ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.೩೯೪ ೩೯೪ ಅರವತ್ತನೇ ಅಧ್ಯಾಯ. ದ ವನಮಾಲಾಧರನಾದ ಶಂಖಚಕ್ರ ಗದಾಪಾಣಿಯಾದ ಕೌಸ್ತುಭಮಾಣಿ ಕ್ಯದಿಂದೊಪ್ಪುವ ಉರಸ್ಥಳವುಳ್ಳ ಪೀತಾಂಬರಧರನಾದ ಕನ್ನೈದಿಲೆಯಿಂದ ಕಾಂತಿಯುಳ್ಳ ಮನೋಹರಮಪ್ಪ ಶರೀರಕಾಂತಿಯುಳ್ಳ ನಾಭಿಯಲ್ಲಿ ಪದ್ಯವುಳ್ಳ ಕೆಂಪಾದ ಅಧರಕಾಂತಿಯಿಂದೊಪ್ಪುವ ದಾಳಿಂಬದ ಹಣ್ಣಿನ ಬೀಜದಿಂದೊಪ್ಪುವ ದಂತಸಚಿಯುಳ್ಳ ಆಕಾಶಮಂ ಪ್ರಕಾಶನಮಾಡುವ ಸೂ‌ನ ಸಹಸ) ತೇಜಸ್ಸುಳ್ಳ ಇಂದ್ರಾದಿಗಳ೦ ನಮಸ್ಕರಿಸಲ್ಪಡುವ ಪಾದ ಪದ್ಮಂಗಳುಳ್ಳ ಶೌನಕಾದಿಗಳಿಂದ ಸ್ತುತಿಸಲ್ಪಡುವ ನಾರದಾದಿಗಳಿಂದ ನಾದ ನ ಮಾಡಿಸಿಕೊಂಬ ಪ್ರಹ್ಲಾದಾದಿಗಳಿ೦ ಧ್ಯಾನವ ಮಾಡಿಸಿಕೊಳ್ಳಲ್ಪಡುವ ಶಾರ್ಜಚಾಪಮಂ ಧರಿಸಿದ ಸಕಲ ದಾನವ ಸಂಹಾರಕನಾದ ಮಧುಕಟ ಭಾರಿಯಾದ ಕೈವನಾಥನಾದ ಪರಬ್ರಹ್ಮನಾದ ನಿರಾಕಾರನಾದ ಅವಾ ಬ್ಯೂನಸಗೋಚರನಾದ ಭಕ್ತರ ಭಕ್ತಿಗೋಸ್ಕರ ಭಕ್ತರ ರಕ್ಷಿಪನಿಮಿತ್ತ ಮನೋಹರವಾದ ಆಕಾರಮಂ ಧರಿಸಿ ಲಕ್ಷ್ಮಿ ಸಮೇತ ಪಸನ್ನನಾಗಿ, ಇಹ ವಿಷ್ಣುವಿನ ಮೂರ್ತಿಯನ್ನೂ ಅಗಿ ಬಿಂದು ಬಮೀಶ್ವರನು ಕಂಡು ಸಾಷ್ಟಾಂಗನವಸರವಂ ಮಾಡಿ ಎದ್ದು ಶಿರದಲ್ಲಿ ಮುಗಿದ ಕೈಗಳು ಳ್ಳವನಾಗಿ ಭಕ್ತಿಯಿಂದ ಸ್ತುತಿಸತೊಡಗಿದನು ; ಅದೆಂತೆನೆ :- - ಎಲೈ ದೇವ ದೇವ ! ಪುಂಡರೀಕಾಕ್ಷ ! ಬಾಹ್ಯಾಭ್ಯಂತರಗಳಲ್ಲಿ ಪವಿ ತವನೀವ ಸಾವಿರ ಶಿರಸ್ಸು ಸಾವಿರ ಕಣ್ಣು ಸಾವಿರ ಪಾದಂಗಳುಳ್ಳವನಾಗಿ ಪರಮ ಪುರುಷನಾದ ವಿಷ್ಣುವೇ : ಶೀತೋಷ್ಣ ಮೊದಲಾದ ದ್ವಂದ ಸುಖ ದಃಖಂಗಳಂ ಬಿಡಿಸುವ ನಿಮ್ಮ ಪಾದಾರವಿಂದಗಳಿಗೆ ನಮಸ್ಕಾರ, ನಿಮ್ಮ ಮಹಿ ಮೆಯನ್ನು ಬೃಹಸ್ಪತಿ ಮೊದಲಾಗಿ ಸ್ತುತಿಸಲರಿಯರೂ, ಅಂಥಾ ನಿಮ್ಮ ಸ್ತುತಿ ಸುವರೆ ಆರಿಗೆ ಶಕ್ಯವಾದೀತು, ಇನ್ನೂ ಭಕ್ತಿಯ ನಿಮ್ಮ ಸ್ತೋತ್ರವ ಮಾಡ ಹೇಳಿ ಪೀಡಿಸುತ್ತಾ ಇದ್ದೆ, ವೇದಗಳಿಗೆ ಅಗೋಚರನಾದ ಸ್ವಾಮಿ ನಮ್ಮಂಥಾ ಅಲ್ಪ ಬುದ್ಧಿಯುಳ್ಳಂಥಾವರಿಂದು ಹ್ಯಾಗೆ ಸ್ತುತಿಸಿಕೊಳ್ಳಲ್ಪಟ್ಟಾನೂ, ಮನ ಸ್ವಿಗೂ ವಾಕ್ಕುಗಳಿಗೂ ಅಗೋಚರನಾದ ಸ್ವಾಮಿಯನ್ನು ಸ್ತುತಿಸಲೂ ಶಕರಾರು, ಪದಕ ವ ಷಡಂಗಗಳುಳ್ಳ ವೇದಂಗಳA ಆವನ ನಿಶ್ವಾಸದಿಂದ ಪುಟ್ಟದವೋ ? ಅಂಥಾಸಾಮಿಯ ಮಹಿಮೆಯನ್ನು ಆವಾತ ತಿಳದಾನ,