ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 469 ಕರ್ಣಾಟಕ ಕವಿಚರಿತೆ [17ನೆಯ

        ತಿರುಮಲೆಯಾರ್ಯ೦” ಎಂಬುದರಿಂದ ಈತನು ಚಿಕ್ಕದೇವರಾಜನ ವಿಶೇಷ 
        ಪ್ರೀತಿಗೆ ಪಾತ್ರನಾಗಿದ್ದಂತ ತಿಳಿಯುತ್ತದೆ.
             ಪೂರ್ವಕವಿಗಳಲ್ಲಿ ವಾಲ್ಮೀಕಿ, ವ್ಯಾಸ, ಶುಕ ಇವರುಗಳನ್ನು ಸ್ಮರಿ 
        ಸಿದ್ದಾನೆ. ಇವನ ತಮ್ಮನಾದ ನಿಂಗರಾರ್ಯನು ತನ್ನ ಮಿತ್ರವಿಂದಾಗೋವಿಂದ 
        ದಲ್ಲಿ ಈತನ ಪಾಂಡಿತ್ಯವನ್ನು ಹೀಗೆ ಸ್ತುತಿಸಿದ್ದಾನೆ-
          ಫಣಿಪತಿಭಾಷ್ಯದಾಗರುಡಿಯೊಳ್ ಪದಚಾರಿಗೆರೂಢಿಗೆಯ್ದಣಂ | 
          ಕಣಚರಣೋಕ್ಕಿಜೈಮಿನಿಯವಾಣಿಗಳಿ೦ ಮಿಗೆ ತಾಳಿಜಾಣೆಯಂ ||
          ಪ್ರಣುತಿಸೆ ಭಾವುಕರ್ ತಿರುಮಲಾರ್ಯಸರಸ್ವತಿ ಸಾರ್ಚಿ ಚಿತ್ತಮ೦ |
          ತಣಿಯದೆ ರಂಗನಾಧನೊಳೆ ನರ್ತಿಸುಗುಂ ಶ್ರುತಿಮೌಳಿರಂಗದೊಳ್ ||
          ಪಿರಿದುಂ ಪ್ರೌಢತ್ವಮಂ ಪೆರ್ಕಳಿಕೆ ಕವಿವರ‌ರ್ ಕಬ್ಬದೊಳ ಶಾಸ್ತ್ರದೊಳ್ ಮೇಣ್ | 
          ಕರಾಸಾಹಿತ್ಯದೊಳ್ ಬಿತ್ತರಿಪೊಡೆ ರಸಮಂ ತಿರ್ಮಲಾರ್ಯರ್ಗೆ ಸಲ್ಲು೦ || 
          ತರಇನ್ನೊತಂಗಳೇನಾಡವೆ ವಿಧುಮಣಿಯಲಿ ಖೆಳ್ ನೈದಿಲೊಳ್ ಮತ್ತವಂ ತಾಂ |
          ಕರಗಿಪ್ಪಂ ಬಿರ್ಚುವಂ ಚಂದಿರನೆ ಉಳಿದವರ್ಗೆ೦ತೊಸಗ್ಗ೯೦ ಮಲಗ್ಗು೯೦ ||  
              ದೇವಚಂದ್ರನ ರಾಜಾವಳೀಕಥೆಯಲ್ಲಿ (1838) ಚಿಕ್ಕದೇವರಾಜ, 
         ಅವನ ಕಾಲದಲ್ಲಿದ್ದ ಕೆಲರು ಪಂಡಿತರು ಇವರುಗಳ ವಿಷಯವಾಗಿ ಹೀಗೆ
         ಬರೆದಿದೆ-
         ಚಿಕದೇವರಾಜರಸಂ ಕೋಎದಶಿಖಾಮಣಿಯೆನಿಸಿದಂ ; ತಿರುಮಲಾರ್ಯ೦ ವಿದ್ಯಾ 
    ವಿಶಾರದನೆನಿಸಿದಂ ; ವಿಶಾಲಾಕ್ಷಂ ಸಾಹಿತ್ಯಭಾರತಿಯೆನಿಸಿದಂ ; ಷಡಕ್ಷರಿ ಕವಿಶೇಖ 
   ರನನಿಸಿದಂ,
        ಇವನ ಗ್ರಂಥಗಳಲ್ಲಿ
                   1 ಚಿಕದೇವರಾಜವಿಜಯ
         ಇದು ಚಂಪೂರೂಪವಾಗಿದೆ; ಅಲ್ಲಲ್ಲಿ ಕೆಲವು ತ್ರಿಪದಿಗಳ ಸಂಗ 
         ತ್ಯಗಳೂ ಹಾಡುಗಳೂ ಇವೆ. ಮುದ್ರಿತವಾಗಿರುವ ಪುಸ್ತಕದಲ್ಲಿ 6 ಆಶ್ವಾ
         ಸಗಳಿವೆ. ಗ್ರಂಥ ಅಸಮಗ್ರ. ಇದರಲ್ಲಿ ಮೈಸೂರು ಮಹಾರಾಜರುಗಳ 
         ಚರಿತ್ರವು ಚಿಕ್ಕದೇವರಾಜನವರೆಗೆ ಹೇಳಿದೆ.
                ತನ್ನ ಗ್ರಂಥದ ಉತ್ಕ್ರುಶ್ತತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿ 
        ಕೊಂಡಿದ್ದಾನೆ-