ಮಿಂಚಿನಬಳ್ಳಿ ನನ್ನ ಮಾತು ಕೇಳಿ ಬೇಗನೆ ಬಾ...........ವಿರಕ್ಕನಾಗಿ ಕೆಲವುದಿನ ಕಳೆಯ ಬೇಕೆಂದು ನಿನಗೆ ಅನಿಸುತ್ತಿದ್ದರೆ ಅದೂ ಒಳ್ಳೆಯದೇ. ಆದರೆ ನನ್ನನ್ನು ಕೇಳಿ ಮಾಡು, ಹೋಗುವ ಸಮಯವು ಯಾವುದೆಂಬುದನ್ನು ನಾನು ಹೇಳುವೆ. ನನ್ನ ಉದ್ದೇಶವೂ ಅದೇ ಇದೆ. ಆದುದರಿಂದ ನೀನು ಇಲ್ಲಿಗೆ ಬಂದರೆ, ಇಬ್ಬರೂ ಕೂಡಿ ವಿಚಾರಮಾಡಿ ನಿಶ್ಚಯಿಸೋಣ, ನಿನಗೆ ಯಾವ ರೀತಿಯಿಂದಲೂ ತಡೆ ಯುಂಟಾಗದಂತೆ ನಾನು ನೋಡಿಕೊಳ್ಳುವೆ. ನೀನು ಹೋಗುವವನೇ ಇದ್ದರೆ ನಾನೆಂತು ತಡೆಯಬಲ್ಲೆ ? ಆದರೆ ಜನ ಹಾಗೂ ಶಾಸ್ತ್ರಕ್ಕೆ ವಿರುದ್ಧವಾಗದಂತೆ ಏನನ್ನೂ ಮಾಡಬಹುದು. ಹೀಗೆ ಪತ್ರದಲ್ಲಿ ಎಷ್ಟೆಂದು ಬರೆಯಬೇಕು ? ಆದುದರಿಂದ ನನ್ನ ಪತ್ರಕ್ಕೆ ಮರ್ಯಾದೆಯನ್ನು ಕೊಟ್ಟು ಬೇಗನೆ ಮರಳಿ ಬಾ?? ಕೃಷ್ಣಾಜಿಪಂತರ ಕೈಯಲ್ಲಿ ಈ ಸತ್ರ ಸಿಕ್ಕಿದ್ದರೆ ಖಂಡಿತವಾಗಿಯೂ ಮರಳಿಬಾರದೆ ಇರುತ್ತಿದ್ದಿಲ್ಲ. ಆದರೆ ಬರಲು ಅವರು ಈ ಜಗತ್ತಿನಲ್ಲಿ ಜೀವಿಸಿದ್ದರೆಲ್ಲಿ ? ಗಾಣಗಾಪುರವನ್ನು ಬಿಟ್ಟನಂತರ ದಾರಿಯಲ್ಲಿ ಠಕ್ಕರು ಅನ ರನ್ನು ಕೊಂದಿರಬೇಕೆಂದು ಬಂದ ಸುದ್ದಿಗಳಿಂದ ಊಹಿಸಬೇಕಾಯಿತು. ಈ ಜಗತ್ತಿನಲ್ಲಿ ಯಾವ ಸ್ಥಿತಿಯೂ ಸ್ಥಿರವಾಗಿ ಉಳಿಯಲಾರದು. ಹಗಲಿನ ನಂತರ ರಾತ್ರಿ, ರಾತ್ರಿಯ ನಂತರ ಹಗಲು ಹೀಗೆ ತಿರುಗುವುದೇ ಕಾಲಚಕ್ರದ ಧರ್ಮ, ಇಷ್ಟೆಲ್ಲ ಸಂಕಟ ಪರಂಪರೆಯಿಂದ ಬಳಲುತ್ತಿದ್ದ ಕಾಶೀನಾಥಪಂತರಿಗೆ ಉದ್ಯೋಗಶೀಲರಾದ ತಮ್ಮ ಮಕ್ಕಳನ್ನು ಕಂಡು, ತಮ್ಮ ಆಯುಷ್ಯದ ಕೊನೆಯ ದಿನಗಳಾದರೂ ಶಾಂತ ಹಾಗೂ ಸಮಾಧಾನದಿಂದ ಗಳಿಸಬಹುದೆಂಬ ಸುಖ ಸ್ವಪ್ನಗಳು ಬೀಳಹತ್ತಿದವು. ಎಲ್ಲಕ್ಕೂ • ಹಿರಿಯ ಮಗನಾದ ರಾಮಚಂದ್ರ ಉರ್ಫ ರಾಮೂ ಅಣ್ಣಾನು ಮ್ಯಾಟ್ರಿಕ್ ಪಾಸಾಗಿ ತನ್ನ ಮೆಚ್ಚಿಗೆಯ ಶಿಕ್ಷಕ ವೃತ್ತಿಯನ್ನು ಕೈಕೊಂಡನು. ಆದರ್ಶ ಶಿಕ್ಷಕನೆಂದೂ ವಿದ್ಯಾರ್ಥಿಗಳ ಪ್ರೇಮ ಸಂಪಾದನೆಯಲ್ಲಿ ಇವರನ್ನು ಸರಿಗಟ್ಟುವವರು ಯಾರೂ ಇಲ್ಲೆಂದೂ ಹೆಸರುವಾಸಿಯಾದನು. ಎರಡನೆಯ ಮಗನಾದ ವಾಸುದೇವರಾಯನು ಮುಂಬಯಿಯಲ್ಲಿ ಗ್ರಾಂಡ ಮೆಡಿಕಲ್ ಕಾಲೇಜದಿಂದ ಎಲ್, ಎಂ, ಆ್ಯಂಡ ಎಸ್. ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸೊಲ್ಲಾಪುರದಲ್ಲಿ ದವಾಖಾನೆಯನ್ನು ಪ್ರಾರಂಭಿಸಿದನು. ಇವನಿಗೆ ಮಂತ್ರಕಲೆಯಲ್ಲಿ ಅಭಿರುಚಿ ಇದ್ದುದರಿಂದ ಶಿವಾಜಿ ವರ್ಕ್ಸ” ಎಂಬ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.