whole world is deeply indebted. No civilization ancient or modern has produced a higher culture, no other has succeeded better in making religion the philosophy of life, and no other has contributed so much to human knowledge.
Mr. Havell
ಸಾರಾಂಶ:- ದಕ್ಷಿಣ ಹಿಂದುಸ್ಥಾನದಲ್ಲಿಯ ಪರಂಪರಾಗತವಾದ ಕೈಗಾರಿಕೆಯ ಕೆಲಸಗಳು ಉಚ್ಚ ಸುಧಾರಣೆಯ ಉತ್ತಮವಾದ ಸಾಕ್ಷಿಗಳಾಗಿವೆ. ಆ ಬಗ್ಗೆ ಇಡೀ ಜಗತ್ತೇ ಅವುಗಳಿಗೆ ಅತ್ಯಂತ ಋಣಿಯಾಗಿದೆ. ಪ್ರಾಚೀನ ಸುಧಾರಣೆಯಲ್ಲಿಯೇ ಆಗಲಿ, ಅರ್ವಾಚೀನ ಸುಧಾರಣೆಯಲ್ಲಿಯೇ ಆಗಲಿ, ಅಷ್ಟೊಂದು ಉನ್ನತವಾದ ಸಂಸ್ಕೃತಿಯನ್ನು ಬೇರಾವುದೂ ಹುಟ್ಟಿಸಿರುವುದಿಲ್ಲ; ಧರ್ಮವನ್ನು ಆಯುಷ್ಯದ ಇತಿ ಕರ್ತವ್ಯತೆಯಾಗಿ ಮಾಡುವುದರಲ್ಲಿ ಅದರಷ್ಟು ಸಿದ್ಧಿಯನ್ನು ಬೇರಾವ ಸುಧಾರಣೆಯೂ ಪಡೆದಿರುವುದಿಲ್ಲ; ಅಲ್ಲದೆ, ಮಾನವ ಜ್ಞಾನ ಭಾಂಡಾರಕ್ಕೆ ಅದರಿಂದಾದಷ್ಟು ಸಹಾಯವು ಬೇರಾವುದರಿಂದಲೂ ಆಗಿರುವುದಿಲ್ಲ.
ಹ್ಯಾವೆಲ್
ಅತಿ ಪ್ರಾಚೀನಕಾಲದಿಂದ ಇಂದಿನವರೆಗಿನ ಇತಿಹಾಸವನ್ನು ನೋಡಿದರೆ, ಉನ್ನತಿ ಶಿಖರವನ್ನು ತಲಪಿದ ಪ್ರತಿಯೊಂದು ರಾಷ್ಟ್ರವೂ ಶಿಲ್ಪಕಲೆಯಲ್ಲಿ ತನ್ನ ಪ್ರಾವೀಣ್ಯವನ್ನು ತೋರಿಸಿರುತ್ತದೆಂದು ಕಂಡು ಬರುವುದು, ಮಿಕ್ಕ ಕಲೆಗಳ ಕುರುಹುಗಳು ಕಾಲನಿಂದ ಸ್ವಲ್ಪಾವಧಿಯಲ್ಲಿ ಅಳಿಸಿಹೋಗುವಂತೆ ಈ ಕಲೆಯ ಪರಿಣಾಮಗಳು ಅಳಿಸಿ ಹೋಗುವುದಿಲ್ಲ. ಆದುದರಿಂದ ಶಿಲ್ಪ ಕಲೆಯು ಇತಿಹಾಸಕ್ಕೆ ಪ್ರಧಾನವಾದ ಅಂಗವಾಗಿದೆ. ನಮ್ಮ ಕರ್ನಾಟಕದ ವೈಭವವು ಈಗ ಹಾಳಾಗಿ ಹೋಗಿರುವುದರಿಂದ ಅದನ್ನು ಈಗ ಒಂದು ಸ್ಮಶಾನಕ್ಕೆ ಹೋಲಿಸಬಹುದು. ಇಲ್ಲಿ ನಮ್ಮ ಹಿಂದಿನ ವೈಭವವೆಲ್ಲವೂ ತಾಳೀಕೋಟೆಯ ಕಾಳಗದಲ್ಲಿ ಸುಟ್ಟು ಬೂದಿಯಾಗಿ ಹೋಗಿದೆ. ಎಲ್ಲಿ ನೋಡಿದರೆ ಹಾಳು ಸುರಿಯುತ್ತದೆ. ಇಂಥ ಸ್ಥಿತಿಯಲ್ಲಿ, ಶ್ಮಶಾನಭೂಮಿಯಲ್ಲಿ ದೊರೆಯುವ ಎಲುಬು ಮುಂತಾದ