ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಮದ ಗುಟ್ಟು - -- ೧ನೇ ಪ್ರಶ್ನೆ :-ಬ್ರಹ್ಮಚರ್ಯೆಯು ಮೇಲೋ ? ಕಾನು ಜೀವನವು ಮೇಲೋ ? ಉತ್ತರ :- ಬ್ರಹ್ಮಚರ್ಯೆಯೆಂದರೆ “ ಮನವು ಕಾಮುಕವಾಗಿ, ನಿರಂತರವೂ ಕಾಮವಿಲಾಸದ ಚಿತ್ರಗಳನ್ನ ಕಲ್ಪಿಸುತ್ತಿದ್ದರೂ ಸಂಭೋಗ ವನ್ನು ಮಾತ್ರ ಮಾಡದಿರುವದು ” ಎಂದು ನಿಮ್ಮ ಅರ್ಥವಿದ್ದರೆ ಅದು ಕೆಟ್ಟದು. ಕಾಮಜೀವನವೆಂದರೆ “ ಮನದಲ್ಲಿ ಕಾಮಭಾವನೆಯು ಹುಟ್ಟಿದ ಕೂಡಲೆ ಪಶುಗಳಂತೆ ಸ್ಥಳ, ಕಾಲ, ಮಿತಿ, ರೀತಿಗಳಿಲ್ಲದೆ ಸಂಭೋಗಿಸು ವದು ” ಎಂದು ನಿಮ್ಮ ಅರ್ಥವಿದ್ದರೆ ಅದೂ ಕಟ್ಟದು. ಬ್ರಹ್ಮಚರ್ಯೆಯ ನಿಜವಾದ ಅರ್ಥವೇ ಬೇರೆಯಾಗಿದೆ. ಬಾಹ್ಯ ಅಥವಾ ಆ೦ತರಿಕ ಉತ್ತೇಜನ (Stimulus) ಕ್ಕೆ ಸಿಕ್ಕುವ ಭಾವನಾರೂಪದ ಉತ್ತರವು (Response), ಮನಸ್ಸಿನ ಶಿಕ್ಷಣವನ್ನವ ಲಂಬಿಸಿದೆ. ಒಂದು ವಸ್ತುವಿನ ದರ್ಶನ ಅಥವಾ ಸ್ಮರಣೆಯಿಂದ ಎಲ್ಲ ರಲ್ಲಿಯೂ ಒಂದೇ ವಿಧದ ಭಾವನೆ ಹುಟ್ಟುವದಿಲ್ಲ. ಹೀಗೆ ಉತ್ತೇಜನಕ್ಕೆ ಸಿಕ್ಕ ಉತ್ತರವು ಎಷ್ಟರಮಟ್ಟಿಗೆ ನಮ್ಮ ನೈಜ ಪ್ರಗತಿಗೆ ತಡೆಯಾಗುವದೋ ಅಷ್ಟರಮಟ್ಟಿಗೆ ನಮ್ಮ ಮನದ ಕೀಳ್ಮೆಯು ವ್ಯಕ್ತವಾಗುತ್ತದೆ. ಆದ್ದರಿಂದ ಅನಿರೋಧಿತ ಪ್ರಗತಿಯನ್ನ ಪೇಕ್ಷಿಸುವವರು, ಉತ್ತೇಜನಕ್ಕೆ ಯಾವಾಗಲೂ ತಮ್ಮಲ್ಲಿ ಯೋಗ್ಯವಾದ ಉತ್ತರವೇ ಹುಟ್ಟುವಂತೆ ಮನಸ್ಸಿಗೆ ಶಿಕ್ಷಣವನ್ನು ಕೊಡಬೇಕು. ಹಾಗೆ ಶುದ್ಧವಾಗಿ ಬಲಗೊಂಡ ಉತ್ತರ ಪರ* ಜೀವನವು

  • ಉತ್ತೇಜನೋತ್ತರಸರಜೀವನದ ವಿಷಯವನ್ನು ಚನ್ನಾಗಿ ತಿಳಿದು ಕೊಳ್ಳಲು, ಶ್ರೀ ಪ೦ಡಿತ ತಾರಾನಾಥರು ಬರೆದ “ ಧರ್ಮಸ೦ಭವ ” ದ ಕನ ಯು ಎರಡು ಅಧ್ಯಾಯಗಳನ್ನು ಓದಿ,