468 ಕರ್ನಾಟಕ ಕವಿಚರಿತೆ [17 ನೆಯ ಇವನ ಸ್ಥಳ ತ್ರಿಕದಂಬಪುರ ಅಥವಾ ತೆರಕಣಾಂಬಿ, ತನ್ನ ಪರಂಪರೆಯನ್ನು ಹೀಗೆ ಹೇಳಿಕೊಂಡಿದ್ದಾನೆ...ಅಲ್ಲಾಳನಾಥ; ಮಗ ಆರ್ಯ ಮಗ ವರದಕವಿ; ಮಗ ಕರ್ಣಾಟಭಾಷಾಚದುರ ದೇವರಾಚಾರ್ಯಕವಿ; ಇವನ ತಮ್ಮ ಕವಿಕ್ಷ್ಮಾಪಾಲಕ ರಂಗಾರ್ಯ ಪಂಡಿತ; ಇವನ ಹೆಂಡತಿ ನಾಚ್ಛಾರಮ್ಮ' ಮಕ್ಕಳು ಯಮಳರು ಲಕ್ಷ್ಮೀಪತಿದೇವರಾಜರು; ಈ ಲಕ್ಷ್ಮೀಪತಿಯೆಂಬವನೇ ಚಿಕ್ಕುಪಾಧ್ಯಾಯಕವಿ, ಇವನಿಗೆ ಇಬ್ಬರು ಹೆಂಡಿರು, ಇವನು ಮೈಸೂರು ರಾಜನಾದ ಚಿಕ್ಕದೇವರಾಜನಲ್ಲಿ (1672-1704) ಕರಣಿಕಾಗ್ರೇಸರನಾಗಿಯೂ ಮಂತ್ರಿಯಾಗಿಯೂ ಇದ್ದನು. ಅಷ್ಟೈಶ್ವರ್ಯಾಷ್ಟ್ರಪುತ್ರ ಬಹುಧನಸಂಪನ್ನನಾಗಿ ಯಾಚಕಜನಸುರಧೇನುವಾಗಿ ಸ್ವಜನಪರಜನ ಲೋಕಜನಚಿಂತಾಮಣಿಯಾಗಿ ಚಿಕ್ಕದೇವಮಹಾರಾಜೇಂದ್ರದತ್ತಸಕಲ ತಂತ್ರಸ್ವತಂತ್ರನಾಗಿ ಅಧೀತಸಕಲವೇದಶಾಸ್ತ್ರ ಪುರಾಣಮುಖ್ಯನಾನಾವಿಧ ವಿದ್ಯನಾಗಿ ಕವಿತಾವಾಕೃತಿಯಾಗಿ ಹರಿಭಕ್ತಿರಸಾಸ್ವಾದನಪರನಾಗಿ ಇದ್ದನು. ಇವನನ್ನು ಆಶ್ರಯಿಸಿದ ಅನೇಕರು ದೊಡ್ಡ ಪದವಿಯನ್ನು ಪಡೆದಂತೆ ತಿಳಿಯುತ್ತದೆ. "ಪಟ್ಟೂ ರಾಭಿಧಾನಸತ್ಕುಲದೀಪ” ಎಂದು ಹೇಳಿಕೊಂಡಿದ್ದಾನೆ. ಯದುಗಿರಿ ಮಾಹಾತ್ಮದಲ್ಲಿ ಕಡಾಂಬಿಸಿಂಗರಾಚಾರ್ಯನನ್ನೂ ಹಾತ್ಮದಲ್ಲಿ ಕಡಾಂಬಿಲಕ್ಷ್ಮಣಾಚಾರ್ಯನನ್ನೂ ಸ್ತುತಿಸಿದ್ದಾನೆ. ಇವರು ಇವನ ಗುರುವಂಶದವರಾಗಿರಬಹುದು. ಹಸ್ತಿಗಿರಿಮಾಹಾತ್ಮವನ್ನು ಶಕ 1601 ನೆಯ ಕಾಳಯುಕ್ತಿಯಲ್ಲಿಯೂ(1679), ಕಮಲಾಚಲಮಾಹಾತ್ಮವನ್ನು ಶಕ 1603 ನೆಯ ರೌದ್ರಿಯಲ್ಲಿಯೂ (1680), ರುಕ್ಮಾಂಗದಚರಿತೆಯನ್ನು ಶಕ 160 + ನೆಯ ದುರ್ಮತಿಯಲ್ಲಿಯೂ (1681) ವಿಷ್ಣುಪುರಾಣವನ್ನು ಶಕ [6]3 ನೆಯ ಪ್ರಮೋದದಲ್ಲಿಯೂ (1691) ಬರೆದಂತೆ ತಿಳಿಯುತ್ತದೆ. ನಮಗೆ ದೊರೆತ ದಿವ್ಯ ಸೂರಿಚರಿತೆಯ ಒಂದು ಪ್ರತಿಯ ಕೊನೆಯಲ್ಲಿ ಚಿಕ್ಕದೇವರಾಯನ ಮಹಿಷಿಯಾದ ಗೌರಮ್ಮಣ್ಣಿಯ ಆಜ್ಞಾನುಸಾರವಾಗಿತಿಮ್ಮಯ್ಯಂಗಾರ್ಯನಿಂದ ವಿರೋಧಿಕೃತುವರ್ಷದಲ್ಲಿ (1679) ಪ್ರತಿಮಾಡಲ್ಪಟ್ಟಿತೆಂದು ಹೇಳಿರುವುದರಿಂದ ಈ ಗ್ರಂಥವು ಆ ವರ್ಷದಲ್ಲಿಯೋ ಅಥವಾ ಅದಕ್ಕೆ ಹಿಂದೆಯೂ ರಚಿತವಾಗಿರಬೇಕು, ಈ ವರ್ಷವನ್ನೇ ಕವಿಯ ಕಾಲವಾಗಿ ಮೇಲೆ ಕೊಟ್ಟಿದ್ದೇವೆ. ಪೂರ್ವ ಕವಿಗಳಲ್ಲಿ ವ್ಯಾಸ, ವಾಲ್ಮೀಕಿ, ಶುಕ, ರುದ್ರಭಟ್ಟ, ಮಾಘ,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೫೩
ಈ ಪುಟವನ್ನು ಪರಿಶೀಲಿಸಲಾಗಿದೆ