ಈ ಪುಟವನ್ನು ಪ್ರಕಟಿಸಲಾಗಿದೆ
೧ನೆಯ ಪ್ರಕರಣ -ಈ ಮೃತವಾದ ಕರ್ನಾಟಕದಿಂದೇನು?

ಯವರು ತಮ್ಮ ಜನರನ್ನು ರಾಷ್ಟ್ರ ಕಾರ್ಯಕ್ಕೆ ಹುರಿಗೊಳಿಸುತ್ತಿದ್ದಾರೆ; “ಯಾವ ದೇಶವು ಒಂದು ಕಾಲಕ್ಕೆ ಶ್ರೀರಾಮಚಂದ್ರ, ಚಂದ್ರಗುಪ್ತ, ಅಶೋಕ, ಹರ್ಷವರ್ಧನ, ಪೃಥ್ವಿರಾಜರಂತಹ ಮಹಾ ಧಾರ್ಮಿಕ ರಾಜರಿಗೆ ತವರು ಮನೆಯಾಯಿತೋ, ಯಾವ ನಮ್ಮ ದೇಶವು ತುಳಸೀದಾಸ, ಕಬೀರದಾಸರಂಥ ಭಗವದಕ್ತರಿಗೆ ಜನ್ಮ ಕೊಟ್ಟಿತೋ, ಆ ಹಿಂದೀ ರಾಷ್ಟ್ರವು ಎಂದಾದರೂ ಪ್ರಗತಿಯಲ್ಲಿ ಹಿಂದುಳಿದೀತೇ” ಎಂದು ಹಿಂದೀ ಬಂಧುಗಳು ತಮ್ಮ ಮಂದಿಯನ್ನು ಪ್ರೇರಿಸುತ್ತಿದ್ದಾರೆ; “ಪ್ರತಾಪಾದಿತ್ಯನಂತಹ ಪ್ರತಾಪಿಯು ನಮ್ಮ ರಾಷ್ಟ್ರವನ್ನು ಅಲಂಕರಿಸಿರಲು, ಚೈತನ್ಯನಂಥ ಧರ್ಮವೀರನು ನಮ್ಮಲ್ಲಿ ಚೈತನ್ಯವನ್ನು ತುಂಬಿರಲು, ನಾವು ತಲೆ ಬಗ್ಗಿ ಸಿ ಸುಮ್ಮನೆ ಕುಳಿತುಕೊಳ್ಳಬೇಕೇ ? ಅಂಥ ವೀರಪುರುಷರು ಮುಂದೆಯೂ ನಮ್ಮಲ್ಲಿ ಮೈದೋರಲಾರರೇ- ” ಎಂದು ಮುಂತಾಗಿ ಹೊಗಳಿ, ಬಂಗಾಲಿಗಳು ತಮ್ಮವರ ಬೆನ್ನು ಚಪ್ಪರಿಸುತ್ತಿರುವರು ! ರಾಜರಾಜನರೇಂದ್ರ, ಪ್ರತಾಪರುದ್ರದೇವ, ಕೃಷ್ಣ ದೇವರಾಯ ಮುಂತಾದ ರಣವೀರರು ನಮ್ಮ ಪೂರ್ವಜರೇ ಅಲ್ಲವೇ ? ಆಪಸ್ತಂಭ, ಕುಮಾರಿಲಭಟ್ಟ, ವಿದ್ಯಾರಣ್ಯ, ಅಪ್ಪಯ್ಯ ದೀಕ್ಷಿತ ಇವರೇ ಮೊದಲಾದ ವಿದ್ವನ್ಮಣಿಗಳು ನಮ್ಮ ದೇಶದಲ್ಲಿ ಹುಟ್ಟಲಿಲ್ಲವೇ? ಹೀಗಿದ್ದ ಬಳಿಕ ಆಂಧ್ರರಾದ ನಾವು ಅಳುವದೇತಕ್ಕೆ!” ಎಂದು ಆಂಧ್ರರು ತಮ್ಮ ಜನರಲ್ಲಿ ಪರಿಪರಿಯಾಗಿ ಆವೇಶ ತುಂಬುತ್ತಿದ್ದಾರೆ! “ನನ್ನದು ಬಹು ಪ್ರಾಚೀನ ಭಾಷೆ, ಚೇರ, ಚೋಳ, ಪಾಂಡ್ಯ ರಾಜ್ಯಗಳು ರಾಮಾಯಣ ಮಹಾಭಾರತ ಕಾಲದಿಂದಲೂ ಖ್ಯಾತಿಗೊಂ ಡಿವೆ; ರಾಜರಾಜ, ಕುಲೋತ್ತುಂಗ ಮುಂತಾದ ಮಹಾವೀರರು ನಮ್ಮ ಆರಸರು, ರಾಮಾನುಜ, ವೇದಾಂತ ದೇಶಿಕರಂಥ ಧರ್ಮಮಾರ್ತ೦ಡರು ನಮ್ಮ ಮಾರ್ಗದರ್ಶಕರು, ಎಂದ ಮೇಲೆ ದೇವದೂತರಾದ ಇಂಥ ಅಂಶ ಪುರುಷರ ಹೆಸರೆತ್ತಿದ ಮಾತ್ರದಿಂದ ನಾವು ರಾಷ್ಟೊದ್ಧಾರವನ್ನು ಮಾಡಲಾರೆವೇ!” ಎಂದು ತಮಿಳರು ಆಲಸ್ಯವನ್ನು ತಳ್ಳಿ ತಲೆಯೆತ್ತಲಾರಂಭಿಸಿದ್ದಾರೆ. ಇತ್ತ, ನಮ್ಮ ನೆರೆ ಹೊರೆಯವರಾದ ಮರಾಠರಂತೂ ಶ್ರೀರಾಮದಾಸ, ಶ್ರೀ ಶಿವಾಜಿ ಮಹಾರಾಜರ ಭಜನೆಯಿಂದಲೂ, ಉತ್ಸವಗಳಿಂದಲೂ ತಮ್ಮ ರಾಷ್ಟ್ರವನ್ನೇ ತುಂಬಿ ಬಿಟ್ಟಿದ್ದಾರೆ. “ಜ್ಞಾನೇಶ್ವರ, ರಾಮದಾಸರಂಥ ಸಾಧುಗಳು ನಮ್ಮಲ್ಲಿ ಜನಿಸಿರಲು, ಶಿವಾಜಿ, ಬಾಜೀರಾಯರಂಥ ವೀರಾಗ್ರೇಸರರು ನಮ್ಮಲ್ಲಿ ಉದಯಿಸಿರಲು, ರಾಷ್ಟ್ರಗಳ ವಿರಾ