ಹೊಯ್ಸಳರು-ಒಂದನೆಯ ಬಲ್ಲಾಳನ ಕಾಲದಲ್ಲಿ (1100-1106) ಅಭಿನವಪಂಪನೂ ಕ೦ತಿಯೂ ಇದ್ದಂತೆ ತಿಳಿಯುತ್ತದೆ, ವಿಷ್ಣುವರ್ಧನನ ಆಳಿಕೆಯಲ್ಲಿ (1111-1141) ರಾಜಾದಿತ್ಯನು ಕ್ಷೇತ್ರಗಣಿತವೇ ಮೊದಲಾದ ಗ್ರಂಥಗಳನ್ನು ಬರೆದನು, ಜನ್ನನ ತಂದೆಯಾದ ಸುಮನೋಬಾಣನು 1ನೆಯ ನಾರಸಿಂಹನ (1141-1173) ಕಟಕೋಪಾಧ್ಯಾಯನಾಗಿದ್ದನು ಇದೇ ರಾಜನ ಕರಣಿ ಕನಾದ ಹರೀಶ್ವರನೂ, ಮಂತ್ರಿಯಾದ ಕರೆಯ ಪದ್ಯ ರಸನೂಗ್ರಂಧಗಳನ್ನು ಬರೆದಿದ್ದಾರೆ, ಎರಡನೆಯಬಲ್ಲಾಳನ (1173-1220) ಮಂತ್ರಿಯಾದ ಬಚಿರಾಜನು ಕವಿತೆಯಲ್ಲಿ ಪೊನ್ನನಿಗ ಸಮಾನನಾಗಿದ್ದ ನೆಂದು ಒಂದು ಶಾಸನದಿಂದ ತಿಳಿಯುತ್ತದೆ, ಅದೇ ರಾಜನ ಸಜ್ಜೆ ವಳ್ಳನಾದ ಪದ್ಮನಾಭನ ಇಷ್ಟಾನುಸಾರವಾಗಿ ಅರ್ಧನೇಮೀಯನ್ನು ಬರೆದಂತೆ ನೇಮಿ ಚಂದ್ರನು ಹೇಳುತ್ತಾನೆ. ಅದೇ ರಾಜನ ಮಂತ್ರಿಯಾದ ಚಂದ್ರಮೌಳಿ ಯಿಂದ ಪೋಷಿತನಾಗಿ ರುದ್ರಭಟ್ಟನು ಜಗನ್ನಾಥವಿಜಯವನ್ನು ಬರೆ ದನು. ಅದೇ ದೊರೆಯ ಮತ್ತೊಬ್ಬ ಮಂತ್ರಿಯಾದ ವಸುದೈಕಬಾಂಧವ ರೇಚರಸನ ಪ್ರೇರಣೆಯಿಂದ ಆ ಆಚಣ್ಣನು ವರ್ಧಮಾನ ಪುರಾಣವನ್ನು ಬರೆ ದಂತೆ ತಿಳಿಯುತ್ತದೆ, ಇದೇ ರಾಜನಿಂದ ಜನ್ನನು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದನು. ಎರಡನೆಯ ನಾರಸಿಂಹನ (1220) -1235) ಮಂ ತ್ರಿಯಾದ ಪೋಲಾಳ್ಳದಂಡನಾದನು ಹರಿಚಾರಿತ್ರವನ್ನು ರಚಿಸಿದನು ಕೇಶಿ ರಾಜನ ತಂದೆಯಾದ ಮಲ್ಲಿ ಕಾರ್ಜುನನು ಸೂಕ್ತಿಸುಧಾರ್ಣವವನ್ನು ಸೋ ಮೇಶ್ವರನ (1233--1251) ವಿನೋದಾಕರ್ಣನಕ್ಕಾಗಿ ಬರೆದಂತೆ ಹೇಳು ತಾನೆ. ಮೂಡಣಚಾಲುಕ್ಯರು~ಗುಣಗಾಂಕವಿಜಯಾದಿತ್ಯನ ಕಾಲದಲ್ಲಿ (844-888) ಗುಣಗಾಂಕಿಯಂ ಎಂಬ ಕರ್ಣಾಟಕ ಛಂದೋ ಗ್ರಂಥವು ಹುಟ್ಟಿದಂತೆ ಹಿಂದೆಯೇ ತಿಳಿಸಿದೆ. ರಾಜರಾಜನ (1022-1063) ಆಸ್ಥಾನ ಕವಿಯಾದ ನನ್ನಳ್ಳಭಟ್ಟನಿಗೆ ಸಹಾಯಕನಾಗಿದ್ದ ನಾರಾಯಣಭಟ್ಟನು ಕನ್ನಡದಲ್ಲಿಯೂ ಕವಿಯಾಗಿದ್ದಂತೆ ತಿಳಿಯುತ್ತದೆ.'
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.