________________
ಉತ್ತರ:-ಸಾಮಾನ್ಯವಾಗಿ ಎಲ್ಲ ಕಡೆಗೆ ಸಂಭೋಗವನ್ನು ರಾತ್ರಿಯೇ ಆಚರಿಸುವ ರೂಢಿ ಹೆಚ್ಚು. ಆಯುರ್ವೇದವೂ ರಾತ್ರಿಕಾಲದ ಸಂಭೋಗ ವನ್ನೇ ಸಮರ್ಥಿಸುವದಲ್ಲದೆ " ನೋಪೇಯಾತಿ............ ತಥಾ ಮಧ್ಯ ದಿನೇಪಿಚ ?” ಎಂದು ಹಗಲಿನ ಭೋಗವನ್ನು ಪೂರ್ಣ ನಿಷೇಧಿಸುತ್ತದೆ. ಆದರೆ ಶಾಸ್ತ್ರಗಳಲ್ಲಿಯು ಬರಿ ಶಬ್ಬಗಳ ಸಂಗಡ ಹೋರಾಡಿ, ಅವುಗಳಿಗೆ ಯೋಗ್ಯವಾದ ಪರಿಸ್ಥಿತಿ ಕಾರಣಗಳನ್ನು ಹುಡುಕದ ಈಗಿನ ಕಾಲದಲ್ಲಿ ಹೆಚ್ಚು ಜನರು ರಾತ್ರಿ ಊಟವಾದ ಕೂಡಲೆ ಸಂಭೋಗವನಾಚರಿಸುವರು. ಮದುವೆಯಾದ ದಂಪತಿಗಳ ರೋಗದ ಬಹುಭಾಗವು ಈ ವಿಧದ ಸಂಭೋಗ ದಿಂದಲೇ ಹುಟ್ಟುತ್ತದೆಂದು ಹೇಳಬಹುದು. ಊಟವಾದ ಕೂಡಲೆ ಸಂಭೋ ಗಿಸಿದರೆ ಜೀರ್ಣಾಂಗಗಳೆಲ್ಲ ಕಟ್ಟು ಬಲಗುಂದುವವು. ಜೀರ್ಣಾ೦ಗಗಳೂ, ಜನನೇಂದ್ರಿಯಗಳೂ ಹತ್ತಿರವೆ ಇರುವದರಿಂದ ಅವುಗಳಲ್ಲಿ ಒ೦ದರ ರೋ ಗವು ಇನ್ನೊಂದಕ್ಕೆ ಸುಲಭವಾಗಿ ಹರಡುತ್ತದೆ. ಸ೦ಭೋಗ ಪೂರ್ವದಲ್ಲಿ ಯೋಚಿಸತಕ್ಕ ವಿಷಯವೇನೆಂದರೆ :ಸಂಭೋಗಕ್ಕೆ ಮನದಲ್ಲಿ ಉಲ್ಲಸವಿರಬೇಕು. ಅಲ್ಲದೆ ಸ೦ಭೋಗವಾದ ಮೇಲೂ ವಿಶ್ರಾಂತಿ ಬೇಕು. ಸಾಮಾನ್ಯವಾಗಿ ಹೆಚ್ಚು ಜನರಿಗೆ ದಿನವೆಲ್ಲ ದುಡಿಯುವದರಿಂದ ದೇಹ ಮನಸೂ ದಣಿದಿರುತ್ತವೆ. ಆಗ ಊಟಮಾಡಿ ದರೆ ಸ್ವಲ್ಪ ಸಮಾಧಾನವೆನಿಸಿದರೂ ಕೂಡ ಕೆಲಸಮಾಡುವ ಹುರುಪು ಇರುವದಿಲ್ಲ. ಆದರೆ ಸಂಭೋಗದಲ್ಲಿ ದೇಶಾದ್ಯಂತ ನರಗಳೆಲ್ಲ ಉದ್ರೇಕ ಗೊಳ್ಳಬೇಕು ಮತ್ತು ನೈಜವಾಗಿ ಹುರುಪಿಲ್ಲದಾಗ ಉದ್ರೇಕಗೊಳಿಸುವದ ರಿಂದ ನರಗಳೆಲ್ಲ ದುರ್ಬಲವಾಗುವವು. ಇನ್ನು ಸಂಭೋಗಾನಂತರವೂ ಉತ್ತೇಜಿತ ನರಗಳಿಗೆಲ್ಲ ತುಂಬ ವಿಶ್ರಾಂತಿ ಬೇಕಾಗಿರುವದರಿಂದ ಆಗಲೂ ಕೆಲಸದ ಜಿ೦ತೆ ಇರಬಾರದು. ಮತ್ತು ಕೆಲಸದ ಚಿಂತೆ ಬಿಡಬೇಕಾದರೆ ರಾತ್ರಿಯೇ ಹೊರತು ಬೇರೆ ಸಮಯವಿಲ್ಲ. ಇವೆಲ್ಲ ವಿಚಾರಗಳಿಂದ ನಾವೇನು ನಿರ್ಧರಿಸಬಹುದೆಂದರೆ :- ಸಾಯ೦ಕಾಲ ಬೇಗ ಊಟಮಾಡುವ ರೂಢಿ ಇಟ್ಟುಕೊಳ್ಳ ಬೇಕು. ಊಟವಾದಮೇಲೆ ಆನಂದದಿ೦ದ ಒರಗಿ ಹರಟೆ ಕೊಚ್ಚುವದರಲ್ಲಾಗಲಿ, ಸಂಗೀತ ಭಜನೆಗಳಲ್ಲಾಗಲಿ, ವರ್ತಮಾನ ಸಂಗ್ರ ಹದಲ್ಲಾಗಲಿ ೨-೩ ಗಂಟೆಗಳ ಕಾಲ ಕಳೆಯಬೇಕು.