ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸುತ್ತಲೂ ಒಂದು ವಿಧದ ಕಸರು ಕೂತು ಕಾಮವಿಕಾರಗಳಿಗೆ ಕಾರಣವಾಗು ವುದು. (೩) ಲಿಂಗವು ಉದ್ರೇಕವಾದಾಗ ಮಣಿಯು ಹೊರಗೆ ಬರದೆ ಸಂಭೋಗದಲ್ಲಿ ತುಂಬ ನೋವಾಗುವದು. (೪) ಮಣಿಯ ಸುತ್ತಲೂ ಪ್ರಮೇಹದ ಕ್ರಿಮಿಗಳಿಗೆ ಅವಕಾಶವಾಗಬಹುದು. ಮುಂದೊಗಲು ಸಂಕು ಚಿತವಿಲ್ಲದೆ ಇದ್ದರೂ ಅದು ತುಂಬ ಉದ್ದವಾಗಿಯೂ ಇರಬಾರದು. ಅದ ರಿಂದಲೂ ಮೇಲಿನ ಕೆಲವು ತೊಂದರೆಗಳಾಗುವವು. ಮುಂದೊಗಲನ, ಮಣಿ ಯಿಂದ ಪೂರ್ಣ ಹಿಂದಕ್ಕೆ ಎಳೆಯಲು ಬಂದರೆ, ಉದ್ರಿಕ್ತನಾದಾಗ ಮಣಿ ಯು ತಾನೇ ಹೊರಗೆ ಬರುವಹಾಗಿದ್ದರೆ ಯಾವ ಕಷ್ಟವೂ ಬರಲಾರದು. ಇದಕ್ಕೆ (ಸಂಕುಚಿತ ಮುಂದೊಗಲಿದ್ದರೆ) ಚಿಕಿತ್ಸೆಯೇನೆಂದರೆ:ಮುಂದೊಗಲನ್ನು ಚನ್ನಾಗಿ ಮು೦ದಕ್ಕೆ ಜಗ್ಗಿ ಅದರಲ್ಲಿ ಒಂದು ಸಣ್ಣ ಪಿಚಕಾರಿಯಿಂದ ೧ ಯಿಂದ ೨ ಔನವರೆಗೆ ಎಳ್ಳಿನ ಎಣ್ಣೆಯನ್ನು ಒಳಗೆ ಹೊಡೆಯಬೇಕು. ಅದು ಮಣಿಯ ಸುತ್ತಲೂ ಹೋಗಿ ಅಲ್ಲಿಯ ಸ್ನಾಯುಗಳನ್ನು ಶಿಥಿಲಗೊಳಿಸಿ ಮುಂದೊಗಲನ್ನು ಹಿಗ್ಗುವಂತೆ ಮಾಡುವದು. ಈ ಚಿಕಿಯನು ೧೨೫-೨೦ ದಿನಗಳವರೆಗೆ ದಿನಾಲು ತಪ್ಪದೆ ಮಾಡ ಬೇಕು. ಇದರಿಂದ ನಮ್ಮ ಆಶ್ರಮದಲ್ಲಿ ಎಷೆ ರೋಗಿಗಳಿಗೆ ಗುಣವಾಗಿದೆ. ಇದರಿಂದ ಗುಣವಾಗದೆ ಮೇಲೆ ಹೇಳಿದ ತೊಂದರೆಗಳೆಲ್ಲ ಇದ್ದರೆ ಮುಂದೊಗಲನ್ನು ಕೆಯಿಸಿಬಿಡುವದೊಳ್ಳೆದು. ಅದೊಂದು ಕಷ್ಟಕರವಾದ ಚಿಕಿತ್ಸೆಯಲ್ಲ. ಅದನ್ನು ಕೇಯಿಸಿಕೊಂಡವರು ಒಂದು ತಿಂಗಳೊಳಗೆ ಲಿಂಗ ವನ್ನು ಸಂಭೋಗಕ್ಕೆ ಉಪಯೋಗಿಸಬಹುದು. ಮುಂದೊಗಲನ್ನು ಕೂಲಿ ಸುವದರಿಂದ ಮಣಿಯು ಯಾವಾಗಲೂ ಹೊರಗೇ ಉಳಿದು, ಬಟ್ಟೆಬರೆಗಳ ಘಕ್ಷಣದಿಂದ ಅದರಲ್ಲಿರುವ ಹೆಚ್ಚಾದ ಚುರುಕುತನವು (Sensitiveness) ಕಡಿಮೆಯಾಗುವದು. ಅದರಿಂದ ಸಂಭೋಗದಲ್ಲಿ ಹೆಚ್ಚು ಉದ್ವೇಗವಾಗದೆ ವೀರ್ಯಸ್ಕಲನವೂ ಸ್ವಲ್ಪ ತಡವಾಗಿ ಆಗುವದು. ಈ ಮೂಲಕ ಸಂಭೋಗ ಸುಖವನ್ನೂ ಸ್ವಲ್ಪ ಹೆಚ್ಚು ಹೊತ್ತು ಅನುಭವಿಸಬಹುದು. ೧೯ನೇ ಪ್ರಶ್ನೆ :- ದಿನದಲ್ಲಿ ಸಂಭೋಗಕ್ಕೆ ಯೋಗ್ಯವೇಳೆ ಯಾವದು ?