 ಈತನು ಮದನಮೋಹಿನಿಯಕಥೆಯನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿಯೆಂದು ತೋರುತ್ತದೆ. " ಮೇಲುಕೋಟೆಯ ನರಸಿಂಹನ ಕೃಪೆಯಿಂದ ದೇದೆನೀಕೃತಿಯನು ” ಎಂದು ಹೇಳುತ್ತಾನೆ, ಇವನ ಕಾಲವು ಸುಮಾರು 1650 ಆಗಿರಬಹುದೆಂದು ಊಹಿಸುತ್ತವೆ. ಪೂರ್ವ ಕವಿಗಳನ್ನು ಈ ಪದ್ಯದಲ್ಲಿ ಸ್ಮರಿಸುತ್ತಾನೆ ವ್ಯಾಸ ವಾಲ್ಮೀಕಿ ಹಶ ಬಾಣನು ಕಾಳಿ | ದಾಸ ಮಯರನು ಮಲುಹಣ | ಈಶಭಕ್ತನು ರಾಘವಾಂಕನ ಬಲಗೊಂಡು | ಲೇಸಾಗಿ ಸೇಲ್ಸ್ನೀಕೃತಿಯನು | ಇವನ ಗ್ರಂಥ ಮದನಮೋಹಿನಿಯಕಥ ಇದು ಸಾಂಗತ್ಯದಲ್ಲಿ ಬರೆದಿದೆ ; ಸಂಧಿ 11, ಪದ್ಯ 860. ಕಥಾಗರ್ಭ-ಮಾಳವದೇಶದಲ್ಲಿಯ ಚಂಪಕಪುರದ ದೊರೆಯಾದ ಚಂದ್ರಶೇಖ ರರಾpತ ಮಗ ಜಯಸೇನನು ತನ್ನ ಚಿಕ್ಕಮ್ಮನ ದ್ವೇಷಕ್ಕೆ ಗುರಿಯಾಗಿ ತಂದೆಯ ಅಪ್ಪ