ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

viii ಕಡೆಗೆ ಅವರ ಒಲವು ಹೆಚ್ಚಿ ಕೈಗೆ ಸಿಕ್ಕ ಪುಸ್ತಕಗಳನ್ನು ಓದುತ್ತಲೇ ಹೋಗುವರು. ಆದರೆ ಆ ಪುಸ್ತಕಗಳಲ್ಲಿರುವ ಸಂಗತಿಗಳನ್ನು ವಿಮರ್ಶಿಸಲು ತಮಗೆ ಜ್ಞಾನವಿರುವದಿಲ್ಲ; ಇನ್ನೊಬ್ಬರನ್ನು ಕೇಳಿ ತಿಳಿದುಕೊಳ್ಳಲು ನಾಚಿಕೆ, ಹೀಗಾಗಿ ಸಹಜವಾಗಿ ಮನದಲ್ಲಿ ಹುಟ್ಟುವ ಎಷ್ಟೋ ಪ್ರಶ್ನೆಗಳು ಉತ್ತರ ಸಿಕ್ಕದೆ ಕಷ್ಟಪಡಿಸುತ್ತಿರುತ್ತವೆ. ಅಲ್ಲದೆ ಈಗ ಕಾಮಶಾಸ್ತ್ರದ ವಿಷಯದಲ್ಲಿ ಸಿಕ್ಕುವ ಪುಸ್ತಕಗಳಲ್ಲಿ ವಿಜ್ಞಾನಸಮ್ಮತವಾಗಿ (Scientific) ಇರುವದಿಲ್ಲ. ಅದರಲ್ಲಿಯೂ ಕನ್ನಡದಲ್ಲಿಯ ಪುಸ್ತಕಗಳು ಸತ್ಯಕ್ಕಿಂತ ಕಾವ್ಯದಿಂದಲೇ ಹೆಚ್ಚಾಗಿ ತುಂಬಿರುವವು. ಎಷ್ಟೋ ಸುಳು ಸಂಗತಿಗಳನ್ನು ಓದುಗರ ಮನದಲ್ಲಿ ಅವು ಬಿಂಬಿಸುವವು. ಅವುಗಳಲ್ಲಿ ಕೆಲವು ಸಂಗತಿಗ ಳನ್ನು ಇಲ್ಲಿ ಕೇಳಬಹುದು. 'ವೀರ್ಯದ ಒಂದು ಹನಿಯಾಗಬೇಕಾದರೆ ರಕ್ತದ ೪೦ ಹನಿ ಖರ್ಚಾಗುವವು. ಒಂದು ಸಲ ವೀರ್ಯಪತನವಾದರೆ ೩ ತಿಂಗಳ ಶಕ್ತಿ ಹೋಗುವದು. ವೀರ್ಯವು ಓಜಸ್ಸಾಗುವದು. ಸ್ತ್ರೀಯರಿಗೆ ಕಾಮವು ಹೆಚ್ಚು, ಸ್ತ್ರೀಸಂಗ ಮಾಡದಿರುವದು ಬ್ರಹ್ಮಚರ್ಯೆ, ಸಂತಾ ನವು ಹುಟ್ಟದಿರುವುದಕ್ಕೆ ಸ್ತ್ರೀಯು ಬಂಜೆಯಾಗಿರುವದೊಂದೇ ಕಾರಣ.' ಇಂಥ ಅನೇಕ ಅಶಾಸ್ತ್ರೀಯ ವಿಚಾರಗಳನ್ನು ಕಾಮಶಾಸ್ತ್ರದ ಅಯೋಗ್ಯ ಪುಸ್ತಕಗಳು ಹರಡುವವು. ಇವುಗಳನ್ನೇ ನಂಬಿದ ನಮ್ಮ ತರುಣ ತರುಣಿ ಯರ ಸಂಶಯಗಳೇನೂ ಕಡಿಮೆಯಾಗದೆ ಅಜ್ಞಾನಮಾತ್ರ ಹೆಚ್ಚಾಗುತ್ತದೆ. ಪ್ರೇಮಾಯತನದಲ್ಲಿಯ ನಮ್ಮ ವೈದ್ಯ ಸಂಘಕ್ಕೆ ಇವುಗಳನ್ನು ಕುರಿತು ೧೦-೧೨ ವರ್ಷಗಳಿಂದ ಗುಟ್ಟಾದ ಪತ್ರಗಳು ಬಹಳವಾಗಿ ಬರುತ್ತಲಿವೆ. ಅಂಥ ಪ್ರಶ್ನೆಗಳಿಗೆ ಉತ್ತರವಾಗುವಂತೆಯೂ, ಕನ್ನಡದಲ್ಲಿರುವ ಇಂಥ ಗ್ರಂಥ ಗಳ ಕೊರತೆಯನ್ನು ನೀಗಿಸುವಂತೆಯೂ, ವಿಜ್ಞಾನ ಶಾಸ್ತ್ರದ ನಿಯಮಗಳಿ ಗನುಸರಿಸಿಯೂ, ಕಾಮಶಾಸ್ತ್ರದ ವಿಷಯದಲ್ಲಿ ಎಷ್ಟೋ ಪುಸ್ತಕಗಳನ್ನು ಪ್ರಸಿದ್ಧಿಸಬೇಕೆಂಬ ಅಭಿಲಾಷೆಯು ನಮ್ಮ ಸಂಘಕ್ಕಿದೆ. ಆ ಅಭಿಲಾಷೆಯ ಪ್ರಥಮಚಿನ್ಮವೆಂದು ಈ ಪುಳಕವನ್ನು ಬರೆಯುವದಕ್ಕೆ ನಮ್ಮ ಗುರುವರ್ಯ ©11 ತಾರಾನಾಥರವರು ನನ್ನನ್ನು ಪ್ರೇರಿಸಿದರು. ಮತ್ತು ನಾನು ಬರೆದ ಈ ಅಗ್ನಿ ಪುಕವನ್ನು ವಿಜ್ಞಾನದೃಷ್ಟಿಯಿಂದ ತಿದ್ದಲಿಕ್ಕೆ ಮತ್ತು ಆ ವಿಷಯಗ ಬೆನ್ನು ನನಗೆ ಚೆನ್ನಾಗಿ ಮನಗಾಣಿಸಲಿಕ್ಕೆ ತಮ್ಮ ಅಮೂಲ್ಯ ಸಮಯವನ್ನು