494
ಕರ್ಣಾಟಕ ಕವಿಚರಿತೆ [17ನೆಯ
ರಾಜನಿಂದ ಶ್ರೀರಂಗಪಟ್ಟಣವನ್ನು ಸ್ವಾಧೀನಪಡಿಸಿಕೊಂಡನು; ಯದುಗಿರಿನಾರಾಯಣ ದೇವಸ್ಥಾನದಲ್ಲಿ ಮುಕ್ತಿಗೆ ಸಂದನು, ದೇವರಾಜನ ಮಕ್ಕಳು ದೊಡ್ಡದೇವರಾಜ, ಚಿಕ್ಕದೇವರಾಚಿದೇವರಾಜ, ಮರಿದೇವರಾಜ. ದೊಡ್ಡ ದೇವರಾಜನ ಪಟ್ಟಮಹಿಷಿ ಅಮೃತಾಂಬೆ; ಮಕ್ಕಳು ಚಿಕ್ಕದೇವರಾಜ, ಕಂಠೀರವರಾಜ. ದಡ್ಡದೇವರಾಜನು 14ವರ್ಷ ಆಳಿದನು; ಬಳಿಕ ಚಿಕ್ಕದೇವರಾಜನು ಪಟ್ಟಕ್ಕೆ ಬಂದನು. ಈತನು ಮಧುರಾಪುರಿಯ ಚೊಕ್ಕಲಿಂಗನಾಯಕ, ಶಾಂದಮಂಗಲದ ರಾಮಚಂದ್ರನಾಯಕ, ವೇಲಾಪುರದ ವೆಂಕಟನಾಯಕ, ಜಡಕನದುರ್ಗದ ನರಸನಾಯಕ ಇವರುಗಳನ್ನು ಜಯಿಸಿದನು; ಅಂದೂರು, ಕುಂತೂರುದುರ್ಗ, ಮದ್ದಗಿರಿ, ಬೇಲೂರು, ಅನಂತಗಿರಿ, ಮುಟ್ಟಾಂಜಟ್ಟಿ, ಮಳಲಿ, ಪರಮತಿ, ಅರಕಲಗೂಡು, ಜಡಕನದುರ್ಗ ಇವುಗಳನ್ನು ಕೈವಶಮಾಡಿ ಕೊಂಂಡನು. ಗ್ರಂಥಾವತಾರದಲ್ಲಿ ಯದುಗಿರಿನಾರಾಯಣನ ಸ್ತುತಿ ಇದೆ. ಬಳಿಕ ಕವಿ ಯದುಗಿರಿನಾಯಕಿ, ರಂಗನಾಥ, ರಂಗನಾಯಕಿ, ಸರಸ್ವತಿ, ಶಂಖ, ಚಕ್ರ, ಗದೆ, ಶಾರ್ಜ್ಗ, ನಂದಕ, ಅನಂತ, ಗರುಡ, ವಿಶ್ವಕ್ಸೇಸ , 12 ಆಳ್ವಾರುಗಳು, ರಾಮಾನುಜ, ಕಡಾಂಬಿಲಕ್ಷ್ಮಣಾಚಾರ್ಯ ಇವರುಗಳನ್ನು ಪರಿವಿಡಿಯಿಂದ ಸ್ತುತಿಸಿದ್ದಾನೆ. ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ---- ಇದು ವಿನಮದಮರವರಸರಸಿಜಭವಭವಮುಖಸಾರಸಮುದಯಸುರುಚಿರಮಳಕಟನಿಕರಖಚಿತಮಣಿನಿಚಯರುಚಿಕಲಿತಯದುಗಿರಿಸದನನಾರಾಯಣಮ್ಮದುಪದಲಲಿತಜಲರುಹಜನಿತಮಕರಂದರಸಾಸ್ವಾದನನಿರತಮಧುಕರಾಯಮಾನ ಬಿರುದೆಂತೆಂಬರಗಂಡ ಯದುಕುಲಶರಧಿರಾಕಸುಧಾಕರನಾದ ಚಿಕ್ಕ ದೇವಮಹಾರಾಯನ ಕರುಣಾಕಟಾಕ್ಷಾವಲೋಕನಮುದಿತ ಚಿಕ್ಕು ಪಾಧ್ಯಾಯಪ್ರೇರಿತ ಕವಿತಿಮ್ಮ ವಿರಚಿತಕರ್ಣಾಟಕವಚನರಚನೆಯ ಯಾದವಗಿರಿಮಹಾತ್ಮ್ಯದೊಳ್ ಇವನ ಬಂಧವು ಧಾರಾಳವಾಗಿಯೂ ಮನೋಹರವಾಗಿಯೂ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ---
ಮೇರು ಬಳಸಿ ಬರುತ್ತುಮಿರ್ಪ ಹಿಮದೀಧಿತಿ ದೀಪಿಕೆ ಚಾರು ತಾರಕಾ |
ವಳಿಯ ವಿಕಾಸಮಾದ ಕುಸುಮವ್ರಜನೊಪ್ಪುವ ಜಾಹ್ನ ವೀನದೀ || ಜಳಮಳಷೇಕವಾರಿ ಘನರಾವಮೆ ಘಂಟೆಯದಾಗೆ ದೇವಸಂ |