ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨ ನೇ ಪ್ರಶ್ನೆ:- ಸ್ತ್ರೀಯು ಗರ್ಭಿಣಿಯಾದಮೇಲೆ ಸಂಭೋಗ ವನ್ನು ಮಾಡಬಹುದೇ ? ಉತ್ತರ:-ಗರ್ಭದ ಮತ್ತು ಗರ್ಭಿಣಿಯ ಹಿತದ ದೃಷ್ಟಿಯಿಂದ ಸಾಮಾನ್ಯವಾಗಿ ಗರ್ಭನಿ೦ತದಿವಸದಿಂದಲೇ ಸಂಭೋಗವನ್ನು ನಿಲ್ಲಿಸಿಯೇ ಬಿಡುವದು ಅತ್ಯುತ್ತಮ. ಏಕೆಂದರೆ, ಸಂಭೋಗ ಸಮಯದಲ್ಲಿ ಗರ್ಭಾ ಶಯದಮೇಲೆ ಭಾರ ಬೀಳುವದರಿಂದ ಗರ್ಭದ ಬೆಳಿಗೆಗೆ ತೊಂದರೆಯಾಗ ಬಹುದು. ಇದರಿಂದ ಗಂಡನು ಹೆಂಡತಿಯ ಸಮಿಾಪವೇ ಹೋಗಬಾರ ದಂದು ತಿಳಿಯಬಾರದು. ಗರ್ಭಿಣಿಯನ್ನು ಪ್ರೇಮದಿಂದ ನಡೆಸಿಕೊಳ್ಳಬೇಕು. ಯಾವಾಗಾದರೊಮ್ಮೆ, ಕಾಮವಿಚಾರವನ್ನು ತಲೆಯಲ್ಲಿ ತರದೆ, ಪ್ರೇಮದಿಂದ ಚುಂಬನಾಲಿಂಗನಗಳನ್ನು ಕೂಡ ಮಾಡಬಹುದು. ಅದರಿಂದ ಅವಳ ಮನಸ್ಸು ಉಲ್ಲಸಿತವಾಗಿರುವದು, ಅವಳೊಡನೆ ಯಾವಾಗಲೂ ಪ್ರೇಮವಚನಗಳನ್ನು ಆಡುತ್ತಿರಬೇಕು. ಅವಳ ಗರ್ಭವನ್ನು ಅವಳು ಪ್ರೀತಿಸುವ, ತಾನೂ ಪ್ರೀತಿಸುವೆನೆಂದೂ, ಸಂಭೋಗವಿಲ್ಲದಿದ್ದರೂ ಅವಳಲ್ಲಿ ಮೊದಲಿನ ತನಗೆ ಪ್ರೇಮವಿದೆಯೆಂದೂ ಹೃದಯಪೂರ್ವಕವಾಗಿ ಅವಳಿಗೆ ಮನಗಾಣಿಸಿದರೆ ಅವಳೂ ಆನಂದದಿಂದಿದ್ದು ಗರ್ಭವೂ ಆರೋಗ್ಯವಾಗಿ ಬೆಳೆಯುವದು. ಒ೦ದು ವೇಳೆ ಪರಸ್ಪರರಲ್ಲಿ ತಡೆಯಲಾರದಷ್ಟು ಸಂಭೋಗಾಭಿಲಾಷೆ ಹುಟ್ಟಿದರೂ ಯಾವಾಗಾದರೊಂದು ಸಲ ಅದನ್ನು ತೃಪ್ತಿ ಪಡಿಸಿಕೊಳ್ಳುವದರಿಂದ ಏನೂ ಅಪಾಯವಿಲ್ಲ. ಏಕೆಂದರೆ ಸ್ವಾಭಾವಿಕವಾಗಿ ಸಂಭೋಗದಲ್ಲಾಗುವ ಆನಂದವೂ, ಪುರುಷನ ವೀರ್ಯದಲ್ಲಿರುವ ನರಗಳನ್ನು ಬಲಗೊಳಿಸುವ ಶಕ್ತಿಯೂ ಗರ್ಭಿಣಿಯ ಆರೋಗ್ಯಕ್ಕೆ ಸಹಾಯಕವಾಗುವವು. ಅದರ ಸಂಗಡ ವಿಜ್ಞಾನಶಾಸ್ತ್ರವು ಹೇಳುವಂತೆ, ಸ್ತ್ರೀಯು ಮೇಲಾಗಿಯೂ, ಗಂಡಸು ಕೆಳಗಾಗಿಯ, ಸಂಭೋಗವನ್ನಾಚರಿಸಿದರೆ ಗರ್ಭಕೂ ತೊಂದರೆ ಯಾಗಲಾರದು. ಆದರೆ ಗರ್ಭಸ್ರಾವದ ರೂಢಿಯಿದ್ದವರು ಗರ್ಭ ನಿಂತ ಎರಡು ತಿಂಗಳ ಲ್ಲಿಯೇ ಸಂಭೋಗವನ್ನು ಖಂಡಿತ ನಿಲ್ಲಿಸಿಬಿಡಬೇಕು. ಮತ್ತು ಅ೦ಥ ರೋಗವಿಲ್ಲದಿದ್ದವರೂ ಕೂಡ ಆರು ತಿಂಗಳಾದ ಮೇಲೆ ಸಂಭೋಗವನು