ಈ ಪುಟವನ್ನು ಪ್ರಕಟಿಸಲಾಗಿದೆ



೧೪೮
ಕರ್ನಾಟಕ-ಗತವೈಭವ.

Fleet) ಇವರೇ ಮುಂತಾದವರು ಈ ವಿಷಯವಾಗಿ ಲೇಖಗಳನ್ನು ಬರೆದಿರುವರು, ಇವೆಲ್ಲವುಗಳಲ್ಲಿ ಡಾ. ಫ್ಲೀಟ್ ರು ಶೋಧಿಸಿದ ಲಿಪಿಗಳೇ ಹೆಚ್ಚು. ೧೮೭೯ನೆಯ ಇಸವಿಯಲ್ಲಿ ಮಿ, ರಾಯಿಸ್‌ (Mr. Rice) ಇವರು ಡಿಕ್ಸನ್ (Dixon) ಇವರ ಸಂಗ್ರಹವನ್ನೂ ತಮ್ಮ ಸಂಗ್ರಹವನ್ನೂ ಒಟ್ಟುಗೂಡಿಸಿ ಮೈಸೂರಿನ ಲೇಖಗಳು (Mysore Inscriptions) ಎಂಬ ಪುಸ್ತಕವನ್ನು ಮುದ್ರಿಸಿದ್ದಾರೆ.

ಇಂಡಿಯನ್‌ ಆ್ಯಂಟಿಕ್ವರಿ (Indian Antiquiary) ಎಂಬ ಮಾಸ ಪತ್ರಿಕೆಯು ಹೊರಡುವ ಪೂರ್ವದಲ್ಲಿಯ ಲೇಖಗಳು ಅಲ್ಲೊಂದು ಇಲ್ಲೊಂದು ಇರುವುದರಿಂದ, ವಾಚಕರಿಗೆ ಅವುಗಳನ್ನು ಕೈಲಾದಮಟ್ಟಿಗೆ ಗೊತ್ತು ಮಾಡಿಕೊಟ್ಟಿರುವೆವು. ಆ ಮಾಸಪತ್ರಿಕೆಯಲ್ಲಿ ಕರ್ನಾಟಕ ಇತಿಹಾಸದ ವಿಷಯವಾಗಿ ಎಷ್ಟು ಲಿಪಿಗಳು ಮತ್ತು ಯಾವ ಲೇಖಗಳು ಬಂದಿರುತ್ತವೆಂಬುದರ ಯಾದಿಯನ್ನು ಕೊಡಬೇಕೆಂದು ಹವಣಿಸಿದ್ದವು. ಆದರೆ ಅದನ್ನು ತಯಾರಿಸಲಿಕ್ಕೆ ಕಾಲಾವಧಿಯು ಬೇಕು. ಮತ್ತು ಇತಿಹಾಸವನ್ನು ಅಭ್ಯಾಸಮಾಡುವವರಿಗೆ ಕೆಲವು ಮಟ್ಟಿಗಾದರೂ ಅನುಕೂಲವಾಗಬೇಕೆಂದು ನಮ್ಮ ಮಿತ್ರರ ಸೂಚನೆಯ ಮೇರೆಗೆ ಈ ಪುಸ್ತಕವನ್ನು ಅವಸರದಿಂದ ಅಪೂರ್ಣಾವಸ್ಥೆಯಲ್ಲಿಯೇ ತೆಗೆದಿರುವೆವು.

ಕೊನೆಗೆ ಸೂಚಿಸುವುದೇನಂದರೆ ಎಪಿಗ್ರಾಫಿಯಾ ಇಂಡಿಕಾ (Epigraphia Indica) ಎಂಬ ಪತ್ರಿಕೆಯ ೭ನೆಯ ಸಂಪುಟದಲ್ಲಿ, ದಕ್ಷಿಣದಲ್ಲಿಯ ಯಾವತ್ತು ಶಿಲಾಲಿಪಿಗಳ ಪಟ್ಟಿಯೊಂದನ್ನು ಪ್ರೊ. ಕಿಲಹಾರ್ನ್ ಇವರು ಅತ್ಯಂತ ಪರಿಶ್ರಮ ಪಟ್ಟು ಮುದ್ರಿಸಿರುವರು. ಆ ಮುಂದಿನ ಪಟ್ಟಿಯೊಂದನ್ನು ಯಾರಾದರೂ ವಿದ್ವಾಂಸರು ತಯಾರಿಸಿದರೆ ನಮ್ಮ ಇತಿಹಾಸಕ್ಕೆ ದೊಡ್ಡ ಉಪಕಾರ ಮಾಡಿದಂತಾಗುವುದು, ಇತಿಹಾಸವನ್ನು ಅಭ್ಯಾಸ ಮಾಡಲಿಚ್ಚಿಸುವವರು ಈ ಪಟ್ಟಿಯನ್ನು ಕಣ್ಣು ಮುಂದಿಟ್ಟುಕೊಂಡೇ ಅಭ್ಯಾಸ ಮಾಡಬೇಕು. ಇದೊಂದು ಸಂಗತಿಯು ಗೊತ್ತಿರದ ಮೂಲಕ ನಮ್ಮ ಎಷ್ಟೋ ಶ್ರಮವು ನಿರರ್ಥಕವಾಗಿರುತ್ತದೆ. ಆದುದರಿಂದ ನಾವು ಈ ಸಂಗತಿಯನ್ನು ಬೇಕೆಂದು ವಾಚಕರ ಧ್ಯಾನಕ್ಕೆ ತಂದುಕೊಟ್ಟಿದ್ದೇವೆ.

ಇನ್ನು, ಕರ್ನಾಟಕದ ಇತಿಹಾಸಕ್ಕೆ ಅತ್ಯಂತ ಅವಶ್ಯವಾದ ಬೇರೆ ಪುಸ್ತಕಗಳಾವುವೆಂದರೆ (೧) ಡಾ೦ ಫ್ಲೀಟ ಇವರ ೧೮೮೨ನೆಯ ಇಸವಿಯಲ್ಲಿ ಬರೆದ