ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಕರ್ಣಾಟಕ ಕವಿಚರಿತ. [15 ನೆಯ

                  ಸುಕುಮಾರನ ಭೋಗ

     ಮಾಸರಮೊಕ್ಕ ಕತ್ತುರಿಯ ಸಂಕಮನಲ್ಲದೆ ಪಂಕಮಂ ಕರಂ |
     ಬೀಸುವ ಚಾರುಚಾಮರದ ಗಾಳಿಯನಲ್ಲದೆ ಗಾಳಿಯಂ ಮನೋ || 
     ಭಾಸುರಮಪ್ಪ ಕಪ್ಪುರದ ದೂಳಿಯನಲ್ಲದೆ ದೂಳಿಯಂ ನಿಜಾ | 
     ವಾಸದೊಳೆಂತುಟೆಂದರಿಯನಿಂತುಟು ಪುಣ್ಯಮಗಣ್ಯಮಾತನಾ ||
                 ನಾಗಶ್ರೀಯ ವರ್ಣನೆ, (ರಗಳೆ)
     ಸುದತಿಯ ತೊಳಗುವ ತೋಳ ಮೊದಲ್ಗಳ್ | ಮದನವಿಲಾಸದ ಮೊತ್ತ
                                              ಮೊದಲ್ಗಳ್ | 
     ಲಲನಾರತ್ನದ ಬಾಹುಯುಗಂಗಳ್ | ಲಲಿತಲತಾಶಾಖಾಸದೃಶಂಗಳ | 
     ಸುರುಚಿರಮೃದುತರಪಲ್ಲವದಂತಿರೆ | ಕರತಳಮೊಪ್ಪುಗುಮೆಸೆದೋರಂತಿರೆ | 
     ಕರಶಾಖೆಗಳತನುಕ್ಷರದಂದಂ | ಕರನಖಮವು ಕೇದಗೆಯೆಸಳಂದಂ |               
     ನೋಡೆ ಕುಮಾರಿಯ ಬಳ್ಕುವ ಮಧ್ಯಂ|ನಾಡೆ ಮನೋಜ್ಞಂ ಪೊಗಲಿಲಸಾಧ್ಯಂ। 
     ಲಾವಣ್ಯಾಂಬುರಸದ್ರವರೂಪಂ | ಭಾವಿವೊಡಾಕೆಯ ನಾಭೀಕೂಸಂ | 
     ಜಲಜದಳಾಕ್ಷಿಯ ಕಣ್ಮಲರಂದಂ | ಪೊಳೆವೆಳಮೀಂಗಳ ಪೊಣರ್ಗಳ ಚಂದಂ। 
     ಅಗಣಿತಗುಣೆಯಂ ವಿಬುಧನಿಕಾಯಂ | ವೊಗರಿಲನೆಳೆವರೆ ನಾಗಶ್ರೀಯಂ ||
                   ನಾಗಶ್ರೀಯ ಪಾಂಡಿತ್ಯ
                       
     ಪ್ರತಿಭಾಸಂಸ್ಕೃತಿಯಿಂ ಸಲಕ್ಷಣತರಂಗೋಪಾಂಗದಿಂ ವಿಶ್ವವ | 
     ಶ್ರುತವರ್ಣಾರ್ಧ ದಿನರ್ಧದೃಷ್ಟಿಯಿನ೪೦ಕಾರೋಕ್ತಿಯಿಂ ನಿರ್ಣಯೋ || 
     ಚಿತವಿನ್ಯಾಸದಿನತ್ಯುದಾತ್ತರಸದಿಂದಾ ಕನ್ಯೆ ಸಾಕ್ಷಾತ್ಸರ |
     ಸ್ವತಿ ತಾನೆಂಬಿನಮೇಂ ಪ್ರಭಾವಿಸಿದಳೊ ನಾನಾಕಳಾಳಾಪಮಂ || 
     ನೆರೆದಾರಾಜಸಭಾಂತರಾಳದೊಳುದಾತ್ತಾರ್ಧೋಕ್ತಿಯಿಂ ತನ್ನೊಳಾರ್ |  
     ದೊರೆಯೆಂಬನ್ನೆ ಗಮುದ್ಗ ತಪ್ರಧಿತಶಬ್ದಾರ್ಥೋಕ್ತಿಯಿಂ ವ್ಯಕ್ತಮಾ ||
     ಗಿರೆ ವಕ್ಖಾಣಿಸಿ ತದ್ವಿದರ್ ಪೊಗರ್ದುಬಾಪ್ಪೆಂಬನ್ನೆಗಂ ತತ್ಪತಿಂ |
     ವರೆ ವೇದಾದಿಕಳಾಕಳಾಪಮನಶೇಷಾಳಾಪದಿಂದೋದಿದಳ್ || 
     ಸಕಲವ್ಯಾಕರಣಾರ್ಧಶಾಸ್ತ್ರನಿಪುಣರ್ ಮಾರ್ಕೊ೦ಡರಿಲ್ಲುರ್ಕ್ಕಿ ತಾ |
      ರ್ಕಿಕರೊಟ್ಟೈ ಸಿದರಿಲ್ಲ ಸತ್ಕವಿಗಳಡ್ಡಂಒಂದರಿಲ್ಲುಂತೆ ಭುಂ ||