ಗ್ರಂಥದಲ್ಲಿಯೂ ಕರ್ನಾಟಕ ಎಂಬ ಶಬ್ದವು ಬಂದಿದೆ. ಆದರೆ ಇವೆಲ್ಲವುಗಳಿಂದ ಹೆಚ್ಚಿನ ಐತಿಹಾಸಿಕ ಸಂಗತಿಗಳೇನೂ ಗೊತ್ತಾಗುವುದಿಲ್ಲ. ಇರಲಿ.
ಹಿಂದುಸ್ಥಾನದ ವಿಷಯವಾಗಿ ನಮಗೆ ಗೊತ್ತಿದ್ದ ಇತಿಹಾಸವು ನಂದ, ಚಂದ್ರಗುಪ್ತರ ಕಾಲದಿಂದ ಎಂದರೆ ಕ್ರಿ.ಪೂ.ದಲ್ಲಿ ೪-೫ ಶತಮಾನಗಳಿಂದ ಪ್ರಾರಂಭವಾಗುತ್ತದೆಂದು ಹೇಳಬಹುದು, ಚಂದ್ರಗುಪ್ತನು ಕ್ರಿ.ಪೂ. ೩೨೧ರಲ್ಲಿ ಆಳಿದನೆಂಬ ಸಂಗತಿಯೇ ಎಲ್ಲಕ್ಕೂ ಪ್ರಾಚೀನವಾದ ಮತ್ತು ವಿಶ್ವಸನೀಯವಾದ ಐತಿಹಾಸಿಕ ಸಂಗತಿಯು ಹಿಂದುಸ್ಥಾನದ ಪ್ರಾಚೀನ ಇತಿಹಾಸದಲ್ಲಿ ಮುಖ್ಯವಾಗಿ ಎರಡು ಭಾಗಗಳನ್ನು ಮಾಡಬಹುದು, ಒಂದು ಉತ್ತರ ಹಿಂದುಸ್ಥಾನದ ಎಂದರೆ ವಿಂಧ್ಯದ ಉತ್ತರದ ಇತಿಹಾಸ. ಮತ್ತೊಂದು ದಕ್ಷಿಣ ಹಿಂದುಸ್ಥಾನದ ಅಥವಾ ದಕ್ಷಿಣಾ ಪಥದ ಇತಿಹಾಸ. ಇವೆರಡು ಇತಿಹಾಸಗಳು ಭಿನ್ನ ಭಿನ್ನವಿರುತ್ತವೆ. ಇವೆರಡರ ಸುಧಾರಣೆಯು ಭಿನ್ನ; ಇವೆರಡಕ್ಕೂ ತಮ್ಮ ತಮ್ಮ ವಿಶಿಷ್ಟ ಸಂಸ್ಕೃತಿಯಿರುತ್ತದೆ. ಆದರೂ ದಕ್ಷಿಣಾ ಪಥದ ಇತಿಹಾಸದ ಸಂಬಂಧವು ನಡುನಡುವೆ ಉತ್ತರ ಹಿಂದುಸ್ಥಾನದ ಕೂಡ ಬಂದಿರುವುದರಿಂದ, ನಾವು ಉತ್ತರ ಹಿಂದುಸ್ಥಾನದಲ್ಲಿ ಯಾವ ಯಾವ ರಾಜವಂಶಗಳು ಆಗಿ ಹೋದುವೆಂಬುದನ್ನು ಸ್ವಲ್ಪದರಲ್ಲಿ ಹೇಳುತ್ತೇವೆ.
ನಂದರೆಂಬ ಅರಸರನ್ನು ಸೋಲಿಸಿ ಚಂದ್ರಗುಪ್ತನು ಚಾಣಕ್ಯನೆಂಬವನ ಸಹಾಯದಿಂದ ರಾಜ್ಯ ಪದವನ್ನು ಪಡೆದು ಕ್ರಿಪೂ ೩೨೧ರಲ್ಲಿ ಪಟ್ಟವೇರಿದ ಸಂಗತಿ ಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುವರು. ಈ ಚಂದ್ರಗುಪ್ತನು ಮೌರ್ಯ ವಂಶದವನು. ಈ ಮೌರ್ಯವಂಶವು ಮುಂದೆ ಕ್ರಿ. ಪೂರ್ವದ ೧೮೪ರವರೆಗೆ ಆಳಿತು, ಚಂದ್ರಗುಪ್ತನ ಮೊಮ್ಮಗನೇ ಅಶೋಕನು, ಅವನು ಕ್ರಿ. ಪೂರ್ವದಲ್ಲಿ ೨೭೩ರಿಂದ ೨೩೨ರ ವರೆಗೆ ಅಂದರೆ ೪೧ ವರ್ಷ ಆಳಿದನು. ಇವನ ಕಾಲಕ್ಕೆ ರಾಜ್ಯ ವಿಸ್ತಾರವು ಅತಿಶಯ ದೊಡ್ಡದಾಗಿತ್ತು, ಉತ್ತರ ಹಿಂದುಸ್ಥಾನವೆಲ್ಲಾ ಇವನ ವಶದಲ್ಲಿ ಇದ್ದುದಲ್ಲದೆ ಪಶ್ಚಿಮಕ್ಕೆ ಅಫಗಾನಿಸ್ಥಾನವೂ ಇವನ ಆಧೀನದಲ್ಲಿಯೇ ಇತ್ತು, ದಕ್ಷಿಣದಲ್ಲಿ ಮೈಸೂರ ಪ್ರಾಂತದವರೆಗೆ ಇವನ ರಾಜ್ಯವು ಹಬ್ಬಿತ್ತು, ಈ ಹೆಸರಾದ ಅಶೋಕನ ವಂಶದವನಾದ ಬೃಹದ್ರಥನನ್ನು ಕೊಂದು, ಪುಷ್ಯಮಿತ್ರನೆಂಬ ಅವನ ಬ್ರಾಹ್ಮಣ ಸೇನಾಪತಿಯು 'ಸುಂಗ'ವಂಶವನ್ನು ಸ್ಥಾಪಿಸಿದನು, ಈ ವಂಶವು ಕ್ರಿ. ಪೂರ್ವದ ೧೮೪ರಿಂದ ೭೨ರ ವರೆಗೆ ಆಳಿತು. ಆ ಮೇಲೆ ಆಂದ್ರರೆಂಬ ತೆಂಕಣಿಗರು ಅಲ್ಲಿ ಅಳುತ್ತಿದ್ದರು, ಇವರು ಕ್ರಿ.ಶ.ದ ಅನಂತರ ೩ ನೆಯ ಶತ
ಪುಟ:ಕರ್ನಾಟಕ ಗತವೈಭವ.djvu/೬೯
ಈ ಪುಟವನ್ನು ಪ್ರಕಟಿಸಲಾಗಿದೆ
೪೪
ಕರ್ನಾಟಕ ಗತವೈಭವ