ಈ ಪುಟವನ್ನು ಪರಿಶೀಲಿಸಲಾಗಿದೆ

Y೦ ಕರ್ಕಾಟಕಕವಿಚರಿತ [17 ನೆಯ ಹುಟ್ಟಿದನು; ಅವನ ಮಕ್ಕಳು ತಿಮ್ಮರಾಜ, ಕೃಷ್ಣರಾಜ, ಚಾಮರಾಜ, ಈ ತಿಮ್ಮರಾಜನು 'ಬಿರುದೆಂತೆಂಬ ಅವನಿವರ ಗಂಡ' ಎಂಬ ಬಿರುದನ್ನು ಹೊಂದಿ ಬಹಳ ಪ್ರಖ್ಯಾತನಾಗಿದ್ದನು. ಅವನ ತಮ್ಮ ಚಾಮರಾಜನು ಬಹಳ ಪರಾಕ್ರಮಶಾಲಿ ; ಎರದಿಮ್ಮರಾಜನ ಮಗ ರಾಮರಾಜನ ದಳವಾಯಿಯಾದ ರೇಮಟಿ‌ವೆಂಕಟನನ್ನು ಯುದ್ಧದಲ್ಲಿ ಸೋಲಿಸಿದನು. ಇವನಿಗೆ ಒಂದಾವೃತ್ರಿ ಸಿಡಿಲು ಹೊಡೆದು ಚಾಮುಂಡಿಯ ಕೃಪೆಯಿಂದ ಪ್ರಾಣಕ್ಕೆ ಅಪಾಯವಿಲ್ಲದೆ ತಲೆಯ ಕೂದಲುಮಾತ್ರ ಹೋಯಿತು. ಇದರಿಂದ ಇವನಿಗೆ ಬೋಳಚಾಮರಾಜ ಎಂಬ ಹೆಸರಾಯಿತು. ಇವನ ಮಕ್ಕಳು ರಾಜನೃಪ, ಬೆಟ್ಟದಚಾಮರಾಜ, ದೇವರಾಜ, ಚೆನ್ನರಾಜ. ಈ ರಾಜನೃಪನು ತನಗೆ ಇದಿರಾರೂ ಇಲ್ಲ ಎಂದು ಉದ್ಧತನಾಗಿ ಯುದ್ಧಕ್ಕೆ ಬಂದ ಕಾರುಗಹಳ್ಳಿಯ ದೊರೆಯನ್ನು ಸೋಲಿಸಿ ತನ್ನ ಕುದುರೆಯ ಚಾಟಿಯಿಂದ ಅವನ ನಾಸಾಚ್ಛೇದವನ್ನು ಮಾಡಿದನು; ತಿರುಮಲರಾಜನನ್ನು ಉಪಾಯದಿಂದ ಗೆದ್ದು ಓಡಿಸಿ ಶ್ರೀರಂಗಪಟ್ಟಣವನ್ನು ತನ್ನ ವಶು ಮಾಡಿಕೊಂಡನು; ಅಲ್ಲದೆ ಅನೇಕಶತ್ರುರಾಜರನ್ನು ಸೋಲಿಸಿ ಅವರ ರಾಜ್ಯವನ್ನು ಸ್ವಾಧೀನಮಾಡಿಕೊಂಡು ಉನ್ನತಿಯನ್ನು ಪಡೆದನು;

ತಿರುಪತಿಯ ಶ್ರೀನಿವಾಸದೇವರ ಅಜ್ಞೆಯಿಂದ ತನ್ನಲ್ಲಿಗೆ ಬಂದ ಒಬ್ಬ ಕುರಡಸ್ತ್ರೀಗೆ ಒಂದು ಕಣ್ಣನ್ನು ಕೊಟ್ಟು ಮಹಿಮೆಯನ್ನು ಮೆರೆದನು' ಅಂತ್ಯ ಕಾಲದಲ್ಲಿ ಮೇಲುಗೋಟೆಯ ನಾರಾಯಣಸ್ವಾಮಿಯ ದೇವಾಲಯದಲ್ಲಿ ಹಯಾರೂಢನಾಗಿ ಒಂದಂತೆ ಎಲ್ಲರಿಗೂ ಕಾಣಿಸಿಕೊಂಡು ದೇವರ

ಪಾದದಲ್ಲಿ ಐಕ್ಯವಾದನು. ಇವನ ಮಕ್ಕಳು ನರಸರಾಜ, ಇಮ್ಮಡಿರಾಜ. ಇಮ್ಮಡಿ ರಾಜನು ಬೇಲೂರು, ಬೆಂಗಳೂರು ಈ ಸ್ಥಳಗಳ ಪ್ರಭುಗಳಿಗೆ ಭೀತಿಯನ್ನು ಉಂಟು ಮಾಡಿದನು. ನರಸರಾಜರ ಮಗನಾದ ಚಾಮರಾಜನು ಜಗದೇವ, ಮದ್ದೂರವಿಟ್ಟ ಣ್ಣ, ತಲಕಾಡಸೋಮನೃಪ, ಬೈರಭೂಸ ಇವರುಗಳನ್ನು ಸೋಲಿಸಿದನು. ರಾಜನೃಪನ ತಮ್ಮನಾದ ಬೆಟ್ಟದಚಾಮರಾಜನ ಮಗ ಕಂಠೀರವನರಸರಾಜನು ರಣಧುಲ, ಕಲೂರಪ್ರತಾಸ, ಮಾಗಡಿಯದೊರೆ, ಹೊಸೂರಪ್ರಭು, ಪಿರಿಯಪಟ್ಟಣದದೊರೆ, ಮಧುರೆರಾಜ, ತುರುಷ್ಕರು ಇವರುಗಳನ್ನು ಸೋಲಿಸಿದನು. ರಾಜನೃಪನ ಮತ್ತೊಬ್ಬ ತಮ್ಮನಾದ ದೇವರಾಜನಿಗೆ ನಾಲ್ವರು ಮಕ್ಕಳು-ದೊಡ್ಡದೇವರಾಜ, ದೇವರಾಜ, ಚಿಕ್ಕದೇವರಾಜ, ಮರಿದೇವರಾಜ. ದೊಡ್ಡ ದೇವರಾಜನ ಅನಂತರ ಅವನ ತಮ್ಮ ದೇವರಾಜನು ಆಳಿದನು. ಇವನು ಕೆಳದಿಯದೊರೆ, ಕೆಂಪೆಗೌಡ, ಪಾಂಡ್ಯರು, ಕೊಂಗರು, ತುರುಷ್ಕರು ಇವರುಗಳನ್ನು ಅಡಗಿಸಿದನು. ದೊಡ್ಡದೇವರಾಜನ ಮಕ್ಕಳು