ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೀಗೂ ಈ ನಿಯಮವೇ ಹತ್ತುತ್ತದೆ. ಗಂಡಸು ಮಾತ್ರ ಊಟ ಮಾಡಿ ಚಕ್ಕಂದದಿಂದಿದ್ದು ಹೆಂಡತಿಯು ಮಧ್ಯರಾತ್ರಿಯವರೆಗೆ ಮನೆಗೆಲಸ ದಲ್ಲಿ ದುಡಿದು ದಣಿದು ಕೋಣೆಗೆ ಬಂದಕೂಡಲೆ ಅವಳಿಗೆ ವಿಶ್ರಾಂತಿಕೊಡದೆ, ಪುನಃ ಅವಳನ್ನು ಕಾಮಲೀಲೆಗೆ ಕರೆಯುವದೆಂದರೆ ತೀರ ಪಾಶವೀ ವೃತ್ತಿ ಯಲ್ಲವೆ ? ಸ್ತ್ರೀಯರೂ ಪುರುಷರೂ ಮೇಲೆ ಹೇಳಿದಂತೆ ಬೇಗ ಊಟತೀರಿಸಿ ಇಬ್ಬರೂ ಸುಖಸಲ್ಲಾಪದಲ್ಲಿ ೩-೪ ಗಂಟೆಗಳ ಕಾಲಕಳೆದು ನಿದ್ದೆ ಹೋಗ ಬೇಕು. ಇದರಿಂದ ದಣಿದ ಮನಸ್ಸಿಗೂ, ದೇಹಕ್ಕೂ ವಿಶ್ರಾ೦ತಿ ಸಿಕ್ಕಿ, ಉಲ್ಲಾಸವೂ ಹುಟ್ಟುವದು, ಹೀಗೆ ಸುಖವಾಗಿ ಒಂದು ನಿದ್ರೆಯಾದಮೇಲೆ ಪ್ರೇಮದಿಂದ ಕೂಡಿ ಸಂಭೋಗಮಾಡುವದು ಅತ್ಯುತ್ತಮವಾದದ್ದು, ಪ್ರಾತಃ ಕಾಲದಲ್ಲಿ ಮೂರು ಅಥವಾ ನಾಲ್ಕು ಗಂಟೆಯ ಸಮಯವು ಅತ್ಯಂತ ಉಲ್ಲಾಸಭರಿತವಾಗಿರುವದು. ಅಲ್ಲದೆ ಸೂರ್ಯನ ಕಿರಣಗಳು ಪರೋಕ್ಷ ವಾಗಿ, ಭೂಮಿಯಮೇಲೆ ಆಗಲೇ ಪಸರಿಸಲಾರಂಭಿಸುವವು. ಮತ್ತು ಗರ್ಭ ಧಾರಣಕ್ಕೂ, ವೀರ್ಯೋತ್ಪತ್ತಿಗೂ ಸೂರ್ಯಕಿರಣಗಳಲ್ಲಿರುವ ಅಗ್ನಿತತ್ವ (ತೇಜಸ°) ವೇ ಮುಖ್ಯವಾದದ್ದು, ಆದ್ದರಿಂದ ಆಗ ಗರ್ಭಧಾರಣವಾದರೆ ಸಂತಾನವೂ ತೇಜಸ್ವಿಯಾಗುವದು. ಮತ್ತು ಸಂಭೋಗದಿಂದಾದ ನರಗಳ ಅಲ್ಪ ಆಯಾಸವೂ ಸತ್ವ ಪ್ರಧಾನವಾದ ತೇಜಸ್ಟಿರಣಗಳಿಂದ ಕಡಿಮೆಯಾಗು ವದು. ಆದ್ದರ೦ದ ಬೆಳಗಿನ ಸಂಭೋಗವೇ ಅತ್ಯುತ್ಕೃಷ್ಟವೆಂದು ವಿಜ್ಞಾ ನವು ಹೇಳುತ್ತದೆ. ಸಂಭೋಗಾನಂತರ, ವಿಶ್ರಾಂತಿಗೂ ಎರಡು ಗಂಟೆ ಇರುವದಲ್ಲದೆ, ಬೆಳಗಿನ ನಿದ್ದೆ ಯ ತುಂಬ ಶಾಮಕ (Soothing) ಗುಣ ಉಳ್ಳದ್ದಾಗಿದೆ. ಸಂಭೋಗವಾದಮೇಲೆ ಸ್ವಾಭಾವಿಕವಾಗಿ ಬರುವ ನಿದ್ರೆ ಯನ್ನು ತಡೆಯದೆ ಶಾಂತವಾಗಿ ಮಲಗಿಬಿಡಬೇಕು. ಇದಕ್ಕೆಲ್ಲ ಹಗಲಿನಲ್ಲಿ ಅನುಕೂಲವಿಲ್ಲದಿರುವದರಿಂದ ಬೆಳಗಿನ ಸಮಯವೇ ಸಂಭೋಗಕ್ಕೆ ಯೋಗ್ಯ ವಾದದ್ದು. ಬೆಳಗಿನ ಸಂಭೋಗಕ್ಕೆ ಮನಸ್ಸು ಇಲ್ಲದವರು ಕನಿಷ್ಠ ಊಟವಾದ ಮೇಲೆ ೫ ಗಂಟೆಗಳಾದರೂ ವಿಶ್ರಾಂತಿ ತೆಗೆದುಕೊಂಡು ಆಮೇಲೆ ಸಂಭೋಗಿ ಸುವದು ಒಳ್ಳೇದು.