ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫ ೨ ಭೇದಗಳಿರುವವು. (೧) ವೀರ್ಯವು ದಿನೇದಿನೇ ನಿರ್ಮಿತವಾಗಿ ವೀರ್ಯಾ ಶಯಗಳಲ್ಲಿ ತುಂಬುತ್ತಿರುತ್ತದೆ. ಅವುಗಳು ತುಂಬಿರುವಾಗ, ಮಲಗಿದ ಸಮ ಯದಲ್ಲಿ ವೀರ್ಯಾಶಯದ ಒತ್ತಡದಿಂದ, ಜನನೇಂದ್ರಿಯಕ್ಕೆ ಕಾಮಕೇ೦ದ್ರ ದಿಂದ ಪ್ರತ್ಯೇಕವಾಗಿ ಬಂದ ವರವು (ನರ್ವೈ ಅರ್ಜಂಟಿಸ್) ಕೆರಳುವದು. ಅದರ ಉತ್ತೇಜನದಿಂದ ಸಂಚಾಲಕ (Mitor) ನರಗಳೂ ಉದ್ಯೋಗ ಗೊ೦ಡು, ಲಿಂಗವು ಉದ್ರೇಕವಾಗುವದು. ಆಗ ಆ ಮನುಷ್ಯನಿಗೆ ಬೇರೆ ಬೇರೆ ಕನಸುಗಳು ಬೀಳಬಹುದು. ವಿಶೇಷವಾಗಿ, ಯಾವದೋ ಒಬ್ಬ ಸ್ತ್ರೀಯ ಸಂಗಡ ಸಂಭೋಗಿಸಿದಂತೆ ಅನಿಸಿ ವೀರ್ಯಸ್ಕಲನವಾಗಿ ಬಿಡು ವದು. ಆ ವೀರ್ಯವು ವೀರ್ಯಾಶಯವನ್ನು ಬಿಟ್ಟು ಬರುವಾಗ ಒಂದು ವಿಧದ ಸುಖವೆನಿಸಿ ನಿದ್ರೆಯಿಂದ ಎಚ್ಚರವಾಗುವದು. ಈ ಪ್ರಕಾರವಾಗಿ ೧೫-೨೦ ದಿನಗಳಿಗೊಮ್ಮೆ ಆದರೆ ಅದು ರೋಗವಲ್ಲ. ಆದರೆ ಮೇಲೆ ಹೇಳಿ ದಂತೆ ಲಿಂಗೋದ್ರೇಕವೂ, ಸ್ವಪ್ನವೂ ಆಗಿ, ಸೈಲನವಾದಮೇಲೆ ಎಚ್ಚರವೂ ಆಗದಿದ್ದರೆ ಅದು ರೋಗವೆಂದು ತಿಳಿದು ಚಿಕಿತ್ಸೆಗೆ ಹಾಕಬೇಕು. (೨) ಸಹಜ ಸೃಲನದ ಇನ್ನೊಂದು ಭೇದವೆಂದರೆ, ಅಯೋಗ್ಯ ಆಹಾರವಿಹಾರ ಗಳಿ೦ದಲೂ, ಕೃತ್ರಿಮ ಮೈಥುನದ ನಿವಾರಣೆಗೆ ಹೇಳಿದ ನಿಯಮಗಳ (೭ನೇ ಪ್ರಶ್ನೆ) ವಿರುದ್ಧಾಚರವೆಯಿಂದಲೂ, ಅಕಾಲದಲ್ಲಿ ವೀರ್ಯಾಂಗಗಳು ಉದ್ರೇಕಗೊಂಡು ಜೈಲನವಾಗುವದು. ಸ್ವಪ್ನ ಸೃಲನದ ನಿವಾರಣೆಗೆ ೨ ನೇ ಪ್ರಶ್ನೆಯ ಉತ್ತರವನ್ನೇ ಚನ್ನಾಗಿ ಪಾಲಿಸಿದರೆ ಗುಣವಾಗುವದು. ಔಷಧಗಳಿಗೆ ಪುಸ್ತಕದ ಕೊನೆಯ ಭಾಗ ನೋಡಿರಿ. = ಸಿಕ್ಕ ಸಿಕ್ಕ ವೈದ್ಯರಿಗೆ ಅಥವಾ ಡಾಕ್ಟರರಿಗೆ ನಿಮ್ಮ ರೋಗವನ್ನು ಹೇಳಿ ದರೆ ಅವರು ದುಡ್ಡಿನಾಶೆಯಿಂದ, ಸಹಜ ಸೃಲನವನ್ನು ಕೂಡ ಭಯಂಕರ ವಾಗಿ ವರ್ಣಿಸಿ ನಿಮ್ಮನ್ನು ಗಾಬರಿಗೊಳಿಸಬಹುದು ; ಬೆಲೆಯುಳ್ಳ ಔಷಧ ಗಳನ್ನು ಕೊಂಡುಕೊಳ್ಳಲೂ ಹಚ್ಚಬಹುದು. ಆದರೆ ಯೋಗ್ಯ ಆಹಾರ ವಿಹಾರ ಕ್ರಮಗಳನ್ನಿಡದೆ ಬರಿ ಔಷಧಗಳಿ೦ದೇನೂ ಆಗಲಾರದೆಂದು ಜ್ಞಾ ಪಕದಲ್ಲಿಟ್ಟುಕೊಳ್ಳಿ, ರೋಗದ ಮೂಲಕಾರಣವನ್ನೇ ಹುಡುಕಿ ಅದನ್ನು ಕಿತ್ತೊಗೆಯಲು ಯತ್ನಿಸಬೇಕು.