ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಮಿಂಚಿನಬಳ್ಳಿ Au೪ ಬರುವಂತಹದ್ದಿತ್ತು, ಭಿನ್ನ ಭಿನ್ನ ರೇಖಾಕೃತಿಗಳನ್ನು ತೆಗೆಯುವದರಲ್ಲಿಯೇ ಎಷ್ಟೋ ತಾಸುಗಳನ್ನು ಕಳೆಯಬೇಕಾಗುತ್ತಿತ್ತು, ಆದರೂ ಲಕ್ಷ್ಮಣರಾಯರು ಮೊದಲಿನ ಮೂರು ತರಗತಿ (Third Gread)ಗಳನ್ನು ಮುಗಿಸಿ, ವರ್ಣ ಚಿತ್ರಗಳ (Painting) ವರ್ಗಕ್ಕೆ ಬಂದೊಡನೆಯೇ ಅದರಲ್ಲಿ ಅವರ ಮನಸ್ಸು ರಮಿಸಹತ್ತಿತು. ಆದರೆ ದುರ್ದೈವದಿಂದ ಅವರ ಕಣ್ಣುಗಳಲ್ಲಿ ಬಣ್ಣಗಳ ಸೂಕ್ಷ್ಮತೆಯನ್ನು ವಿಂಗಡಿಸುವ ಸಾಮರ್ಥ್ಯವಿರಲಿಲ್ಲ. ಅದರಿಂದ ಅವರು ನಿರುಪಾಯರಾಗಿ ಚಿತ್ರಕಲೆಯ ಅಭ್ಯಾಸವನ್ನು ಅಲ್ಲಿಗೇ ನಿಲ್ಲಿಸಬೇಕಾಯಿತು. ಆದರೆ ಲಕ್ಷಣರಾಯರಿಗೆ ಇದು ಶಾಪವಾಗಿ ಪರಿಣಮಿಸಲಿಲ್ಲ. ಚಿತ್ರಕಲೆಯಂತೆ ಯಂತ್ರಕಲೆಯ ಕಡೆಗೂ ತಮ್ಮ ಒಲವು ಇದೆ ಎಂಬುದನ್ನು ಅರಿತ ಅವರು ಕೂಡಲೇ ಯಂತ್ರ ಕಲೆಯ ವ್ಯಾಸಂಗವನ್ನು ಕೈಕೊಂಡರು. ಚಿತ್ರಶಾಲೆಯಲ್ಲಿ ಭವಾನಿ ಶಂಕರರೆಂಬ ಒಬ್ಬ ಕಂಚುಗಾರ ಮಿತ್ರ ರಿದ್ದರು. ಅವರ ಮನೆಯಲ್ಲಿ ಮುತ್ತಲ ಹೂಗಳ ಸೆರೆಯನ್ನು ಸೋಸಲು ಬೇಕಾಗುವ ಪಾತ್ರೆಗಳ ಒಂದು ಕಾರಖಾನೆ ಇದ್ದಿತು. ಅದಕ್ಕೆ ಬೇಕಾಗುವ ಯಂತ್ರಗಳು ಒಂದು ಪಡಸಾಲೆಯಲ್ಲಿ ಇದ್ದವು. ಇನ್ನೊಂದು ಪಡಸಾಲೆಯಲ್ಲಿ ತಾವ-ಹಿತ್ತಾಳೆಗಳ ಬೀಡುಗಳನ್ನು ಕರಗಿಸುವ ಭಟ್ಟಿಗಳಿದ್ದವು. ಲಕ್ಷಣರಾಯರು ಮೆಲ್ಲ ಮೆಲ್ಲನೆ ತಮ್ಮ ಸಮಯವನ್ನೆಲ್ಲ ಈ ಕಾರಖಾನೆಯಲ್ಲಿ ಕಳೆ ಯು, ಅಲ್ಲಿಯ ಕೆಲಸವನ್ನೆಲ್ಲ ಮಾಡಹತ್ತಿದರು. ಮನೆಯಿಂದ ಬರುತ್ತಿದ್ದ ಹತ್ತು-ಹನ್ನೆರಡು ರೂಪಾಯಿಗಳಲ್ಲಿ ಲಕ್ಷಣರಾಯರು ತಮ್ಮ ವೆಚ್ಚವನ್ನೆಲ್ಲ ಸಾಗಿಸುತ್ತಿದ್ದರು, ತಮ್ಮ ಕಾಲಮೇಲೆ ತಾವು ನಿಲ್ಲುವ ವಿಚಾರವು ಅವರಲ್ಲಿ ಸುಳಿಯಹತ್ತಿತ), ಅವರು ಜಾರ್ಜರೆಗನ್ ಹಾಗೂ ಇತರ ಕಾರಖಾನೆಗಳಲ್ಲಿ ಕೆಲಸ ಹಿಡಿಯಲು ಪ್ರಯತ್ನ ಪಟ್ಟರು. ಆದರೆ ಎಲ್ಲಿಯೂ ಆಶೆ ತೋರಲಿಲ್ಲ. ಹೀಗೆ ಚಿಂತಿಸುವಾಗ ಅಕಸ್ಮಾತ್ತಾಗಿ ಒಂದು ಸಂದರ್ಭ ಒದಗಿ ಅವರ ಪ್ರಶ್ನೆಯು ಬಿಟ್ಟಿತು. ೧೮೮೭ ರಲ್ಲಿ ಯಾಂತ್ರಿಕ ಶಿಕ್ಷಣ ಕೊಡುವದಕ್ಕಾಗಿ ವಿಕ್ಟೋರಿಯಾ ಜುಬಿಲಿ ಇನ್ ಸ್ಟಿಟ್ಯೂಟ ಎಂಬ ಸಂಸ್ಥೆಯು ಮುಂಬಯಿಯಲ್ಲಿ ಸ್ಥಾಪಿಸಲ್ಪಟ್ಟಿತು. ಅಲ್ಲಿ ಮ್ಯಾಕ್ಯಾನಿಕಲ್ ಡ್ರಾಯಿಂಗ ಕಲಿಸುವ ಒಬ್ಬ ಶಿಕ್ಷಕರ ಅವಶ್ಯಕತೆ ಇದೆಯೆಂದು ಲಕ್ಷಣರಾಯರಿಗೆ ತಿಳಿಯಿತು, ಕೂಡಲೇ ಅವರು ಅದರ “ಪ್ರಿನ್ಸಿಪಾಲರಾದ ಮಿಸ್ಟರ ಸಿಥಿಯನ್ನರನ್ನು ಕಂಡರು. ಆಗ ಪ್ರಿನ್ಸಿಪಾಲರು