ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ ತಿರುಮಲಾರ್ಯ. 443
ಸುಱುದು ಕುರುಳಳ್ಳೊಳ್ ತೊಳಗಿ ನುನ್ಬಣೆಯೊಳ್ ಕುಡಿಗೊಂಡು ಪುರ್ಬಿನೊಳ್| ಪೊಳೆದೆಸೞಣನ್ಗಳೊಳ್ ಮುಗುಳು ಮೆಲ್ನಗೆಯೊಳ್ ಪೂಗರೇಯಿೞು ಗಲ್ಲದೊಳ್ || ಬಳೆದು ಕುಚೆಂಗಳೊಳ್ ನವೆದು ನಲ್ನಡುವಲಿ ಕಡುರಯ್ಯಮಾಗಿ ಕ | ಣೊಳಿವುದು ನಲ್ನಳಾಕೃತಿಯುಮಿಕೃತಿಯುಂ ಪವನೊಂದಿದಂದದಿಂ || ಕಂದೇ ಕವಿಕೋಕಿಲಮಾ | ಕಂದಂ ಕೊಮಳವಿಕಾಸಿಕೃತಿಕಲ್ಪಲತಾ | ಕಂದಂ ವಿಸೃಮರರಸದು | ಕಂದಂ ಚಿಕದೇವರಾಯಚಂದನ ಚಂದಂ || ಗ್ರಂಥಾವತಾರದಲ್ಲಿ ವಿಷ್ಣುಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ , ಸುದ ರ್ಶನ, ಪಾಂಚಜನ್ಯ, ಸೂರಿಗಳು, ದಿವ್ಯಸೂರಿಗಳುಇವರುಗಳನ್ನು ಸ್ತುತಿಸಿ, ಸತ್ಕವಿಸ್ತುತಿ ದುಷವಿನಿಂದೆಗಳನ್ನು ಮಾಡಿ ಗ್ರಂಧವನ್ನು ಆರಂಭಿಸಿದ್ದಾನೆ. ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ - ಇದು ಯದುಗಿರಿಶಿಖರಾಭರಣಶ್ರೀಮನ್ನಾರಾಯಣಚರಣಪರಿಚರಣಸರಾಯಣ ಶರಣಾಗತರಕ್ಷಣವಿಚಕ್ಷಣ ಸಕಲಕಲಾಪ್ರವೀಣ ಬಿರುದೆಂತೆಂಬರಗಂಡ ಲೋಕೈಕವೀರ ಭೂರಿತುರುಷ್ಕಶುಷ್ಕವನದಾವಾನಲ ಮರಾಟಝಾಟಮೇಘಚ್ಚಟಾವಿಘಟನನಿರಾಘಾಟ ಪ್ರಳಯಕಾಲಜಂಝನಿಲ ಪಾಂಡ್ಯಮಂಡಲಾಧಿಪನೇತಂಡವಿಲುಂರನಕ೦ರರೀರವ ಮಲೆಪ ನೃಸಮದಮರ್ದನ ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರಪ್ರೌಢವ್ರುತಾಪನವ್ರ ತಿಮವೀರನರಸತಿ ಶ್ರೀಚಿಕದೇವಮಹಾರಾಜಕೃಪಾಪರಿಪಾಲಿತ ಶ್ರೀತಿರುಮಲೆಯಾರ್ಯವಿರ ಚಿತಮಪ್ಪ ಚಿಕದೇವರಾಜವಿಜಯಮಹಾಪ್ರಬಂಧದೊಳ್. ಈ ಗ್ರಂಥವು ಕಾವ್ಯಸರಣಿಯಲ್ಲಿ ಮೈಸೂರುಚರಿತ್ರೆಯನ್ನು ತಿಳಿಸು ವುದರಿಂದ ಮೈಸೂರುಚರಿತ್ರವನ್ನು ಬರೆವವರಿಗೆ ಸಹಾಯಕವಾಗಿದೆ; ಬಂಧ ವೂ ಪ್ರೌಢವಾಗಿದೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆ ಯುತ್ತೇವೆ- ಕವಿಗಳ ಮಹಿಮೆ ಕಡುಪಿ೦ ಕೂರಾನೆ ಕಾಱಚಡವಿಬಜಿಸಿಡಿಮಿಂಚೆಂಬಿವೆಲ್ಲ೦ | ಪಡೆಗುಂ ನೋಳರ್ಗೆ ಮೇಣುಬ್ಬಿಗದೆದವನವೇ ಮತ್ತೆ ಮೊಳಬ್ಬದೊಳ್ ಬಂ || ದೊಡನೆಳ್ಳಂ ಪೆತ್ತುಮಾಱು೦ ಸಹೃದಯಹೃದಯಾಹ್ಲಾದಮಂ ನಾಡೆಯೆಂತಾ | ದೊಡಮಳ್ಳೇಂ ಕಬ್ಬಿಗರ್ ತಾಮಘಟಿತಘಟನಾನೂತನಬ್ರಹ್ಮರಲ್ತೆ ||