ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ]

                             ಚಿಕ್ಕು ಪಾಧ್ಯಾಯ 

ಟದ ಸೊಂಪೋ ಬಿಣ್ಣುವೆತೊಪ್ಪುವ ಸಕಲಜನಾನಂದವೋ ಎಂಬಿನಂ ಸಂ | ಮದದಿಂ ಶ್ರೀಚಿಕ್ಕ ದೇವಂ ತಳೆದೆಸೆದನಿಳಾಚಕ್ರಮಂ ವಿಕ್ರಮಾಂಕಂ ||

                              ಅತದ್ಗುಣಾಲಂಕಾರ 

ಏತೆರದವರೊಡನಾಡುವ | ರಾತೆರಮವರಪ್ಪರೆಂಬುದಿದು ನಾಳ್ನುಡಿ ಕೇಳ್ | ಭೀತರೆರ್ದೆವೊಕ್ಕು ನೀಂ ನಿ | ರ್ಭೀತಿಯೊಳಿರ್ಪಂದಮೆಂತು ಚಿಕದೇವೇಂದ್ರಾ ||

                              ಸಂದಿಗ್ಧ ಸಂಕರ 

ಸಮದೃಪಫ್ಟಿಯೆನಿಸೆ ಶಂಕರ | ನಮರೇಂದ್ರಂ ಗೋತ್ರವೈರಮಂ ಕಳೆದಿರೆ ಚಂ | ದ್ರಮನಮಲನೆನಿಸೆ ನಿನ್ನೊಳ್ | ಸಮಮೆನಿಸಲ್ಕಾರ್ಪರಂದು ಚಿಕದೇವೇಂದ್ರಾ ||

                              ಚಿಕ್ಕು ಪಾಧ್ಯಾಯ 1672 

ಈತನು ನಮಗೆ ತಿಳಿದಮಟ್ಟಗೆ (1) ಅಕ್ಷರಮಾಲಿಕಾಸಾಂಗತ್ಯ' (2) ಅಮರುಕಶತಕ, (3) ಕಮಲಾಚಲಮಾಹಾತ್ಮ್ಯ, (4) ಕಾಮಂದಕ ಟೀಕೆ, (5) ಚಿಕ್ಕದೇವರಾಜಶೃಂಗಾರಸದಗಳು, (6) ಚಿತ್ರಶತಕಸಾಂಗತ್ಯ, (೧) ತಿರುವಾಯ್ಯೊಳಿ ಟೀಕೆ, (8) ದಿವ್ಯಸೂರಿಚರಿತ್ರೆ, (9) ನೀತಿಶತಕದ ಸಾಂಗತ್ಯ, (10) ಪಶ್ಚಿಮರಂಗಮಾಹಾತ್ಮ್ಯ, (11) ಪಶ್ಚಿಮರಂಗಸಾಂಗತ್ಯ, (19) ಪುರುಷವಿರಹದಸಾಂಗತ್ಯ (13) ಯದುಗಿರಿಮಾಹಾತ್ಮ್ಯ (14) ಯಾದವಗಿರಿಮಾಹಾತ್ಮ್ಯ (15) ರಂಗಧಾಮಸ್ತುತಿಸಾಂಗತ್ಯ, (16) ರಂಗ ಸ್ವಾಮಿಯ ಶೃಂಗಾರಸೂತ್ರೋದಾಹರಣೆ, (17) ರುಕ್ಮಾಂ ಗದಚರಿತೆ, (78) ವಿಷ್ಣು ಪುರಾಣ (ಚಂಪು), (19) ವಿಷ್ಣು ಪುರಾಣ (ಗದ್ಯ), (20) ವೆಂಕಟ ಗಿರಿ ಮಾಹಾತ್ಮ್ಯ, (21) ವೈದ್ಯಾಮೃತ ಟೀಕೆ, (22) ಶುಕಸಪ್ತತಿ, (23) ಶೃಂಗಾರಶತಕದ ಸಾಂಗತ್ಯ, (24) ಶೃಂಗಾರಸೂತ್ರೋದಾಹರಣೆ, (25) ಶೇಫಧರ್ಮ, (26) ಶ್ರೀರಂಗಮಾಹಾತ್ಮ್ಯ, (27) ಸಾತ್ವಿಕಬ್ರಹ್ಮವಿದ್ಯಾವಿ ಲಾಸ, (28) ಹಸ್ತಿಗಿರಿಮಾಹಾತ್ಮ್ಯ , ಈ ಗ್ರಂಧಗಳನ್ನು ಬರೆದಿದ್ದಾನೆ. ಅಲ್ಲದೆ ಅರ್ಥಪಂಚಕ, ತತ್ವತ್ರಯ, ರಂಗನಾಯಕ ರಂಗನಾಯಕೀಸ್ತುತಿ, ಶೃಂಗಾರದ ಹಾಡುಗಳು, ಈ ಗ್ರಂಧಗಳನ್ನೂ ಬರೆದಿರುವಂತೆ ತೋರುತ್ತದೆ.

     ಇವನು ಶ್ರೀವೈಷ್ಣವಕವಿ; ಯಜುರೈದಿ; ಪೌರುಕುತ್ಸಗೋತ್ರದ ವನು; ಆಪಸ್ತಂಬ ಸೂತ್ರದವನು;ಇವನ ಕುಲದೇವತೆ ಕಾಂಚೀವರದರಾಜ;