489 ಶತಮಾನ ಚಿಕ್ಕು ಪಾಧ್ಯಾಯ ಬಾಣ, ಚಂದ್ರ, ಭೋಜ ಇವರುಗಳನ್ನು ಕವಿ ಸ್ಮರಿಸಿದ್ದಾನೆ. ತನ್ನ ಗುಹಾದಿಗಳನ್ನೂ ಪಾಂಡಿತ್ಯವನ್ನೂ ಈ ಪದ್ಯಗಳಲ್ಲಿ ಹೇಳಿದ್ದಾನೆ-- ಚತುರೋಪಾಯಸಮರ್ಧನತ್ಯಧಿಕಶಾಸ್ತ್ರಜ್ಞಾನಿ ವಿದ್ಯಾಸಮಂ || ಚಿತಗಾತ್ರಂ ಕವಿತಾವಿಧಾನನಿಪುಣಂ ಸಾಹಿತ್ಯದೊಳ್ ನೂತ್ನಗೀ || ಪ್ರತಿ ಮಾತ್ಸವಿರ್ಯನಿವರ್ಜಿತಂ ಕೃತಬುಧಕ್ಷೇಮಂ ಕೃತಜ್ಞಂ ಪರೇಂ | ಗಿತರೀತಿಜ್ಞನುದಾರಕೀರ್ತಿ ಪತಿಕಾರ್ಯೈಕ ಪ್ರಧಾನೋತ್ತಮಂ | ಅಗಣಿತಶಾಸ್ತ್ರನುಂ ಗಣಿತಶಾಸ್ತ್ರ ವಿಶಾರದನಾಗಿಯುಂ ಬುಧರ್ | ಪೊಗನೇಕವಾಕ್ಯಕುಶಲಜ್ಞನುಮಾಗಿಯುಮೇಕವಾಕ್ಯನುಂ || ಮಿಗೆ ನಯಶೀಲನುಂ ಎನಯಶೀಲನುಗಿಮಾಯುಮೇಂ ವಿಚಿತ್ರಮೋ|| ಜಗದೊಳೆ ಚಿಕ್ಕುಪ್ರಾಧ್ಯ ಮಣಿಯ ಪ್ರತಿಮಂ ಪ್ರತಿವಂತನಾಗಿಯುಂ | - ಇವನು ಬರೆದಿರುವ ಹಲವುಗ್ರಂಧಗಳ ಆದಿಭಾಗದಲ್ಲಿ ತನ್ನ ಪೋಫಕನಾದ ಚಿಕ್ಕದೇವರಾಯನ ವಂಶಾವಳಿಯನ್ನೂ ವಿಜಯಗಳನ್ನೂ ವಿಸ್ತಾರವಾಗಿ ಹೇಳಿದ್ದಾನೆ. ಇವುಗಳನ್ನು ಸಂಗ್ರಹಿಸಿ ಇಲ್ಲಿ ಬರೆಯುತ್ತೇವೆ. - ಶ್ರೀಮನ್ನಾರಾಯಣನ ನಾಭೀಕಮಲದಲ್ಲಿ ಬ್ರಹ್ಮನು ಹುಟ್ಟಿದನು ; ಅವನಿಂದ ಅತ್ರಿ, ಅತ್ರಿಯ ನೇತ್ರದಿಂದ ಚಂದ್ರನು, ಅವನ ಮಗ ಬುಧ, ಅವನ ಮಗ ಪುರೂರವ, ಅವನ ಮಗ ಆಯು, ಅವನ ಮಗ ನಹುಷ, ಅವನ ಮಗ ಯಯಾತಿ, ಅವನ ಮಗ ಯದುರಾಜ, ಅವನ ವಂಶದಲ್ಲಿ ಶೂರನು ಹುಟ್ಟಿದನು, ಅವನ ವಗ ವಸುದೇವ, ಅವನ ಮಗ ಕೃಷ್ಣ ಈತನು ತನ್ನ ದ್ವಾರಾವತೀಪುರವು ಸಮುದ್ರದಲ್ಲಿ ಮುಳುಗಿಹೋಗುವಕಾಲದಲ್ಲಿ ತನ್ನ ಅನುಜಾತೆಯಾದ ಚಾಮುಂಡಿಯನ್ನು ಕುರಿತು "ನಮ್ಮ ಕುಲದೈವವು ಯದ.ಶೈಲದಲ್ಲಿ (ಮೇಲುಗೋಟಿ) ಇರುವುದು. ನೀನು ನನ್ನ ವಂಶದ ದೊರೆಗಳನ್ನು ಆ ಪರ್ವತದ ದಕ್ಷಿಣಭಾಗದಲ್ಲಿ ನಿಲ್ಲಿಸಿ ಅವರಿಗೆ ಇಷ್ಟಾರ್ಧವನ್ನು ಕೊಡು” ಎಂದು ಹೇಳಲು, ಅವಳು ಆ ವಂಶೋದ್ಭವರಾದ ಕೆಲವರನ್ನು ಕರೆದುಕೊಂಡು ಒಂದು ಯದುಗಿರಿಯ ದಕ್ಷಿಣಭಾಗದಲ್ಲಿ ನಿಲ್ಲಿಸಿ ತಾನು ಅಲ್ಲಿಯ ಒಂದು ಬೆಟ್ಟದಮೇಲೆ ನೆಲಸಿ ಅವರನ್ನು ಕಾಪಾಡುತ್ತ ಇದ್ದಳು, ಹೀಗೆ ಕೃಷ್ಣನ ಅಜ್ಞೆಯಿಂದ ಬಂದ ಯಾದವರು ತಮ್ಮ ಕುಲದೇವತೆಯಾದ ಶ್ರೀಮನ್ನಾರಾಯಣನ ಸೇವಾಧುರಂಧರರಾಗಿ ಕಾವೇರಿಯ ದಕ್ಷಿಣದಲ್ಲಿರುವ ಮಹಿಷಪುರದಲ್ಲಿ ನೆಲಸಿ ಚಾಮುಂಡಿಕಾನುಗ್ರಹಪಾತ್ರರಾಗಿ ಆಳುತ್ತಿದ್ದರು. ಅವರ ವಂಶದಲ್ಲಿ ಬೆಟ್ಟದ ಚಾಮರಾಜನು
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೫೪
ಈ ಪುಟವನ್ನು ಪರಿಶೀಲಿಸಲಾಗಿದೆ