14 ಸಮಕವಿ ಎಂಬ ಬಿರುದು ಹೇಳಿದ ಮೂರನೆಯ ಕೃಷ್ಣ ರಾಜನು (939-943) ಪೊನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದನ್ನು ಕೊಟ್ಟನು. ಚಾಲ-ಕ್ಯರ ಈ ವಂಶಕ್ಕೆ ಸೇರಿದ ಅರಿಕೇಸರಿ ಎಂಬ ಸಾಮಂತ ರಾಜನು ಆದಿಸಂಪನಿಗೆ ಪೊಸಕನಾಗಿದ್ದನು. ಶೈಲಪನು (973-987) ರನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದನ್ನು ಕೊಟ್ಟನು, ಆಹವಮಲ್ಲನ (1042-108} ಆಶ್ರಿತನಾದ ಶ್ರೀಧರಾಚಾರ್ನು ಜಾತಕತಿಲಕವೆಂಬ ಜೋತಿಸ ಗ್ರಂಥವನ್ನು 1049 ರಲ್ಲಿ ಬರೆದಿದ್ದಾನೆ, ಭುವನೈಕಮಲ್ಲನ 1068-1076) ಪಸಾಯಿತನಾದ ಲಕ್ಷ್ಮಣ ಪ್ರಸನ ಕೈಯ ಕೆಳಗೆ ಮಂತ್ರಿ ಯಾಗಿದ್ದ ಕಾಂತಿನಾಥನು ಸುಕುಮಾರಚರಿತವನ್ನು ರಚಿಸಿದನು, ಇದೇ ರಾಜನ ಮಹಾಪ್ರಧಾನನಾದ ಉದಯಾದಿತ್ಯನಲ್ಲಿ ಸಂಧಿವಿಗ್ರಹಿಯಾಗಿದ್ದ ನಾಗನರ್ವಾಚಾರನೇ ಚಂದ್ರಚೂಡಾಮಣಿಶ ತಕವನ್ನು ಬರೆದವನು. ಆಹವಮಲ್ಲನ ಮಗನಾದ ಜಯಸಿಂಹನ ಕೈಯ ಕೆಳಗೆ ಅಧಿಕಾರಿಯಾಗಿದ್ದ ವಾಚಿರಾಜನ ಆಶ್ರಿತನಾಗಿ ಚಂದ್ರ ರಾಜನು ಮದನತಿಲಕವೇ. ಮೊದಲಾದ ಗ್ರಂಧಗಳನ್ನು ಬರೆದನು, ಅದೇ ಆಹವನ್ನಲ್ಲನ ಮಗನೂ ವಿಕ್ರಮಾದಿತ್ಯನ ತಮ್ಮ ನೂ ಆದ ಕೀರ್ತಿವರ್ಮನು ಗೋವೈದ್ಯವನ್ನು ಬರೆದಿದ್ದಾನೆ ಅದೇರಾಜನ ಆಶ್ರಿತನೂ ಕೀರ್ತಿವರ್ಮನ ಮಿತ್ರನೂ ಆದ ಬ್ರಹ್ಮಶಿವನು ಸಮಯಪರೀಕ್ಷೆ, ತ್ರೈಲೋಕ್ಯರಕ್ಷಾಮಣಿಸ್ತೋತ್ರ ಅವುಗಳನ್ನು ರಚಿಸಿದ್ದಾನೆ. ಎರಡನೆಯ ಜಗದೇಕಮಲ್ಲನಲ್ಲಿ (1138 115) 2ನೆಯ ನಾಗವರ್ಮನು ಕಟಕೋಪಾಧ್ಯಾಯನಾಗಿದ್ದನು, ಪಂಚತಂತ್ರ ವನ್ನು ಬರೆದ ದುರ್ಗಸಿಂಹನು ಇದೇ ರಾಜನಲ್ಲಿ ಸಂಧಿವಿಗ್ರಹಿಯಾಗಿದಂತೆ ತಿಳಿಯುತ್ತದೆ ದಾವಣಗೆರೆಯು 41 ನೆಯ ಶಾಸನವನ್ನು ಬರೆದ ಮಧುಸೂದನದೇವನು ಇದೇ ರಾಜನ ಸಾಮಂತನಾದ ಉಚ್ಚಂಗಿಯ ವೀರಪಾಂಡ್ಯನಿಂದ ಪೂಜಿತನಾಗಿದ್ದನು
ಕಾಕತೀಯರು-ಪ್ರತಾಪರುದ್ರನ ಆಸ್ಥಾನದಲ್ಲಿ ರಾಘವಾಂಕನು ಸ್ವರ ಚಿತವಾದ ವೀರೇಶ್ವರ ಚರಿತೆಯನ್ನು ಓದಿ ವಾದಿಗಳನ್ನು ಜಯಿಸಿದಂತೆ ಹೇಳಿದ ಮತ್ತೊಬ್ಬ ಪ್ರತಾಪರುದ್ರನ ಕಾಲದಲ್ಲಿ ಸೋಮೇಶ್ವರಕತಕವನ್ನು ಬರೆದ ನಾಲ್ಕುರಿಕೆ ಸೋಮನಾಥನು ಬಾಳಿದಂತ ತಿಳಿಯುತ್ತದೆ.