ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14  ಕರ್ಣಾಟಕ ಕವಿಚರಿತೆ. [15 ನೆಯ

        ಎಡೆಯಾಡುತ್ತು ಮನೂನಜೈನಭವನಕ್ಕಾನಂದದಿಂದಂ ತಳ | 
        ರ್ನಡೆಗಲ್ತೆಂ ಪರಮಾಗಮಾಭ್ಯಸನದಿಂದಾವೊಲ್ತುಮಾಗಳ ತೊದ |
        ಲ್ನುಡಿಗಲ್ತೆಂ ಕಿರಿಯಂದು ಪುಣ್ಯವಶದಿಂದಾರಾಜ್ಯಪೂಜ್ಯಾಸ್ಪದಂ |
        ಬಡೆದಾಗಳ್ ಕವಿಚಕ್ರವರ್ತಿವೆಸರಂ ತ್ರೈಲೋಕ್ಯಚೂಡಾಮಣೀ ||
  
    ಎಂಬ  ಪದ್ಯದಿಂದ  ಈತನು ರಾಜಮರ್ಯಾದೆಯನ್ನೂ  ಕವಿಚಕ್ರವರ್ತಿ
    ಯೆಂಬ ಬಿರುದನ್ನೂ ಪಡೆದಂತೆ ತಿಳಿಯುತ್ತದೆ.  ಈ ಗ್ರಂಥದಲ್ಲಿ  36
    ವೃತ್ತಗಳಿವೆ; ಇದಕ್ಕೆ ಛತ್ತೀಸರತ್ನಮಾಲೆ ಎಂಬ ಹೆಸರೂ ಉಂಟು. ಪ್ರತಿ
    ಪದ್ಯವೂ ತ್ರೈಲೋಕ್ಯಚೂಡಾಮಣಿ ಎಂದು ಮುಗಿಯುತ್ತದೆ.  ಇದರಿಂದ
    ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ:--
         ಅಹವಿಲ್ಲೆಂಬುದನಕ್ಷಸೂತ್ರಮಣಿಯಿಂ ಕಾರುಣ್ಯಮಿಲ್ಲೆಂಬುದಂ | 
         ಮಿಳುಗುತ್ತಿರ್ಪ ತಿಸೂಳದಿಂ ತನಗಣಂ ನಾಣ್ ಮುನ್ನಮಿಲ್ಲೆಂಬುದಂ ||
         ಮೊಳೆಗೆಟ್ಟರ್ಚಿಪ ಲಿಂಗದಿಂ ತಪದ ಮಾತಿಲ್ಲೆಂಬುದಂ ಗೌರಿಯಿಂ |
         ದಳಿದೇನೆಂದು ಜಡರ್‌ ಮೃಡಂಗೆಳಗುವರ್ ತ್ರೈಲೋಕ್ಯಚೂಡಾಮಣೀ ||
         ಪಡೆಮಾತೇಂ ಗಡ ಮತ್ಸ್ಯಕಚ್ಛಪವರಾಹಾಕಾರಮಂ ತಾಳ್ದಿದಂ | 
         ಗಡ ಕುಬ್ಬದ್ವಿಜನಾಗಿ ದೈತ್ಯನಿದಿರೊಳ್ ದಾನಕ್ಕೆ ಕೆಯ್ಯಾಂತವಂ | 
         ಗಡ ಸಂಗ್ರಾಮದೊಳಾಂತು ಕಾದಿಯೆ ಜರಾಸಂಧಂಗೆ ಬೆನ್ನಿತ್ತವಂ |
         ಗಡ ದೇವಂ ಗಡ ಪೇಳ್ವೋಡಿನ್ನವಣಕಂ ತ್ರೈಲೋಕ್ಯಚೂಡಾಮಣೀ || 
         ಕೆಳೆಯಂ ಸಂಜೆಯನಿಂದ್ರನಂ ಗಣಪನಂ ಗೌರೀಶನಂ ಭಾನುವಂ | 
         ಪೆಳೆಯಂ ಗೋಕುಳಮಂ ಗಿರಿಪ್ರಕರಮಂ ಬಾದುಂಬೆಯಂ ಕಾಂತಿಯಂ |
         ತೊಳೆಯಂ ವಾರ್ಧಿಯನಯ್ದು ಪಾಲುಮರನಂ ದೈವಂಗಳೆಂದಿಂತು ಕೂ |
         ರ್ತೆ ಳಗುತ್ತಿರ್ಪವರೆಂತು ಮುಕ್ತಿವಡೆವರ್‌' ತ್ರೈಲೋಕ್ಯಚೂಡಾಮಣೀ || 
         ಜಿನಮಾರ್ಗಂಬಿಡದನ್ಯಮಾರ್ಗಮನದೇಂ ಪೇಳ್ ದೂಷಣಂಗೆಯ್ದು ದು | 
         ರ್ಜನನಾದಂ ಕರಮೆನ್ಗೆ ಮೆಚ್ಚದವರ್ಗಳ ಮಧ್ಯಸ್ಥರಾರಯ್ಯೆ ಪಾ ||
         ವಿನ ಪಲ್ಗೊಳ ವಿಷಮುಂಟು ಕಿಚ್ಚು ಸುಡುಗುಂನಂಜಳ್ಕದೆಂಬಂತೆ ಪೇ |
         ಳ್ದೆನಿದಂ ವಸ್ತು ವಿಚಾರಮಿಾತೆಳನಿದಂ ತ್ರೈಲೋಕ್ಯ ಚೂಡಾಮಣೀ ||