ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯ ಗಳು ಹುಟ್ಟಲಾರವು. ಆದ್ದರಿಂದ ಅ೦ಶದ ಭಾವನೆಯನ್ನು ಪೂರ್ಣತ್ವದಲ್ಲಿ ಅ೦ದರೆ ಬ್ರಹ್ಮನಲ್ಲಿ ಬೆಳಿಸಿ ಜೀವಿಸುವದೇ ಬ್ರಹ್ಮಚರ್ಯೆ, ಇದು ಮನಸ್ಸಿನ ದೃಷ್ಟಿಯಲ್ಲಿ ಬ್ರಹ್ಮಚರ್ಯೆಯ ವ್ಯಾಖ್ಯೆಯಾಯಿತು. ಇನ್ನು ದೈಹಿಕ ದೃಷ್ಟಿಯಿಂದ ನೋಡುವಾ.. ವೀರ್ಯವು ಹುಟ್ಟುವದು ಅಂಡಗಳಲ್ಲಿ, ವಿಜ್ಞಾನ ಶಾಸ್ತಧುರೀಣರು ಅಂಡಗಳಲ್ಲಿ ಎರಡು ವಿಧದ ವೀರ್ಯದ ವಿಸರ್ಜನವಾಗುವದೆಂದು ಕಂಡು ಹಿಡಿದಿದ್ದಾರೆ. ಒಂದು ಸ್ಕೂಲವಾದದ್ದು (Exocrenal or external); ಇನ್ನೊಂದು ಸೂಕ್ಷ್ಮವಾದದ್ದು (Enctorrenal or internal). ಸ್ಕೂಲದ ವರ್ಣನೆಯು ೫ ನೇ ಪ್ರಶ್ನೆಯಲ್ಲಿ ಬಂದಿದೆಯಷ್ಟೆ. ಅದು ಪ್ರಜೋ ತೃತಿಗೂ ನರಗಳ ಶಕ್ತಿಗೂ ಸಹಾಯಕವಾಗುವದು. ಸೂಕ್ಷ್ಮವಾದದ್ದು ಕಣ್ಣಿಗೆ ಕಾಣುವದಿಲ್ಲ, ಅದು ಪರಿಣಾಮದಿಂದಲೇ ತನ್ನ ಅಸ್ತಿತ್ವವನ್ನು ತೋರಿಸುತ್ತದೆ. ಅದು ದೇಹಾದ್ಯಂತ ಪಸರಿಸಿ ಆರೋಗ್ಯವನ್ನು ಹೆಚ್ಚಿ ಸುವದಲ್ಲದೆ ಮಿದುಳಿನ ಶಕ್ತಿಯನ್ನು ಬೆಳಿಸಿ ಬುದ್ಧಿಯನ್ನು ಚುರುಕುಗೊಳಿಸು ವದು. ಸಹಜವಾಗಿಯಾಗಲಿ, .ಕೃತ್ರಿಮಾಭ್ಯಾಸಗಳಿ೦ದಾಗಲಿ ಸ್ಕೂಲದ ಸ್ರಾವವು ಹೆಚ್ಚಾದರೆ ಸೂಕ್ಷದ ಪ್ರಾವವು ಕಡಿಮೆಯಾಗುವದು. ರೋಗ ವೊಂದನ್ನು ಬಿಟ್ಟು ಬೇರೆ ಯಾವ ಕಾರಣದಿಂದಲೂ ಸ್ಕೂಲದ ಸ್ರಾವವು ಕಡಿಮೆಯಾದರೆ ಸೂಕ್ಷದ ಸ್ರಾವವು ಹೆಚ್ಚಾಗುವದು. ಕಾಮವಿಲಾಸ ವನ್ನೇ ಯಾವಾಗಲೂ ಚಿಂತಿಸುವದರಿಂದಲೂ, ಜನನೇಂದ್ರಿಯಗಳ ಘರ್ಷಣ ದಿಂದಲೂ ಸ್ಕೂಲದ ಸ್ರಾವವು ಹೆಚ್ಚಾಗುವದು, ತನ್ಮೂಲಕ ಸೂಕ್ಷದ ಸ್ರಾವವು ಕುಗ್ಗುವದು. ಆದ್ದರಿಂದಲೇ ವಿಪರೀತ ಕಾಮಿಗಳೂ ಅತಿಸಂಭೋಗಿ ಗಳೂ ಆದವರು, ರೋಗಿಗಳೂ ಅಲ್ಪ ಬುದ್ದಿ ಯುಳ್ಳವರೂ ಆಗುವರು.) ಆದರೆ ಮನವನ್ನು ಕಾಮಪಿಚಾರದಲ್ಲಿ ಹಾಕದೆ, ಧ್ಯಾನಸ೦ಧಾನ*ಗಳಲ್ಲಿಯೂ, ವಿವಿಧ ಜ್ಞಾನಸಾಧನಗಳಲ್ಲಿಯೂ ಹಾಕಿದರೆ ಸ್ಫೂಲದ ಸ್ರಾವಕ್ಕೆ ಉತ್ತೇಜನ

  • ಇವುಗಳ ವಿಶಾಲ ವಿವರಕ್ಕಾಗಿ ಪ೦ಡಿತ ತಾರಾನಾಥರ " ಧರ್ಮ ಸ೦ಭವ” ವನ್ನು ಓದಿ, ಧಾರವಾಡದ “ನವ ಜೀವನ” ಗ್ರಂಥಮಾಲೆ ಯಲ್ಲಿ ೫e ಆ ಲೂರು ವೆಂಕಟರಾಯರ ಸಂಪಾದಕತ್ವದಲ್ಲಿ ಇದು ಪ್ರಕಾಶಕ್ಕೆ ಬ೦ದಿದ.