ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ပုဂ ಹಚ್ಚಿದರೆ ಆರೋಗ್ಯವೂ ಬುದ್ದಿಯೂ ವೃದ್ಧಿಗೊಂಡು ದಾ೦ಪತ್ಯ. ಪ್ರೇಮವೂ ಹೆಚ್ಚಾಗುವದು. ಹೀಗೆ ಅಪರೂಪವಾಗಿ ವೀರ್ಯಾಶಯವು ತುಂಬಿದಮೇಲೆ ಪ್ರಕೃತಿಯ ಸೂಚನೆಯ ಮೇರೆಗೆ ಸಂಭೋಗಿಸಿದರೂ ಬ್ರಹ್ಮಚರ್ಯೆಗೆ ಅದರಿಂದ ಹಾನಿಯಿಲ್ಲ. ಅವರು ತಕ್ಕಮಟ್ಟಿಗೆ ಬ್ರಹ್ಮ ಚರ್ಯೆಯನ್ನು ಪಾಲಿಸಿದಂತೆಯೇ ಆಯಿತು. ಅದರ ಉತ್ಕೃಷ್ಟ ಫಲವೂ ಅವರಿಗೆ ಸಿಕ್ಕದಿರದು, ಆದ್ದರಿಂದ ಬ್ರಹ್ಮಚರ್ಯೆಯಂದರೆ ಮದುವೆಯಾಗದಿರುವದು ಎಂದರ್ಥ ವಲ್ಲ. ಮದುವೆಯಾಗದ ಬ್ರಹ್ಮಚಾರಿಗಳ ಸಂಖ್ಯೆ ಈಗ ಬೆಳೆಯಹತ್ತಿದೆ. ಮೇಲೆ ಬರೆದಂತೆ ಬ್ರಹ್ಮಚರ್ಯೆಯ ನಿಜವಾದ ಅರ್ಥದಕಡೆಗೆ ನಾವು ನೋಡಿದರೆ ಮದುವೆಯಾಗುವದು ಬಿಡುವದು ಬ್ರಹ್ಮಚರ್ಯೆಗೆ ಸಂಬಂಧಿ ಸಿಯೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಸಂಸಾರದ ಭಾರವನ್ನು ತಪ್ಪಿಸಿ ಕೊಳ್ಳುವುದಕ್ಕೆ ಮದುವೆಯಾಗದಿದ್ದವರೂ, ಗೇಣು ಹೊಟ್ಟೆಯನ್ನು ಕೂಡ ತುಂಬಿಸಿಕೊಳ್ಳಲಿಕ್ಕಾಗದೆ ಮಿಥ್ಯಾ ಬ್ರಹ್ಮಚಾರಿಯ ವೇಷದಿಂದ ಭಿಕ್ಷೆ ಬೇಡು ವವರೂ, ಸದಾ ರೋಗಿಗಳೂ,ಬ್ರಹ್ಮಚಾರಿಯ ಸತ್ವವಾದ ಬ್ರಹ್ಮಜ್ಞಾನ ಒತ್ತಟ್ಟಿಗಿರಲಿ-ಸಾಮಾನ್ಯ ಮಾನುಷಸಹಜವಾದ ಬುದ್ದಿ (ConnonSense) ಕೂಡ ಇಲ್ಲದವರೂ, ನಿಸ್ತೇಜರೂ, ಬ್ರಹ್ಮಚಾರಿಗಳೆಂದರೆ ಬ್ರಹ್ಮ ಚರ್ಯೆಯ ಮುಖಕ್ಕೆ ಮಸಿಬಳಿದಂತೆಯೇ ಸರಿ. ನಿಷ್ಕಲ್ಮಷ ಸೂಕ್ಷ ವೀ ರ್ಯದ ಸ್ರಾವವೂ (Enclacrenal Secretion), ಅದರಿ೦ದ ಹುಟ್ಟಿದ ಓಜಸ್ಕೂ, ಪ್ರಖರವಾದ ಮೇಧಸ್ಕೂ, ಎಲ್ಲವಿಧದ ಕಲಾ, ಶಾಸ್ತ್ರ, ಜ್ಞಾನ ಗಳಲ್ಲಿಯೂ ಸುಲಲಿತವಾಗಿ ಬುದ್ದಿಯು ಓಡುತ್ತಿರುವದೂ ಬ್ರಹ್ಮಚರ್ಯೆಯ ನಿಜವಾದ ಲಕ್ಷಣಗಳು. ಏಕೆಂದರೆ 'ರಸೋವೈಸಃ' ಎಂಬ ಶ್ರುತಿಯಂತೆ, ವಿವಿಧ ಕಲಾ, ಜ್ಞಾನಗಳಲ್ಲಿ ಮನವನ್ನು ರಮಿಸುವ ಯಾವ ಆಕರ್ಷಣವಿದೆ ಯೋ ಅದಕ್ಕೆ 'ರಸ' ವೆಂದು ಸ್ಕೂಲವಾಗಿ ಹೇಳಬಹುದು; ಆ ರಸವೇ ಬ್ರಹ್ಮ ಎಂದು ಆ ಶ್ರುತಿಯ ಅರ್ಥ. ಆ ರಸಾನುಭವದಲ್ಲಿಯೇ ತಲ್ಲೀನತೆಯನ್ನು ಪಡೆದರೆ ಪ್ರತಿಯೊಬ್ಬರೂ ಬ್ರಹ್ಮಚಾರಿಗಳಾದಂತಾಯಿತು. ಬ್ರಹ್ಮಚರೆಗೆ ಮದುವೆಯಾಗುವದರಿಂದ ಕೊರತೆಯಿಲ್ಲ; ಆಗದಿರುವದರಿಂದಲೇ ವಿಶೇಷ ಲಾಭವೂ ಇಲ್ಲ.