ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ix ಸ್ವಲ್ಪವೂ ಬೇಸರಿಯದೆ ವೆಚ್ಚ ಮಾಡಿದ್ದಕ್ಕಾಗಿ ಅವರಿಗೆ ನಾನು ಕೃತಜ್ಞನಾಗಿ ದೇನೆ. ಎಲ್ಲರ ಮನದಲ್ಲಿಯೂ ಸಾಮಾನ್ಯವಾಗಿ ಪ್ರಶ್ನೆ ಯರೂಪವಾಗಿಯೇ ಸಂಶಯಗಳು ಹುಟ್ಟುತ್ತವಾದ್ದರಿಂದ ಪ್ರಶ್ಲೋರ ರೂಪವಾಗಿಯೇ ಇದನ್ನು ಬರೆಯುವದು ಯೋಗ್ಯವೆಂದೆನಿಸಿತು. ಈ ಪುಸ್ತಕಕ್ಕೆ ಸಿಕ್ಕುವ ಪ್ರೊತ್ಸಾ ಹನದಮೇಲೆ ಮುಂದಿನ ಪುಸ್ತಕಗಳ ಪ್ರಕಟನೆಯು ಅವಲಂಬಿಸಿದೆಯಾದ್ದ ರಿಂದ, ಕನ್ನಡ ಭಾಷಾಭಿಮಾನಿಗಳೂ, ಸರ್ವಾಂಗ ಸುಂದರ ಜ್ಞಾನಾಭಿಲಾ ಷಿಗಳೂ ಈ ಪುಸ್ತಕವನ್ನು ಪ್ರಚಾರಗೊಳಿಸಬೇಕು. ಈ ಪುಸ್ತಕದ ಕನ ಯಲ್ಲಿರುವ ಚಿಕಿತ್ಸಾ ಭಾಗವು ಸುಮಾರು ೨೦ ವರ್ಷಗಳಿಂದ ಲಕ್ಷಾವಧಿ ರೋಗ ಗಳನ್ನು ಗುಣಪಡಿಸಿದ ಶ್ರೀ|| ತಾರಾನಾಥರವರ ಸಲಹೆಯಿಂದಲೇ ಬರೆಯ ಲ್ಪಟ್ಟಿದೆಯಾದ್ದರಿಂದ ಪ್ರತಿಯೊಬ್ಬರೂ ಅವುಗಳನ್ನು ಉಪಯೋಗಿಸಿ ತಾವೂ ಸುಖಿಗಳಾಗಿ, ಪರೋಪಕಾರವನ್ನೂ ಮಾಡಬಹುದು. ಈ ಪುಸ್ತಕವನ್ನು ಓದಿದವರಲ್ಲಿ ಕೆಲವರಾದರೂ ತಮ್ಮ ಕಷ್ಟಗಳನ್ನು ನೀಗಿಸಿಕೊಂಡು, ಕಾಮ ಶಾಸ್ತ್ರದ ವಿಷಯದಲ್ಲಿರುವ ತಮ್ಮ ಕುತಾಭಿಪ್ರಾಯವನ್ನು ಬದಲಿಸಿದರೆ ನಮ್ಮ ಯತ್ನವು ಸಾರ್ಥಕವಾಯಿತೆಂದು ನಂಬಿದ್ದೇವೆ. ಇತಿ ಗ್ರಂಥಕರ್ತ, ಗೋಪಾಲಕೃಷ್ಣ,