ದರೆ, ಹಿಮಾಲಯದಿಂದ ರಾಮೇಶ್ವರದ ವರೆಗೂ ಆರ್ಯರಲ್ಲಿ, ಆರ್ಯರ ರಕ್ತದಲ್ಲಿ, ಆರ್ಯರ ಸಂಸ್ಕೃತಿಯಲ್ಲಿ, ಒಂದು ವಿಧದ ಸಾಮ್ಯವೂ, ಸೌಹಾರ್ದವೂ ಕಂಡುಬರುತ್ತದೆ ! ಪೌರಾಣಿಕ ಶ್ರೀ ರಾಮಕೃಷ್ಣಾದ್ಯವತಾರಗಳ ವಿಷಯದಲ್ಲಿ ಆಸೇತು ಹಿಮಾಚಲದ ವರೆಗೆ ಒಂದೇ ಬಗೆಯ ಪೂಜ್ಯ ಭಾವವು ತೋರಿ ಬರುತ್ತದಲ್ಲವೇ! ಇದೇ ತರದ ಪೂಜ್ಯ ಭಾವವೂ, ಅಭಿಮಾನವೂ, ಅನುರಾಗವೂ, ನಮ್ಮ ಐತಿಹಾಸಿಕ ಪುರುಷರ ವಿಷಯದಲ್ಲಿಯೂ ನಮ್ಮಲ್ಲಿ ಹುಟ್ಟುವದೇ ರಾಷ್ಟ್ರೀಯತ್ವದ ಪರಿಣತಾವಸ್ಥೆಯು. ಅಂತಹ ಸ್ಥಿತಿಯುಂಟಾಗಬೇಕಾದರೆ, ನಾವು ನಮ್ಮ ಪ್ರಾಂತಗಳಲ್ಲಿ ಮಹಾ ಕಾರ್ಯಗಳನ್ನೆಸಗಿದ ಮಹಾ ಪುರುಷರ ವಿಷಯವಾಗಿ ಅಭಿಮಾನವನ್ನು ತಾಳಿ, ಅವರ ಉತ್ಸವಗಳನ್ನು ಎಡೆಬಿಡದೆ ನಡೆಯಿಸಿ, ಅವರನ್ನು ರಾಷ್ಟ್ರೀಯ ಮಹಾಪುರುಷರ ಪಂಕ್ತಿಯಲ್ಲಿ ಕುಳ್ಳಿರಿಸಬೇಕು, ನಮ್ಮ ಸತ್ಪುರುಷರ ಅಭಿಮಾನವು ನಮಗೇ ಇಲ್ಲದ ಬಳಿಕ, ಮಿಕ್ಕ ಪ್ರಾಂತದವರಿಗೆ ಅವರ ವಿಷಯವಾಗಿ ಅಭಿಮಾನ ಹುಟ್ಟುವದು ಹೇಗೆ? ಶ್ರೀರಾಮದಾಸ, ಶ್ರೀ ಶಿವಾಜಿ ಇವರ ಹೆಸರನ್ನು ಕೇಳಿದೊಡನೆಯೇ ಮಹಾರಾಷ್ಟ್ರೀಯರ ಹೃದಯದಲ್ಲಿ ಆನಂದವು ಉಕ್ಕೇರುವಂತೆ ಅದು ಆ೦ಧ್ರರಲ್ಲಿ ಅಥವಾ ಬಂಗಾಲಿಯರಲ್ಲಿ ಈಗ ಉಕ್ಕೇರುವದೇನು? ಪ್ರತಾಪರುದ್ರದೇವ, ನನ್ನಯಭಟ್ಟ ಮುಂತಾದವರ ಹೆಸರುಗಳು, ಆಂಧ್ರರಿಗೆ ಈಗ ಕೊಡುವಷ್ಟು ಅಭಿಮಾನವನ್ನೂ, ಉತ್ಸಾಹವನ್ನೂ, ಮರಾಠರಿಗೆ ಕೊಡುವವೋ ? ಸಾರಾಂಶ:- ರಾಷ್ಟ್ರೀಯತ್ವವು ರ್ಪೂವಾಗಿ ನೆಲೆಗೊಳ್ಳುವದಕ್ಕೆ, ಆಯಾ ಪ್ರಾಂತದ ಜನರು ಮೊದಲು ತಮ್ಮ ಮಹಾಪುರುಷರ ವೈಭವವನ್ನು ಸ್ಮರಿಸಿ, ತಮ್ಮ ಮನಸ್ಸನ್ನು ಆನಂದ ಸಾಗರದಲ್ಲಿ ಎಡೆಬಿಡದೆ ಓಲಾಡಿಸ ಬೇಕು, ಅವರ ಮೂರ್ತಿಗಳನ್ನು ತಮ್ಮ ಕಣ್ಣ ಮುಂದಿಟ್ಟು ಕೊಂಡು ಧ್ಯಾನಿಸಬೇಕು.
ಮಿಕ್ಕ ಪ್ರಾಂತಗಳೊಳಗಿನ ಈಗಿನ ಪ್ರಯತ್ನಗಳೆಲ್ಲವೂ ಈ ಮಾರ್ಗದಿಂದಲೇ ನಡೆದುಬರುವವಲ್ಲವೆ! ತಮ್ಮ ಪೂರ್ವಿಕರು ಮೊದಲು ಇಂಥಿಂಥ ಮಹಾ ಕೃತ್ಯಗಳನ್ನು ಮಾಡಿದರು; ತಮ್ಮ ಮೈಯಲ್ಲೆಲ್ಲ ಇಂಥಿಂಥ ಮಹಾ ಮಹಾ ವೀರರ ರಕ್ತವು ಹರಿಯುತ್ತಿದೆ; ತಮ್ಮ ನಾಡು ಇಂಥ ಪುಣ್ಯ ಪುರುಷರ ಪಾದ ಧೂಳಿಯಿಂದ ಪಾವನವಾಗಿದೆ;- ಎಂಬಿವು ಮೊದಲಾದುದನ್ನು ಹೇಳಿ ಪ್ರತಿಯೊಂದು ಭಾಷೆ
ಪುಟ:ಕರ್ನಾಟಕ ಗತವೈಭವ.djvu/೨೯
ಈ ಪುಟವನ್ನು ಪ್ರಕಟಿಸಲಾಗಿದೆ
೪
ಕರ್ನಾಟಕ ಗತವೈಭವ