ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನಕ್ಕೆ ಹಿಂದೆ] ಶಾಂತಿನಾಧ 9 ಬನದೊಳೆತ್ತಲುಂ ಸುರುವರಗಿಳಿಗಳೆ | ಜಿನುಗಿ ರಾಗದಿಂದಂ ಮೊರೆವಳಿಗಳೆ | ಪೋ ಪುಗಿಲ್ ಪುಗಿಲ್ ನಿಲ್ಲೆನುತೆ ಕರ೦|ಕಾಪುಗೊಂಡು ಜಡಿವುದು ಪಿಕನಿಕರಂ|| ವಿವಾಹಗೇಹ (ಲಲಿತರಗಳೆ) ಮರಕತಭಿತ್ತಿಗಳಿ೦ ಭಿತ್ತಿವೆತ್ತು | ಪೊಸದೇಸೆಯೊಳೆತ್ತಂ ಭಂಗಿವೆತ್ತು | ವಜ್ರದ ಕಂಭಂಗಳ ಕಾಂತಿ ಮಿಂಜೆ | ಪರಭಾಗಂಬಡೆದವಳೊಳ್ ಪಳಂಚೆ | ಪೊಂಗಳಸಂಗಳ್ ತಳತಳನೆ ತೊಳಗೆ| ಕಪ್ಪುರದ ಸೊಡರ್ಗಳೋರಂತೆ ಬೆಳಗೆ| ಪೊಂದಳಿರ್ಗಳ ತೋರಣದೊಳಗೆ ಪೋರಗೆ | ಕೆಂದಳಿರ್ಗಳ ಮಾಲೆಗಳೆಲಗಿ ತುಲುಗೆ | ಭಾವಿಸುವಂದರು ಪುಣ್ಯಾವತಾರ | ಮಾರಯ್ವಂದದು ಸಂಸಾರಸಾರ | ಈ ಲೋಕದೊಳದಲುತಪ್ಪುವಿಲ್ಲ | ಬಣ್ಣಿಸಲದನಾವನುಮದನಿಲ್ಲ ||
ಊಟ ಎಳಮಾವಿನ ಮಿಡಿ ಮಾಗುಳಿ|ಮೆಳಸಿನ ಕರೆ ಬೆತ್ತಲಟ್ಟೆಯೀಳೆಯ ಗೊಲೆಯಿಂ| ದಳವಟ್ಟಿರೆ ಲಾವಣಕಂ | ಗಳನಿಕ್ಕಿದರಾಗಳರ್ಧಿಯಿಂದಂಗನೆಯರ್ || ಇದು ಬಾಳ್ಮೊಸರಿದು ಕಳಲಿಂ|ತಿದು ರುಚಿವೆತ್ತಿರ್ದ್ದ ಪಾನಮಿದು ಮಜ್ಜಿಗೆ ತಾ| ನಿದು ಶಿಖರಿಣಿಯೆನುತುಂ ತಿಂ|ಬಿ ತಿಂಬಿ ತಂದೆಲೆದರಬಲೆಯರ್ ಸಿರ್ಪುಗಳಿಂ ||
ಜಿನಸ್ತುತಿ ಕವಿಗಳ್ ನಿನ್ನ ಮೃದೂಕ್ತಿಯಂ ಬಯಸಿ ಕೇಳುತ್ತಿರ್ಕ್ಕೆ ಕಣ್ಗಳ್ ಮಹೋ | ತ್ಸವದಿಂ ನಿನ್ನನೆ ನೋಡುತಿರ್ಕ್ಕೆ ಸಲೆ ಕೈಗಳ್ ನಿನ್ನ ಪಾದಾರವಿಂ || ದವನೋತಚ್ಚಿ೯ಸುತಿರ್ಕ್ಕೆ ಸಂದ ಮನಮೆಂದುಂ ನಿನ್ನ ದಿವ್ಯಸ್ವರೂ | ಪವನಾರಾಧಿಸುತಿರ್ಕ್ಕೆ ವಿಶ್ರುತವಿನೇಯಸ್ವಾರ್ಧ ಚಿಂತಾಮಣೀ ||
ಜಿನಸ್ತುತಿ (ವದ್ದಳಿ) ಜಯಜಯ ಭುವನತ್ರಯಪರಮದೇವ | ದೇವೇಂದ್ರಾಭ್ಯರ್ಚಿತಚರಣಕಮಲ | ಕಮಲವಿರಹಿತನಿರುಪಮದೇಹ | ದೇಹಾಶ್ರಿತಶುಭಲಕ್ಷಣವಿನೂತ | ನೂತನಸಂಗತಕೈವಲ್ಯಬೋಧ | ಬೋಧಪ್ರಕಾಶವಸ್ತುಸ್ವರೂಪ | ರೂಪಾತಿಶಯಾನ್ವಿತ ವಿತತವಿಭವ | ಭವನಿವಹಪಟಲನಿರ್ಮುಕ್ತಜೀವ || 2