ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦ ಸಿಕ್ಕದೆ ಸೂಕದ ಸ್ರಾವವು ಹೆಚ್ಚಾಗಿ ತನು ಮನಸ್ಸುಗಳ ಆರೋಗ್ಯವನ್ನೂ, ಶಕ್ತಿಯನ್ನೂ ಹೆಚ್ಚಿಸುವದು. ಅದರಿಂದ ಬುದ್ದಿ ಯೂ ಬೆಳೆಯುವದು; ಸುಂದರವೂ ಆಕರ್ಷಕವೂ ಆದ ಓಜಸ್ಸು ದೇಹದಲ್ಲೆಲ್ಲ ಪಸರಿಸುವದು. ಕಾಮಶಾಸ್ತ್ರದ ಅಷ್ಟವಾದ ವ್ಯಾಸಂಗ ಮಾಡುವವರಿಗೆ ಸ್ವಲ್ಪವೀರ್ಯದ ಸ್ರಾವವು ಹೆಚ್ಚಾಗದು. ಕಾಮವಿಲಾಸದ ಕು ಕಲ್ಪನೆಗಳಿಂದಲೇ ಮನವನ್ನು ತುಂಬಿಕೊಂಡಿರುವವರಿಗೆ, ಕಾಮದ ಹೆಸರೆತ್ತಿದ ಕೂಡಲೆ ಸ್ಕೂಲವು ಪ್ರವಿಸ ಹತ್ತಬಹುದು. ಅದು ಆರೋಗ್ಯದ ಚಿನ್ನವಲ್ಲ. ಕೀಳು ಕಲ್ಪನೆಗಳಿಗೆ ಎಡೆ ಗೊಡದೆ ಸದಾ ಧ್ಯಾನಸಂಧಾನಗಳಲ್ಲಿ ಅಥವಾ ಬುದ್ದಿಯ ರಸ * (ಲಲಿತ) ಕಾರ್ಯಗಳಲ್ಲೇ ಮನವನ್ನು ಆಳವಾಗಿ ನೆಲೆಗೊಳಿಸಿದವರಿಗೆ ಸ್ಫೂಲದಸ್ರಾವವೇ ನಿಂತುಹೋಗಿ ಕೀಳು ಕಾಮದ ವಿಚಾರವೇ ಅವರ ತಲೆಯಲ್ಲಿ ಬರಬಾರದು. ಅವರು ಬ್ರಹ್ಮಚರ್ಯೆಯ ತುಟ್ಟತುದಿಗೆ ಮುಟ್ಟಿದವರೆಂದು ಹೇಳಬಹುದು. ಏಕೆಂದರೆ ಕಾಮವಿಲಾಸದ ಕು ಕಲ್ಪನೆಗಳು ಅ೦ಶ ಭಾವನೆಯಿಂದ ಹುಟ್ಟ ತಕ್ಕ ವುಗಳು. ಆದರೆ ಲಲಿತಕಲಾವ್ಯಾಸಂಗ, ಧ್ಯಾನ, ಜ್ಞಾನಸಾಧನಗಳು ಪೂರ್ಣ ತ್ವದ ಭಾವನೆಯನ್ನು ಸಾಧಕನಲ್ಲಿ ನೆಲೆಗೊಳಿಸಿ, ಅದರ ಪ್ರಜ್ಞೆಯಲ್ಲೇ (Consciousness) ಅವನು ಸದಾ ಮುಳುಗಿರುವಂತೆ, ಆ ಸಾಧನಗಳು ಪ್ರೇರಿಸುವವು. ಆದರೆ ಕಲುಷಿತ ವಾತಾವರಣದಲ್ಲಿ ತಿರುಗುವವರಿಗೆ ಅಷ್ಟು ಉಚ್ಛ ವಾದ ಬ್ರಹ್ಮಚರ್ಯೆಯು ಸಾಧಿಸದಿದ್ದರೂ, ಹಿಂದೆ ಹೇಳಿದ ಬೌದ್ಧಿಕ ಸಾಧ ನಗಳಲ್ಲಿ ಮನವನ್ನು ಹಾಕಿದವರಿಗೆ ಸಲದ ಸ್ರಾವವು ವೀರ್ಯಾಶಯದಲ್ಲಿ ಸ್ವಲ್ಪ ಸ್ವಲ್ಪವಾಗಿ ಸಂಗ್ರಹವಾಗುತ್ತಲೇ ಇರುವದು. ವೀರ್ಯಾಶಯವು ತುಂಬಿದಮೇಲೆ ಪ್ರತಿಕಾರ್ಯದ (Reaction) ಮೂಲಕ ಅವನಲ್ಲಿ ಸಂಭೋ ಗಾಭಿಲಾಷೆಯು ಹುಟ್ಟುತ್ತದೆ. ಅಂಥ ಸಮಯದಲ್ಲಿ ಅವನು ತನ್ನ ಪ್ರೇಮ ಪತ್ನಿಯ ಸಂಗಡ ಸಂಭೋಗಿಸಿ, ವೀರ್ಯಲನವಾದರೂ ಅವನಿಗೆ ಯಾವ ರೀತಿಯಿಂದಲೂ ಅಪಾಯವಾಗಲಾರದು. ಸ್ತ್ರೀಯರು ಕೂಡ ಕಾಮ ವಿಚಾರದಿಂದ ತಮ್ಮ ಮನವನ್ನು ತಿರುಗಿಸಿ ಬೌದ್ಧಿಕ ವ್ಯಾಸಂಗಗಳಲ್ಲಿ ಅದನ್ನು

  • ಇದರ ಸಾಮಾನ್ಯ ವಿವರಕ್ಕೆ “ಧರ್ಮಸ೦ಭವ” ವನ್ನೋದಿ.