ಈ ಪುಟವನ್ನು ಪ್ರಕಟಿಸಲಾಗಿದೆ



೧೪೬

ಕರ್ನಾಟಕ-ಗತವೈಭವ.


Society Leepzic), (೪) ಇಂಡಿಯಾ ಆಫೀಸ್ ಲಾಯಬ್ರರಿ, ಲಂಡನ್ (India Office Library London). (೫) ಮಿಸ್ ಥಾಮಸ್ (Miss. Thomas), ಮಿಕ್ಕ ಪ್ರತಿಗಳು ಮುಂಬಯಿಗೆ ಕಳುಹಿಸಲ್ಪಟ್ಟಿದ್ದುವು. ಅವುಗಳ ಪತ್ತೆ ಇಲ್ಲ.

ಅದರ ಮೇಲೆ ಹೇಳಿದ ಸಂಗ್ರಹಗಳು ದೊರೆಯಲಿಕ್ಕೆ ಕಠಿಣವಾದುದರಿಂದ ಅವುಗಳನ್ನು ಒಟ್ಟಿಗೆ ಕೂಡಿಸಿ ಕ್ರಮವಾಗಿ ಒಂದೇ ಗ್ರಂಥದಲ್ಲಿ ಇಂಡಿಯಾ ಅಫೀಸ್ (Indian Office) ನ ವತಿಯಿಂದ ೧೮೭೮ನೆಯ ಇಸವಿಯಲ್ಲಿ ಡಾಂ, ಫ್ಲೀಟ ಎಂಬವರು ಮುದ್ರಿಸಿದರು. ಈ ಪುಸ್ತಕದ ಹೆಸರು (Pali Sanskrit and Old Kanarese Inscriptions from the Bombay Presidency and Parts of the Madras Presidency and Mysore.) ಮುಂಬಯಿ ಇಲಾಖೆಯ ಮತ್ತು ಮದ್ರಾಸ ಇಲಾಖೆಯ ಮತ್ತು ಮೈಸೂರು ಪ್ರಾಂತದ ಕೆಲವು ಭಾಗಗಳಲ್ಲಿಯ ಪಾಲೀ, ಸಂಸ್ಕೃತ ಮತ್ತು ಹಳೆ ಕನ್ನಡ ಭಾಷೆಗಳಲ್ಲಿರುವ ಲೇಖಗಳು, ಆದರೆ ಇದರ ಒಂಭತ್ತೇ ಪ್ರತಿಗಳು ಮುದ್ರಿತವಾಗಿದ್ದುವು, ಅವು ಮುಂದೆ ಹೇಳಿದ ಸ್ಥಳಗಳಲ್ಲಿ ಇರುತ್ತವೆ, (೧) ಇಂಡಿಯಾ ಆಫೀಸ್, ಲಂಡನ್ (India Office, London). (೨) ಬ್ರಿಟಿಷ್ ಮ್ಯುಝೀಯಮ್, ಲಂಡನ್ (British Museum, London). (೩) ರಾಯಲ್ ಏಶಿಯಾಟಿಕ್ ಸೊಸಾಯಟಿ, ಲಂಡನ್ (Royal Asiatic Society, London), (೪) ಮುಂಬಯಿ ಸೆಕ್ರೆಟರೇಟ್ (The Bombay Secretariat), (೫) ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಮುಂಬಯಿ ಶಾಖೆ (The Bombay Branch of the Royal Asiatic Society). (೬) ಆನ್‌. ಮಿ. ಗಿಬ್ಬ (The Hon. Mr. Gibbs), (೭) ಡಾ. ಬರ್ಗ್‌ಸ್‌ (Dr. Burgess), (೮) ಡಾ. ಫ್ಲೀಟ್ (Dr. Fleet), (೯) ಬಾಡ್ಲಿಯನ್ ಲಾಯಬ್ರರಿ (Bodlean Library).

ಪ್ರೊ. ಡಾವುಸನ್ (Prof. Dowson) ಎಂಬವರು ರಾಯಲ್ ಏಶಿಯಾಟಿಕ್ ಸೊಸಾಯಿಟಿ(Journal of the Royal Asiatic Society)