ಈ ಪುಟವನ್ನು ಪರಿಶೀಲಿಸಲಾಗಿದೆ

 31

ಳ್ಗೊಳದ ಪಂಡಿತ ದೋರ್ಬಲಿ ಶಾಸ್ತ್ರಿಗಳು, ಮೈಸೂರು ಎಂ.ಎ. ರಾಮಾ ನುಜಯ್ಯಂಗಾರ್ಯರು, ಎಳಂದೂರು ತಾಲ್ಲೂಕು ಅಗರದ ಸುಬ್ಬಾಸಂಗಿ ತರು, ಅಗರದ ನರಸಿಂಹಶಾಸ್ತ್ರಿಗಳು, ಕೊರಟಗೆರೆ ಸಬ್‌ತಾಲ್ಲೂಕು ಅಗ್ರ ಹಾರದ ಪಟೇಲ್: ಈಶ್ವರಯ್ಯನವರು, ಕುಣಿಗಲ್ ಹಿರಿಯಮರದ ಬಸವ ಲಿಂಗಯ್ಯನವರು, ಬೆಂಗಳೂರು ಶಾಸನದ ಇಲಾಖಾ ಬೊಮ್ಮರಸ ಹಂಡಿ ತರು, ಇವರುಗಳಲ್ಲಿದ್ದ ಪುಸ್ತಕಸಂಗ್ರಹಗಳು, ಇವುಗಳಲ್ಲಿ ದೊರೆತ ಪುಸುಕಗಳನ್ನೆಲ್ಲಾ ವರೀಕ್ಷಿಸಿ ನೋಡಿದನು ಅಲ್ಲದೆ ಶ್ರೀಮಂತರು ಕರ್ಣಾ ಟಕಭಾಷಾರತ್ನ ಕರಿಬಸವರಾಸ್ತಿಗಳು, ಮಾಗಡಿ ಕೆ. ರಾಮಸ್ವಾವ್ತಯ್ಯಂಗಾರ್ಯರು, ಮೈಸೂರು ಎಂ.ವಿ ಚಂದ್ರಶೇಖರ ಶಾಸ್ತ್ರಿಗಳು, ಬೆಂಗಳೂರು ಜೀರಿಗೆ ಬಸವಲಿಂಗಪ್ಪನವರು ಇವರುಗಳು ಕಳುಹಿಸಿಕೊಟ್ಟ, ಕೆಲವು ಪುಸ್ತಕಗಳನ್ನು ಪರಿಶೀಲಿಸಿದೆನು.ಇನ್ನು ಕೆಲವರು ಮಿತ್ರರು ತಮ್ಮಲ್ಲಿರುವ ಅಥವಾ ತನಗೆ ತಿಳಿದ ಕೆಲವು ಗ್ರಂಧಗಳ ವಿಷಯವಾಗಿ ಕಳುಹಿಸಿಕೊಟ್ಟ ಸೂಚನೆಗಳನ್ನು ವಿಮರ್ಶಿಸಿದೆನು. ಹೀಗೆ ನಾನು ಪರೀಕ್ಷಿಸಿದ ತಾಳಪತ್ರದ ಪುಸ್ತಕಗಳ ಸಂಖ್ಯೆ ಸುಮಾರು ಒಂದು ಸಾವಿರ ದಮೇಲಿರಬಹುದು. ಮೇಲೆ ಹೇಳಿದ ಎಲ್ಲಾ ಮಹನೀಯರುಗಳ ಉಪಕಾರವೂ ಚಿರಸ್ಮರಣೀಯವಾಗಿದೆ.

       ಈ ಸಂಪುಟದಲ್ಲಿ 15ನೆಯ ಶತಮಾನದ ಆದಿಭಾಗದಿಂದ 17ನೆಯ ಶತಮಾನದ ಕೊನೆಯವರೆಗೆ ಬಾಳೆದ ಸುಮಾರು 350 ಕವಿಗಳ ಚರಿತೆ ಹೇಳದೆ ಈ ಕವಿಗಳಲ್ಲಿ ಸುಮಾರು 160 ಮಂದಿ ವೀರಶೈವರೂ  75 ಮಂದಿ ಜೈನರೂ 60 ಮಂದಿ ಬಾಹ್ಮಣರೂ 5) ಮಂದಿ ಇತರರೂ ಆಗಿ ದ್ದಾರೆ. ಇವರೆಲ್ಲರೂ ಉದ್ದಾಮಕವಿಗಳೆಂದು ಹೇಳಲಾಗುವುದಿಲ್ಲ. ನನ್ನ ತಿಳಿವಳಿಕೆಗೆ ಬಂದ ಪ್ರತಿಯೊಬ್ಬ ಗ್ರಂಥಕರ್ತನ ಹೆಸರೂ ಗ್ರಂಥದಲ್ಲಿ ಇರಬೇಕೆಂಬ ಉದ್ದೇಶದಿಂದ ಎಲ್ಲರನ್ನೂ ಸೇರಿಸಿದ್ದೇನೆ ಹೀಗೆ ಮಾಡದಿದ್ದರೆ ಅನೇಕ ಸಾಧಾರಣ ಕವಿಗಳ ಹೆಸರೇ ಮರೆತುಹೋಗುವುದರಲ್ಲಿ ಸಂಶಯವಿಲ್ಲ. ಈ ಗ್ರಂಥವು ಹಿಂದೆ ತಿಳಿಯದಿದ್ದ ಅನೇಕಕವಿಗಳ ಚರಿತೆಯನ್ನು ಒಳಗೊಂಡಿದೆ. ಈ ವಿಷಯವು ಗ್ರಂಥವನ್ನು ಕ್ರಮವಾಗಿ ಓದಿನೋಡಿದಲ್ಲಿ ಸ್ವತಃ ವ್ಯಕ್ತವಾಗುವುದರಿಂದ ಅದನ್ನು ಇಲ್ಲಿ ವಿವರಿಸಬೇಕಾದ ಆವಶ್ಯಕತೆಯಿಲ್ಲ. ಮೊದಲು 42 ಪುಟಗಳಲ್ಲಿ ಪ್ರಥಮ