ವಿರಾಟನೆಂಬ ರಾಜನು ರಾಜ್ಯ ಮಾಡುತ್ತಿದ್ದನು. ಶಾಲಿವಾಹನ ಶಕದ 12ನೆಯ ಶತಮಾನದಲ್ಲಿಯೂ, ಹಾನಗಲ್ಲಿಗೆ ವಿರಾಟಕೋಟಿಯೆಂಬ ಹೆಸರಿತ್ತೆಂದು ಆ ಕಾಲದ ಶಿಲಾಲಿಪಿಗಳಿಂದ ತಿಳಿಯುತ್ತದೆ. ಹಾನಗಲ್ಲಿನಲ್ಲಿ ಹಳೇ ಕೋಟಿಯನ್ನೂ ಕೀಚಕನ ಗರಡಿಮನೆಯನ್ನೂ ಜನರು ಈಗಲೂ ತೋರಿಸುತ್ತಾರೆ, ವಿರಾಟ ರಾಜ್ಯದ ದಕ್ಷಿಣಕ್ಕೆ ಅದಕ್ಕೆ ಹೊಂದಿ ಸುಶರ್ಮನೆಂಬ ಅರಸನ ತ್ರಿಗರ್ತದೇಶದ ರಾಜ್ಯವಿತ್ತೆಂದು ವಿರಾಟ ಪರ್ವದಲ್ಲಿ ಹೇಳಿದೆ. ತ್ರಿಗರ್ತವೆಂದರೆ ಮೂರು ದಿಕ್ಕುಗಳಲ್ಲಿ ತಗ್ಗುಳ್ಳ ಸೀಮೆಯೆಂಬರ್ಥವು. ಈ ವರ್ಣನೆಯು ಮೈಸೂರಸೀಮೆಗೆ ಸರಿಹೊಂದುತ್ತದೆ.ಒಟ್ಟಿಗೆ, ಕೌರವ ಪಾಂಡವರ ಕಾಲದಲ್ಲಿ ಗೋಮಂತಕ, ಮತ್ಸ, ತ್ರಿಗರ್ತ ಈ ಮೂರು ರಾಷ್ಟ್ರಗಳೂ ಕರ್ನಾಟಕದಲ್ಲಿದ್ದು ಎಂದು ಸ್ಪಷ್ಟವಾಗುತ್ತದೆ. ಆನಿಗೊಂದಿಯೆಂಬುದೇ ಮಹಾಭಾರತದಲ್ಲಿಯ ಉಪಪ್ಲಾವ್ಯ. ಮಹಾಭಾರತದ ಭೀಷ್ಮ ಪರ್ವದಲ್ಲಿ ಕರ್ನಾ ಟಕದ ಹೆಸರು ಬಂದಿದೆ.
ಪಾಂಡವರ ಕಾಲದಿಂದ ಶಾಲಿವಾಹನಶಕದ ಆರಂಭದ ವರೆಗೆ ಕರ್ನಾಟಕದ ಇತಿಹಾಸವು ತಿಳಿದಿಲ್ಲ. ಈ ಅವಧಿಯಲ್ಲಿ ಕರ್ನಾಟಕಕ್ಕೆ ಕುಂತಳ, ನಾಟ, ಲಾಟ ಮುಂತಾದ ಹೆಸರುಗಳು ಪ್ರಾಪ್ತವಾಗಿದ್ದುವು. ಕುಂತಳ ದೇಶದಲ್ಲಿ ಚಂದ್ರಹಾಸನೆಂಬ ಅರಸನು ಆಳಿದ ಕಥೆಯು ಪುರಾಣ ಪ್ರಸಿದ್ಧವಾಗಿದೆ. ಈ ಅವಧಿಯಲ್ಲಿಯೇ ಇಜಿಪ್ತ ಗ್ರೀಸದೇಶಗಳ ವ್ಯಾಪಾರಸ್ಥರು ಕರ್ನಾಟಕಕ್ಕೆ ಆಗಾಗ ಬರುತ್ತಿದ್ದರೆಂದು ತೋರುತ್ತದೆ. ಇಜಿಪ್ತ ದೇಶದಲ್ಲಿ 'ಟಾಲೆಮಿ' ಎಂಬೊಬ್ಬ ಗ್ರಂಥಕರ್ತನು ಕ್ರಿ.ಶ. ೧೫೦ ನೆಯ ವರ್ಷದಲ್ಲಿ ಇದ್ದನು. ಅವನು ಆ ಕಾಲಕ್ಕೆ ವ್ಯಾಪಾರಕ್ಕೋಸ್ಕರ ಹಿಂದುಸ್ಥಾನದ ಪಶ್ಚಿಮ ಸಮುದ್ರತೀರಕ್ಕೆ ಬರುತ್ತಿದ್ದ ವರ್ತಕರನ್ನು ಕೇಳಿ 'ಆರ್ಯಕ' ಎಂಬ ದೇಶದೊಳಗಿನ ೨೫ ಗ್ರಾಮಗಳ ಹೆಸರನ್ನು ಬರೆದಿಟ್ಟಿದ್ದಾನೆ, ಅವು ಯಾವು ವೆಂದರೆ- 'ಬದಯಾಮೇಯಿ' ಇಂಡಿ' 'ಕಲ್ಲಿಗೇರಿ' 'ಮೋದೂಗಲ್ಲ' 'ಪೆತರ್ಗಲ' ಇವು ಕ್ರಮವಾಗಿ 'ಬಾದಾಮಿ' 'ಇಂಡೀ' ಕಲಕೇರಿ' 'ಮುದಗಲ್ಲ' 'ಪಟ್ಟದಕಲ್ಲ' ಮುಂತಾದ ಊರುಗಳು. ಬನವಾಸಿಯ ಹೆಸರೂ ಹೊನ್ನಾವರ ಮತ್ತು ಮಿರ್ಜಾನ್ ಬಂದರಗಳ ಹೆಸರೂ ಅದರಲ್ಲಿ ಉಕ್ತವಾಗಿದೆ. ಎರಡನೆಯ ಶತಮಾನದಲ್ಲಿ ಹುಟ್ಟಿದ ಅಹನಾನೂರ ಎಂಬ ತಮಿಳುಗ್ರಂಥದಲ್ಲಿ ಎರುಮೈ ನಾಡಿನ ಎಂದರೆ ಮಹಿಷ ಮಂಡಲ (ಮೈಸೂರ) ದೇಶದ ಅರಸನು ಪಾಂಡ್ಯರಾಜನೊಡನೆ ಯುದ್ದವಾಡಿದಂತೆ ಉಲ್ಲೇಖವಿದೆ. ೫ ನೆಯ ಶತಮಾನದ ಆದಿಭಾಗದಲ್ಲಿದ್ದ ವರಾಹಮಿಹಿರಾಚಾರ್ಯರ
ಪುಟ:ಕರ್ನಾಟಕ ಗತವೈಭವ.djvu/೬೮
ಈ ಪುಟವನ್ನು ಪ್ರಕಟಿಸಲಾಗಿದೆ
೬ ನೆಯು ಪ್ರಕರಣ – ಚಾಲುಕ್ಯರ ಪೂರ್ವದ ಕರ್ನಾಟಕದ ಇತಿಹಾಸ
೪೩