ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರ ಶಿಕ್ಷಣ ಚಿತ್ರ-ಯಂತ್ರಕಲೆಗಳ ಸಿಪಾಸೆಯಿಂದ ತರುಣ ಲಕ್ಷಣರಾಯರು ಪ್ರವಾ ಸಕ್ಕೆ ತಕ್ಕಷ್ಟು ಹಣ, ಒಂದು ಚಿಕ್ಕ ಹಾಸಿಗೆಯೊಂದಿಗೆ ೧೮೮೨ ರಲ್ಲಿ ಧಾರವಾಡ ದಿಂದ ಹೊರಬಿದ್ದರು, ನಡುವೆ ಸೊಲ್ಲಾಪುರ, ನುಣ್ಣ ಪಟ್ಟಣಗಳಲ್ಲಿ ಇಳಿದು ಮುಂಬಾಪುರಿಗೆ ಬಂದರು. ಅವರ ಜೀವನದಲ್ಲಿ ಇಷ್ಟು ದೂರ ಪ್ರವಾಸ, ಅದರಲ್ಲಿಯೂ ರೇಲ್ವೆಯ ಪ್ರವಾಸ ಕೈಕೊಂಡುದು ಇದೇ ಮೊದಲು. ಮುಕ್ಕಾಲು ಶತಮಾನದ ಹಿಂದಿನ ಮುಂಬಯಿಗೂ ಈಗಿನ ಮುಂಬಯಿಗೂ ಅದೆಷ್ಟು ಅಂತರ ! ಆ ವೇಳೆಯ ನ೦ಬಯಿಯ ವಿನ್ಯಾರನೂ ಅಷ್ಟಿರ ಲಿಲ್ಲ. ರಾಜ ಬೀದಿಗಳು ಅಳತೆಯಲ್ಲಿದ್ದು, ಮುಖ್ಯ ಬೀದಿಗಳಲ್ಲಿ ಟ್ರ್ಯಾಮ್” ಓಡಾಡುತ್ತಿದ್ದವು, ಆದರೆ ಅವು ಕುದುರೆಗಳಿಂದ ಎಳೆಯಲ್ಪಡುತ್ತಿದ್ದನೆಂಬ ಮಾತು ಈಗ ಅಚ್ಚರಿಯನ್ನುಂಟು ಮಾಡಬಹುದು, ಇನ್ನೂ ವಿದ್ಯುತ್ ಪ್ರಾರಂಭವಾಗಿರಲಿಲ್ಲ. ಗ್ಯಾಸುಗಳೇ ಬೀದಿಗಳನ್ನು ಬೆಳಗುತ್ತಿದ್ದವು ಮೋಟಾರಿನ ಯುಗವು ಬಹು ದೂರವಿದ್ದಿತು, ಆದರೆ ಸಾಯಕಲ್ಲಿನ ಪರಿಚಯವು ಅದೇ ಆಗುವದರಲ್ಲಿತ್ತು ಮುಂಬಯಿಯ ಹೌಸೀ ಜನರ ಸಾಯಂಕಾಲದ ತಿರುಗಾಟದ ಸ್ಥಾನವೆಂದರೆ ಸಮುದ್ರ ತೀರ. ಲಕ್ಷ್ಮಣರಾಯರ ಹಿರಿಯ ಅಣ್ಣಂದಿರಾದ ವಾಸದೇವರಾಯರು ಆಗ ಮುಂಬೈಯಲ್ಲಿ ಗೋಳೀಯವರ ವಾಡೆಯಲ್ಲಿ ವಾಸಿಸುತ್ತಿದ್ದರು. ಲಕ್ಷಣ, ರಾಯರು ಅಣ್ಣನಲ್ಲಿಯೇ ವಾಸ್ತವವನ್ನು ಮಾಡಿ, ಅವರೊಡನೆ ಖಾನಾವಳಿ ಯಲ್ಲಿ ಉಣ್ಣ ಹತ್ತಿದರು. ಲಕ್ಷ್ಮಣರಾಯರು ಏನು ಕಲಿಯಬೇಕೆಂಬ ಬಗ್ಗೆ ಚರ್ಚೆಯಾಗಿ ಅದೇ ಪ್ರಾರಂಭವಾಗಿದ್ದ ಜೆ, ಜೆ, ಸ್ಕೂಲ ಆಫ್ ಆರ್ಟ್ಸನಲ್ಲಿ ಹೆಸರು ಹಚ್ಚಿ ವರು, ಗಣಪತ ಕೇಶಾರಿ ಎಂಬುವವರು ಶಿಕ್ಷಕರಾಗಿದ್ದರು. ಮಿಸ್ಟರ ಗ್ರಿಫಿತ್ ಎಂಬುವವರು ಹೆಡ್ಕಾಸರರು, ಚಿತ್ರಕಲೆಯೆಂದರೆ ಲಕ್ಷ್ಮಣರಾಯರಿಗೆ ಬಹು ಪ್ರೀತಿ, ಆದರೆ ಈ ಕಲೆಯನ್ನು ಕಲಿಸುವ ಪದ್ಧತಿಯು ಮಾತ್ರ ಬಹು ಬೇಸರ