ತಿಮ್ಮ ಕವಿಕುಳಮಿರದರ್ಚಿಸಿಟ್ಟ ಘನಲಿಂಗಮೆನಲ್ ಕನಕಾದ್ರಿ ರಂಜಿಕುಂ|| ಸಾಯಂಕಾಲ ಪುಳಿನದ ತಾಣದಲ್ಲಿ ಸರಸೀರುಹಪತ್ರನಿಕಾಯದಲ್ಲಿ ತ | ಣ್ಗೋಳದೆಡೆಯಲ್ಲಿ ಕುಂಜತದಲ್ಲಿ ಲತಾವಳಿಯಲ್ಲಿ ಕಾಣದು | ತವಿಲುತೊಅಲ್ದು ಸುತ್ತಿ ಪರಿದಾಡಿ ಪಲುಂಬಿ ಪೊರಳು ಕಂದಿಯು | ಮ್ಮಳಿಸಿತದೊಂದಗಲ್ದ ಪೊಣರ್ವ ಕ್ಕಿ ನಿಜಾಂಗನೆಯಂ ನಿಶಾದಿಯೊಳ್ | ಚಂದ್ರಕಳಂಕ ವರವಸುಪೂರ್ಣಮಾಡುಮಾದ ಶಶಿಮಂಡಲ ಮಂಜಂಳರೌಪ್ಯ ಕುಂಭಮಂ | ಪರಿಯದೆ ಪತ್ತಿ ಕಾದ ಕರಿವಾವುನಭೋಂಬುಧಿಜಾತಶೀತಭಾ | ಸುರಕರವುಂಡರೀಕಕೆಳಗಿರ್ಪಳಿ ಸೋಮಸುರೇಗಂಡದೊಳ್ | ಸುರಿವ ಮದಾಂಬುಧಾರೆಯೆನೆ ಕಣ್ಗೊ ಳಿಸಿರ್ದುದು ಚಂದ್ರಲಾಂಛನಂ || ಪ್ರಾತಃಕಾಲ ಮಿಸುನಿಯ ಕರಡಗೆಯೊಳ್ ಬಿಂ | ಬಿಸುತಿರ್ಪ ಮರೇಂದ್ರನೀಲಸರಮಂ ಭರದಿಂ | ಬಿಸಜಿನಿ ಪತಿಗೀವಂತವೊ | ಲೆಸೆಗುಂ ವಿಕಚಾಬ್ಜದಿಂದೆ ನೆಗೆವಳಿವಿಸರಂ || ಸೂಳಗೇರಿ ನೋಟದ ಪೇಟೆಯುತ್ಸವದ ಬೀಡು ಬೆಡಂಗಿನ ತಾಣಮಾವಗಂ | ಬೇಟದ ಮಂದಿರಂ ಗಮಕದಂಗಣಮೊಳ್ಳಿನ ಸಜ್ಜೆ ವಶ್ಯ ಮಂ || ಪಾಟಿಪ ಶಾಲೆ ಮೆಲ್ನಗೆಯ ಚಾವಡಿ ರೌಳಿಯ ಗೊತ್ತು ಮೋಹದು | ಬಾ೯ಟದ ಬೀದಿ ತಾನೆನೆ ವಿರಾಜೆಸಿತಾಗಣಿಕಾ೦ಗನಾಲಯಂ || ಚಿಕ್ಕದೇವರಾಯನ ಕೀರ್ತಿ ಪರಿಸಂಧಿಕ್ಷಿತಿರಾಡ್ಯಶೋರುಚಿರಕಕರ್ಪೂರಂಗಳಿಂ ತಂದಿಳಾ | ವರವಂದ್ಯಂ ಚಿಕದೇವಭೂಪತಿಗೆ ತತ್ಕೀರ್ತಿಜ್ವಲತ್ಕಾಂತೆ ವಿ | ಸ್ಪುರಿಸಲ್ ಹೊತ್ತಿಸಿ ತತ್ಪ್ರತಾಪಶಿಖಿಯೊಳ್ ನೀರಾಂಜನಪ್ರಾಯ ಮಾ ಗಿರೆಯುದ್ಯೋಗಿಸಿ ಮಂಗಳಾರತಿಯನೆತ್ತುತ್ತಿರ್ದಪಳ್ ಸಂತತಂ | ಶಾರ್ಙ ಚಾಪಂ ಶಮಿತಾರಿವ್ರಜ | ಕೋಪಂ ವಿ ಸ್ಫಾರ ಮಾಣ ವೈಕುಂಠಮಹಾ || ಟೋಪಂ ಸಂಹೃತನತಜನ | ತಾಪಂ ಶಾರ್ಜ್ಗಾಖ್ಯಮೆಮಗೆ ಕುಡುಗತಿಮುದಮ |
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮೦
ಈ ಪುಟವನ್ನು ಪರಿಶೀಲಿಸಲಾಗಿದೆ