ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೪ ಮರ್ದಿಸಬೇಕು. ನಂತರ ಅದಕ್ಕೆ ಒಂದು ವೀಳ್ಯದೆಲೆಯನ್ನಿಟ್ಟು ಕಟ್ಟಿ ಕೂಳ್ಳಬೇಕು. ಇದನ್ನು ರಾತ್ರಿ ಕಟ್ಟಿಕೊಂಡು ಬೆಳಿಗ್ಗೆ ಬಿಚ್ಚಿ ಸೀಗೇ ಕಾಯಿ) ಹಚ್ಚಿ ಬಿಸಿನೀರಿನಿಂದ ತೊಳೆಯಬೇಕು. ಈ ಔಷಧವು ಎಲ್ಲಾ ವಿಧದ ಲಿಂಗವಿಕಾರಗಳಿಗೂ ಅತ್ಯುತ್ತಮವಾದದ್ದು. - ಅತಿಸಂಭೋಗದಿಂದ ಯೋನಿಯು ಹೆಚ್ಚು ವಿಶಾಲವಾಗಿದ್ದರೆ ಮೇಲಿನ ಔಷಧದಲ್ಲಿ ಹೇಳಿದ ಸಾಮಾನುಗಳ ಚತುರ್ಥಾ೦ಶ ಕಷಾಯವನ್ನು ಶೋಧಿಸಿ ಯೋನಿಯನ್ನು ತೊಳೆದುಕೊಂಡರೆ, ಅದು ಸಂಕೋಚವಾಗುವದು. ಮುಟ್ಟಾದಾಗ ಹೊಟ್ಟೆನೋಯುತ್ತಿದ್ದರೆ:-ಸಮುದ್ರ ಲವಣಸೈಂಧವಲವಣ- ಪೆಟ್ಟು ಪ್ಪು-ಬಿಡಾಲವಣ-ಗಾಜುಲವಣ (ಸೌವರ್ಚಲ) ಇವು ಗಳನ್ನು ಸಮಭಾಗ ತೆಗೆದು ಕೊಂಡು ಪುಡಿಮಾಡಿ ೧/೪ ತೊಲೆಯಷ್ಟು, ನುಗ್ಗೆ ಎಲೆಯ ರಸದಲ್ಲಿ ಅರೆದು ಮುಟ್ಟಾದ ೪-೫-೬ ದಿನಗಳಲ್ಲಿ ಉಷಃಕಾಲದಲ್ಲಿ ಸ್ನಾನಮಾಡಿ ೧೫ ಮಿನಿಟುಗಳಲ್ಲಿ ತಿಂದು ಸ್ವಲ್ಪ ಬಿಸಿನೀರು ಕುಡಿಯಬೇಕು. ಒಂದೇಸಲ ಮುಟ್ಟಾದಾಗ ಹೀಗೆ ಮಾಡುವದರಿಂದ ಹೊಟ್ಟೆನೋವು ನಿಲ್ಲ ದಿದ್ದರೆ, ಇನ್ನೊಂದು ಮುಟ್ಟಾದಾಗಲೂ ಹಾಗೇ ಮಾಡಬೇಕು. (ಇವುಗಳಲ್ಲದೆ 'ಪುಷ್ಪಕ' ವೆಂಬ ಅತ್ಯುತ್ತಮವಾದ ಔಷಧವು ನಮ್ಮಲ್ಲಿ ಸಿಕ್ಕುವದು. ಅದು ಮುಟ್ಟು ದೋಷಗಳನ್ನೆಲ್ಲ ಹೋಗಲಾಡಿಸುವದು.) ಮುಟ್ಟಾದಾಗ ಬಹಳ ರಕ್ತ ಹೋದರೆ:-ನಾಗಕೇಸರಿಯ ಅರ್ಧ ತೊಲೆ ವಸ್ತ್ರಗಾಳಿ ತಪುಡಿಯನ್ನು ಹಾಲಲ್ಲಿ ತೆಗೆದು ಕೊಳ್ಳಬೇಕು. ಹೆಂಗಸರಿಗೆ ಯಾವಾಗಲೂ (ಬಿಳೀಶೆರಗು) ಬಿಳುಪು ಹೋಗುವ ರೋಗವಿದ್ದವರೂ (ಅ) ಲೋಳಸರವನ್ನು ಹಿಂದೆ ಹೇಳಿದಂತೆ ೧೦ ಸಲ ತೊಳೆದು ಸಕ್ಕರೆ ಜೀರಿಗೆ ಸೇರಿಸಿ ತೆಗೆದುಕೊಳ್ಳಬೇಕು. (ಆ) ಸಾರಂಗ (ಗಂಡುಚಿಗರಿ) ದ ಕೊಂಬನ್ನು ಮೊಸರಿನ ಕೆನೆಯಲ್ಲಿ ತಯಿದು ಒಂದು ಸಣ್ಣ ನೆಲ್ಲಿಕಾಯಿಯನ್ನು ತೆಗೆದುಕೊಳ್ಳಬೇಕು. ಇನ್ನು ಉಪದಂಶ ಪ್ರಮೇಹ ಮೊದಲಾದ ರೋಗಗಳಿಗೆ ಚಿಕಿತ್ಸೆ ಮಾಡು ವದು ಕಷ್ಟವಾದ್ದರಿಂದಲೂ, ಅವುಗಳ ಔಷಧಗಳಲ್ಲಿ ರಸ, ಗಂಧಕಗಳು ಬೀಳ ಬೇಕಾದ್ದರಿಂದಲೂ, ಅ೦ಥ ರೋಗವಿದ್ದವರು ನಮ್ಮ ಆಶ್ರಮಕ್ಕೆ ಬಂದು ಇಲ್ಲವೆ ಪತ್ರವ್ಯವಹಾರದ ಮೂಲಕ ವಿಶೇಷ ಸಂಗತಿಗಳನ್ನು ತಿಳಿದುಕೊಳ್ಳಬಹುದು.