ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿನಬಳ್ಳಿ - ಇಂದು ಭಾರತದಲ್ಲೆಲ್ಲ ಪ್ರಸಿದ್ದವಾದ ಕಿರ್ಲೋಸ್ಕರ ಒದಲ್ಪ ಲಿಮಿಟೆಡ್” ಎಂಬ ಕಾರಖಾಸೆಯ ಜನಕರಾದ ಶ್ರೀ ಲಕ್ಷ್ಮಣರಾಯರು ಎಂತಹ ಕಷ್ಟಮಯ ಸ್ಥಿತಿಯಿಂದ ಉಚ್ಚ ಮಟ್ಟಕ್ಕೆ ಏರಿದರೆಂಬುದರ ಹಿನ್ನೆಲೆಯನ್ನು ತಿಳಿಸುವದ ಕೋಸ್ಕರವಾಗಿ ಕಾಶೀನಾಥಸಂತರ ಜೀವನವನ್ನು ವಿಸ್ತಾರವಾಗಿ ವರ್ಣಿಸಲಾಗಿದೆ. ಇದನ್ನರಿಯದೆ ಶ್ರೀ ಲಕ್ಷ್ಮಣರಾಯಠ ಉಜ್ವಲ ಕೀರ್ತಿಯ ಮೇಲೆ ಬೆಳಕು ಬೀಳಲಾರದು. ಮಾನವನ ಜೀವನವನ್ನು ಅನೇಕ ಜನರು ನಾನಾ ಬಗೆಯಾಗಿ ಬಣ್ಣಿಸು ತಾರೆ, ಬೇರೆ ಬೇರೆ ಉಪಮೆಗಳನ್ನು ಕೊಡುತ್ತಾರೆ, ನಮ್ಮ ಸುಭಾಷಿತ ಕಾರರು ಸಮುದ್ರದಲ್ಲಿ ತೇಲಾಡುವ ಕಟ್ಟಿಗೆಯ ತುಂಡೆಂದು ವರ್ಣಿಸಿದರೆ, ಸೆಕ್ಷಸಿಯರನು ರಂಗಭೂಮಿಯಲ್ಲಿಯ ನಟನೆಂದು ಬಣ್ಣಿಸಿದ್ದಾನೆ, ಮಾನವನಿಗೆ ತನ್ನ ಸುತ್ತುಮುತ್ತಲಿನ ಪರಿಸ್ಥಿತಿಯೊಡನೆ ಸತತವಾಗಿ ಹೋರಾಡ. ಬೇಕಾಗುತ್ತಿರುವದರಿಂದ ಕೆಲವರು ಮಾನವನನ್ನು ಸೈನಿಕನೆಂದೂ ಕರೆ ದಿದ್ದಾರೆ. - ಈ ಉಪಮೆಗೆ ಇನ್ನೊಂದನ್ನು ಜೋಡಿಸಬಹುದು, ನಾವು ಯಾವುದೇ ಧರ್ಮದವರಿರಲಿ, ಪ್ರತಿಯೊಬ್ಬರಿಗೂ ತಮ್ಮದೇ ಆದ ಉಪಾಸ್ಯ ದೈವತವೊಂದು ಇದ್ದೇ ತೀರುವದು, ಅದನ್ನು ತಾವೇ ನಿಶ್ಚಯಿಸಿ ಕೊಳ್ಳ ಬೇಕಾಗುವದು. ಅದನ್ನು ಪಡೆಯಲು ದೀರ್ಘಯೋಗವನ್ನು ಕೈಕೊಳ್ಳಬೇಕಾಗುತ್ತದೆ, ಅಕ್ಷಣರಾಯರು ಇಂತಹ ಒಬ್ಬ ಯೋಗಿಗಳು, ಯಂತ್ರವೇ ಅವರ ಉಪಾಸ್ಯ ದೈವತವು, ಅದರ ವರವನ್ನು ಪಡೆಯುವದಕ್ಕಾಗಿ ಅವರು ಬಹು ಕಷ್ಟಮಯ ನಾದ, ದೀರ್ಘವಾದ ಯೋಗವನ್ನು ಕೈಕೊಳ್ಳಬೇಕಾಯಿತು, ಅವರ ಸತ ಕೋದ್ಯೋಗ, ವಿಶ್ವಪ್ರಯತ್ನಗಳಿಗೆ ಮೆಚ್ಚಿ ಯಂತ್ರದೇವತೆಯ ಲಕ್ಷಣರಾಯರಿಗೆ ದರ್ಶನ.., ಕೀರ್ತಿಯ ಕೀರಿಟವನ್ನಿತಳು. ಈ ದೃಷ್ಟಿಯಿಂದ ಲಕ್ಷ್ಮಣರಾಯರ ದೀರ್ಘವಾದ ಯೋಗದ ವೃತ್ತಾಂತವು ತರುಣ ಭಾರತಕ್ಕೆ ಮಾರ್ಗದರ್ಶಕವೂ ಮನೋರಂಜಕವೂ ಆಗುವದರಲ್ಲಿ ಸಂಶಯವಿಲ್ಲ.