ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬ ಈಗ ನಮ್ಮ ಸಮಾಜದ ಮೂಢತನದಿಂದ ವಿಷಮಸ್ವಭಾವದ ದಂಪತಿ ಗಳು ಬಹಳವಾಗಿ ಕಂಡುಬರುತ್ತಾರೆ. ಗಂಡನು ಕಾಮುಕ ಸಿದ್ದರೆ ಹೆಂಡತಿ ದುರ್ಬಲಳೂ, ಹೆಂಡತಿಯು ಅತಿಕಾಮಿಯಾಗಿದ್ದರೆ ಗಂಡಸು ಅಶಕ್ತನೂ ಆಗುತ್ತಾನೆ. ಇ೦ಥ ಸ್ಥಿತಿಯಲ್ಲಿ ಸಂಭೋಗಕ್ಕೆ ಕಾಲನಿಬಂಧನೆಯನ್ನು ಹಾಕುವದು ಕಷ್ಟ. ಹೆಂಗಸಿನಲ್ಲಿ ಸಾಮಾನ್ಯವಾಗಿ ಬಾಹ್ಯ ಕಾರಣವಿಲ್ಲದೆ ಕಾಮವು ಹುಟ್ಟುವದಿಲ್ಲ. ಹುಟ್ಟಿದರೂ ಅದನ್ನು ತಾಳ್ಮೆ, ಲಜ್ಜೆ, ಭಯಗ ಳಿಂದ ಅದನ್ನು ತಡೆದಿಡಲೂ ಅವಳು ಶಕ್ತಳು. ಆದರೆ ಗಂಡಸಿನ ವಿಚಾರ ಇದಕ್ಕೆ ತೀರವಿರುದ್ದ. ಅವನಿಗೆ ಪುರಸೊತ್ತು ಸಿಕ್ಕಾಗಲೆಲ್ಲ ಅವನು ಸಂಸ್ಕೃತ ಮನುಷ್ಯನಲ್ಲದಿದ್ದರೆ ಕಾಮವಾಸನೆಯೆ ಅವನಲ್ಲಿ ತಲೆಹಾಕು ತದೆ. ಶಯ್ಯಾಗೃಹದಲ್ಲಿ ಕಾಲಿಟ್ಟ ಕೂಡಲೆ ಅವನಿಗೆ ಮೊದಲು ಹೊಳೆಯು ವದು ಸಂಭೋಗದ ವಿಚಾರ. ಅವನು ದಿನಾಲು ಸಂಭೋಗವನ್ನು ಮಾಡ ದಿದ್ದು ದರ ಕಾರಣವು ಕಾಮವಾಸನೆಯ ಅಭಾವವಲ್ಲ; ಆದರೆ ಅದನ್ನು ಆಚರಿ ಸುವ ಶಕ್ತಿಯ ಅಭಾವ, ಶಕ್ತಿಯಿದ್ದರೆ ದಿನಕ್ಕೆ * ಸಮಸಲವಾದರೂ ರತಿವಿಲಾಸದಲ್ಲಿ ಮಗ್ನನಾಗಿಯೇ ಬಿಡುತ್ತಿದ್ದನು. ಆದರೆ ಹೆಂಗಸು ಹಾಗಲ್ಲ. ಅವಳಿಗೆ ಅದೊ೦ದು ಚಟವಾಗದೆ ಇದ ರೆ, ಅವಳಾಗಿ ಸರ್ವಥಾ ಗ೦ಡನನು ಒತ್ತಾಯ ಪಡಿಸುವದಿಲ್ಲ. ಒಂದು ವೇಳೆ ಒತ್ತಾಯ ಪಡಿಸಿದಂತೆ ಕಂಡು ಬಂದರೂ ಅದಕ್ಕೆ ಕಾರಣವು ಕಾಮವಾಸನೆಯಾಗಿರುವದಿಲ್ಲ; ಆದರೆ ಗಂಡ ನಿಗೆ ತಾನು ಕಾಮವಿಲಾಸದಲ್ಲಿ ದಿನಾಲು ತೃಪ್ತಿಪಡಿಸದಿದ್ದರೆ ಅವನು ಅನ್ಯ ಸ್ತ್ರೀಯರಲ್ಲಿ ರತನಾಗಿ ತನ್ನನ್ನು ತಿರಸ್ಕರಿಸಬಹುದು ಎಂಬ ಭಯದಿಂದಲೇ ಅವಳೂ ಕಾಮಿಯ ರೂಪವನ್ನು ಹಾಕಿಕೊಳ್ಳುವದು. ಆದ್ದರಿ೦ದ ನಿಜವಾದ ದಾಂಪತ್ಯ ಸೌಖ್ಯವನ್ನು ಅಪೇಕ್ಷಿಸುವವರು (ಗಂಡನೂ ಹೆಂಡತಿಯ) ಕಾಮಶಾಸ್ತ್ರದ ವ್ಯಾಸಂಗವನ್ನು ಚನ್ನಾಗಿ

  • ದಿನಾಲೂ ತಪ್ಪದೆ ೩-೪ ಸಲದ೦ತೆ ವರ್ಷಗಟ್ಟಲೆ ಸ೦ಭೋಗವನ್ನು ಮಾಡಿ ತಮ್ಮ ದೇಹ ಮನಸ್ಸುಗಳನ್ನೂ, ಹೆ೦ಡ೦ದಿರ ಆರೋಗ್ಯ ಭಾಗ್ಯಗಳನ್ನೂ ಹಾಳು ಮಾಡಿಕೊ೦ಡ ರೋಗಿಗಳು ಚಿಕಿತ್ಸೆಗಾಗಿ ನಮ್ಮ ಆಶ್ರಮಕ್ಕೆ ಎಷ್ಟೋ ಜನರು ಬರುತ್ತಾರೆ.