ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸುಖಸೋಪಾನ ಸಾಹಿತ್ಯ ಮಂಡಲ ಈ ಪುಸ್ತಕದ ಪ್ರಾರಂಭದಲ್ಲಿಯೇ ಅವತರಿಸಿದ ತರಸಚೈತನ್ಯ ಪೂರಿತವಾದ ಪಂಡಿತ ತಾರಾನಾಥರ ವಾಕ್ಯಗಳಿಂದ ಹುರಿಗೊಂಡು ' ಸುಃ ಸೋಪಾನ 'ವನ್ನು ತಡವಿಲ್ಲದೆ ಅನುಗೊಳಿಸುವದಕ್ಕಾಗಿ ಇಂಥ ಪುಸ್ತಕ ಗಳನ್ನು ಹೊರಡಿಸಬೇಕೆಂದು ಮಾಡಿದ್ದೇವೆ. ಇದು ಮೊದಲನೆಯ ಸೋಪಾನ, ಪಾರಮಾರ್ಥಿಕಕ್ಕೆ ತನುಮನ ಸ೦ಸಾರ ಸಮಾಜಗಳ ಐಹಿಕ ಸುಧಾರಣೆಯೇ ಪ್ರಥಮ ಸೋಪಾನ ಎ೦ದು ಅನೇಕ ಮಹಾನುಭಾವರ ಮತವಿದೆ. ಆದುದರಿಂದ ಮೊದಲು ಬರತಕ್ಕ ವಿಷಯ ಗಳನ್ನ ನಿರ್ಮಲ ವಿಜ್ಞಾನ ವಿಚಾರದಿಂದ ಮೊದಲು ಹಬ್ಬಿಸಬೇಕೆಂಬುದೇ ನಮ್ಮ ಉದ್ದೇಶ. ಈ ಉದ್ದೇಶವು ಯೋಗ್ಯವೂ ಜನೋಪಕಾರಕವೂ ಆಗಿದೆ ಎಂದು ಮನಗಂಡವರು ಮಂಡಲಕ್ಕೆ ಸದಸ್ಯರಾಗಬೇಕೆಂದು ನನ್ನ ವಿನಂತಿ ಯಿದೆ. ನಮ್ಮ ಮಂಡಲಕ್ಕೆ ಸದಸ್ಯರಾಗಲಿಚ್ಚಿಸುವವರು ೧ ರೂ. ಪ್ರವೇಶ ಧನವನ್ನು ಕೊಟ್ಟರೆ ಅವರಿಗೆ ಮುಂದೆ ಹೇಳುವ ನಿಯಮದಂತೆ ನಮ್ಮಿಂದ ಪ್ರಕಟವಾಗುವ ವಸ್ತುಗಳನ್ನು ಕೊಡುವದಲ್ಲದೆ, ಈಗ ನಮ್ಮ ವಶದಲ್ಲಿ ರುವ ಪುಸ್ತಕಗಳನ್ನೂ ಸುಲಭ ಬೆಲೆಗೆ ಕೊಡುವೆವು. ಇದರಿಂದ ಸದ ಸ್ಯರು ಕೊಡುವ ಪ್ರವೇಶಧನಕ್ಕಿಂತಲೂ ಹೆಚ್ಚಾಗಿ ಲಾಭಪಡಯ ಲವಕಾಶವಿರುವುದು, ನಿಯಮಗಳು ೧. ಪ್ರತಿಯೊಬ್ಬ ಸ್ಥಾಯಿಾ ಸದಸ್ಯರು ೧ ರೂ. ಪ್ರವೇಶಧನವನ್ನು ಕಳುಹಿಸಿ ತಮ್ಮ ಹೆಸರು, ವಿಳಾಸಗಳನ್ನು ಸ್ಪಷ್ಟವಾಗಿ ಬರೆದು ತಿಳಿಸಬೇಕು. ೨. ಸ್ಥಾಯಿಾ ಸದಸ್ಯರಿಗೆ ನಮ್ಮಿಂದ ಪ್ರಕಟವಾಗುವ ಹೊಸ ಪುಸ್ತಕಗಳ ನೆಲ್ಲವನ್ನೂ ಮುಕ್ಕಾಲು ಬೆಲೆಗೆ ಕೊಡಲಾಗುವುದು. ೩. ಸದಸ್ಯರಿಗೆ, ಹಿಂದೆ ಪ್ರಕಟವಾಗುವ ಗ್ರಂಥಗಳು ಬೇಕಾದರೆ, ಮುಕ್ಕಾಲು ಬೆಲೆಗೆ ದೊರೆಯುವವು.