________________
ಯಾವ ದೃಶ್ಯದಿಂದಲೂ ಕ್ಲಿಷ್ಟಭಾವನೆಯನ್ನು ಹೊಂದುವದಿಲ್ಲ. ಅಂಥವರಿಗೆ ಕಾಮೋತ್ತೇಜಕ ಉತ್ತೇಜನ ಸಿಕ್ಕರೂ ಅವರಲ್ಲಿ ಕಾಮಭಾವನೆಯೇ ಹುಟ್ಟು ವದಿಲ್ಲ ; ಹುಟ್ಟಿದರೂ ಅದಕ್ಕೆ ಸಂಭೋಗರೂಪದ ಉತ್ತರವನ್ನೇ ಕೊಡದೆ, ಆ ಉತ್ತೇಜನವನ್ನು ಲಲಿತಕಲೆಗಳಲ್ಲಾಗಲಿ, ಧ್ಯಾನ ಸಂಧಾನಗಳಲ್ಲಾಗಲಿ ಹೊರಪಡಿಸುವರು. ಅದೀಗ ನಿಜವಾದ ಬ್ರಹ್ಮಚರ್ಯೆ, ಅದನ್ನು ಅಗತ್ಯ ವಾಗಿ ಎಲ್ಲರೂ ಸಾಧಿಸಬೇಕು. ಇನ್ನು ಪ್ರಸ್ತಾವನೆಯಲ್ಲಿ ಹೇಳಿದಂತೆ ಹಸಿವು ಬಾಯಾರಿಕಗಳಂತೆಯೇ ಕಾಮವೂ ಒ೦ದು ಸಹಜ ಸಂವೇದನೆಯೇ ಆಗಿದೆ. ಮಿತಿ ಮಾರಿ ಅಥವಾ ಯಾವಾಗಲೂ ಹಸಿವೆಯಾಗುವದು ಹೇಗೆ ರೋಗವೆನಿಸುವದೋ, ಹಾಗೆಯೇ ಔಪರೀತವಾದ ಕಾಮವೂ ಯಾವಾಗಲೂ ಹುಟ್ಟುವ ಕಾಮವೂ ಮಾನಸಿಕ ರೋಗದ ಚಿಹ್ನವಾಗಿದೆ. ಆದ್ದರಿ೦ದ ಅ೦ಥ ಕಾಮವು ನಿಂದ್ಯವೇ. ಅದಕ್ಕೆ ಮನವನ್ನು ಬಲಗೊಳಿಸಿ ಸ್ಥಿರಗೊಳಿಸಿ ದಾಂಪತ್ಯ ಜೀವನದಲ್ಲಿ ಪಾತ್ರ, ಸ್ಥಳ, ಮಿತಿ, ಸತ್ವಗಳನ್ನರಿತು ಸಂಭೋಗಿಸುತ್ತಿದ್ದರೆ ಯಾವ ಅಪಾಯವೂ ಆಗ ಲಾರದು. ಹಸಿವೆಯಾದಾಗ ಊಟಮಾಡುವದು ಹೇಗೆ ಅಸಹ್ಯವೂ ಪಾಪ ಕರವೂ ಅಲ್ಲವೋ ಹಾಗೆ ನಿರೋಗವಾದ ಕಾಮವು ಹುಟ್ಟಿದರೆ ಅದನ್ನು ಸತಿ ಪತಿಯರು ಪರಸ್ಪರರ ಮನದ ಒಲವನ್ನರಿತು ಪ್ರೇಮದಿಂದ ಸಂಭೋಗಿಸು ವದು ಪಾಪಕರವೂ ಅಲ್ಲ ; ಅಸಹ್ಯವೂ ಅಲ್ಲ. ಆದ್ದರಿಂದ ಬ್ರಹ್ಮಚರ್ಯೆ ಮತ್ತು ಕಾಮಜೀವನಗಳ ಗುಣಾವಗುಣ ಗಳು ಅವುಗಳ ಅರ್ಥ ಮತ್ತು ಉಪಯೋಗವನ್ನವಲಂಬಿಸಿವೆ. ೨ನೇ ಪ್ರಶ್ನೆ:-ಹೆಂಗಸರಲ್ಲಾಗಲಿ, ಗಂಡಸರಲ್ಲಾಗಲಿ ಕಾಮ ಜೀವನಕ್ಕೆ ಯೋಗ್ಯವಾದ ವಯಸ್ಸಾವುದು ? ಉತ್ತರ:-ಗಂಡಸರಲ್ಲಿ ವೀರ್ಯವೇನೋ ೧೪-೧೫ ನೇ ವರ್ಷಕ್ಕೆ ವಿಸರ್ಜನವಾಗಲಾರಂಭಿಸುವದು. ಆದರೆ ಅದು ಕಾಮಜೀವನದ ಯೋಗ್ಯ ತೆಯ ಲಕ್ಷಣವಲ್ಲ. ಮಕ್ಕಳಿಗೆ ಹಲ್ಲು ಬಂದ ಕೂಡಲೆ ಚಕ್ಕಲಿ ತಿನ್ನಲಿಕ್ಕೆ ಹೇಗೆ ಬರುವದಿಲ್ಲವೋ ಹಾಗೆ ವೀರ್ಯೋದೈವವೇ ಕಾಮವಿಲಾಸಕ್ಕೆ ಅರ್ಹತೆ ಯಲ್ಲ, ಕಾಮಜೀವನದ ಸಾಧನಗಳು ಅದೇ ಕೋಮಲವಾಗಿ ಚಿಗಿತು