ಈ ಪುಟವನ್ನು ಪ್ರಕಟಿಸಲಾಗಿದೆ



೧ನೆಯ ಪೂರಕ ಪ್ರಕರಣ -ಕರ್ನಾಟಕ-ಇತಿಹಾಸ-ಸಂಶೋಧನ.
೧೪೭

ಯ ಮಾಸಪತ್ರಿಕೆಯಲ್ಲಿ ಹಲಕೆಲವು ಲಿಪಿಗಳನ್ನು ಅಚ್ಚು ಹಾಕಿಸಿದ್ದಾರೆ. ಅಲ್ಲದೆ, ಅವರು ದಕ್ಷಿಣದೊಳಗಿನ ಚಾಲುಕ್ಯರಾಜರ ವಿಷಯಕ್ಕೆ ಆ ಸೊಸಾಯಿಟಿಯ ಒಂದನೆಯ ವಾಲ್ಯೂಮ(New Series) ದಲ್ಲಿ ಒಂದು ಲೇಖವನ್ನು ಬರೆದಿರುವರು. ಇದಲ್ಲದೆ, ಪಂಡಿತ ಬಾಳ ಗಂಗಾಧರಶಾಸ್ತ್ರಿ, ಸರ್ ಲಿಗ್ರಾಂಡ, ಜೇಕಬ, ಮತ್ತು ಕ್ಯಾಪ್ಟನ ಜರ್ನಿಸ ಇವರು ಚಾಲುಕ್ಯರ ವಿಷಯವಾಗಿ ಕೆಲವು ಲೇಖಗಳನ್ನು ಮುದ್ರಿಸಿದ್ದಾರೆ. (Journa1 Bom.R.As.vol.II,III; J.R.A.S. vol. IX) ಮುಂಬಯಿ ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಸಂಪುಟ ೨, ೩ ಮತ್ತು ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ೯ನೆಯ ಸಂಪುಟಗಳಲ್ಲಿ ಮಿಸ್ತರ್‌ ವ್ಯಾಥೆನ್ ಇವರು ಚಾಲುಕ್ಯರ ವಂಶಾವಳಿಯನ್ನು ಪ್ರಸಿದ್ದಗೊಳಿಸಿದ್ದಾರೆ. (J.R.A.S. vol. V 345); ಪಂಡಿತ ಕಾಶಿನಾಥ ತೆಲಂಗ ಇವರು ತೈಲಪನ ಪೂರ್ವದಲ್ಲಿ ಆದ ಚಾಲುಕ್ಯರ ವಿಷಯವಾಗಿ ಒಂದು ನಿಬಂಧವನ್ನು ಬರೆದು ಅದನ್ನು ಮುಂಬಯಿ ಸೊಸಾಯಿಟಿಯ ಜರ್ನಲಿನಲ್ಲಿ ಮುದ್ರಿಸಿದ್ದಾರೆ. (Jour. B.R.A.S.vol. X348-367): ಡಾ. ಟೇಲರ್ ಎಂಬುವವರು ಟ್ರಾನ್ಸಾಕ್ಶನ್ಸ್ ಆಫ್ ಲಿಟರರಿ ಸೊಸಾಯಟಿ ಮುಂಬಯಿ (Transactions of the Literary Society of Bombay) ಎಂಬುದರಲ್ಲಿಯೂ ಅನೇಕ ಲೇಖಗಳನ್ನು ಬರೆದಿರುವರು.

ಆದರೆ, ಇವೆಲ್ಲ ತೀರ ಅವಾದ ಪ್ರಯತ್ನಗಳು. ಒಂದೇ ಸಮನಾಗಿ ನಡೆದುವುಗಳಲ್ಲ. ೧೮೮೨ನೆಯ ಇಸವಿಯಲ್ಲಿ ಡಾ. ಬರ್ಗೆಸ್ (Dr. Burgess) ಇವರು ಇಂಡಿಯನ್ ಆಂಟಿಕ್ವರಿ (Indian Antiquary) ಎಂಬ ಮಾಸಪತ್ರಿಕೆಯನ್ನು ತೆಗದಂದಿನಿಂದ ಈ ವಿಷಯವು ಒಂದೇ ಸಮನಾಗಿ ಚರ್ಚಿಸಲ್ಪಡಹತ್ತಿರುತ್ತದೆ. ಡಾ. ಬುಲ್ಕರ, ಪ್ರೊ. ಇಗ್ಲಿಂಗ್, ಮಿ. ಕಿಟೆಲ್, ವಿ. ರೆನ್, ರೆ.ಫೋಕ್ಸ್, ಡಾ. ಭಂಡಾರ್‌ಕರ್‌, ಪ್ರೊ.ಭಗವಾನ್ ಲಾಲ್ ಇಂದ್ರಜಿ, ಮಿ. ಪಂಡಿತ, ಮಿ. ತಲಂಗ, ಪ್ರೊ. ಪಾಠಕ, ಡಾ. ಫ್ಲೀಟ್ (Dr. Buther, Prof. Igling, Mr. Kittel, Mr Ren, Revd. Folkes, Dr. Bhandarkar, Prof. Bhagavan lal Indraji, Mr S. P. Pandit, Mr. K.T. Telang, Prof. Pathak, Dr.