ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿನಬಳ್ಳಿ ಲಗ್ನದಲ್ಲಿ ನಾಗೂತ್ತಾಯಿಗೆ ಅತ್ತೆಯ ಮನೆಯವರು ರಾಧಾಬಾಯಿ ಯೆಂದು ಹೆಸರಿಟ್ಟರು. ಮದುಮಗಳು ತವರುಮನೆಯಾದ ಕುಂದಗೋಳಕ್ಕೆ ಬಂದಳು. ಕೆಲವು ದಿನ ಕುoll ಸೌ|| ರಾಧಾಬಾಯಿಯು ಹಿರೇ ಅತ್ತಿಗೆಯವ ರಾದ ಜೀವೂಬಾಯಿಯ ಬಳಿಯಲ್ಲಿ ಸೊಲ್ಲಾಪುರದಲ್ಲಿದ್ದು ನಂತರ ಮುಂಬಯಿಗೆ ಬರಬೇಕೆಂದು ನಿಶ್ಚಯವಾಯಿತು. ನವ ದಂಪತಿಗಳಿಬ್ಬರೂ ಕುಂದಗೋಳದಿಂದ ಸೊಲ್ಲಾಪುರಕ್ಕೆ ಹೊರಟರು. ಇಡೀ ಪ್ರವಾಸದಲ್ಲಿ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ. ಮೂಕ ಯಾತ್ರೆ. ಈ ಕಾಲದಲ್ಲಿ ಇದು ಸತ್ಯವೆನಿಸಬಹುದೇ ? ಆದರೆ ಇದು ೫೦-೬೦ ವರ್ಷಗಳ ಹಿಂದಿನ ಮಾತು. ಆ ಕಾಲದಲ್ಲಿ ನನದಂಪತಿಗಳೇ ಏಕೆ, ನಾಲ್ಕು ಮಕ್ಕಳನ್ನು ಕಡೆದ ಗಂಡ-ಹೆಂಡಿರು ಕೂಡ ನಾಲ್ಕು ಜನರಲ್ಲಿ ಮಾತನಾಡಲು ನಾಚುತಿದ್ದರು, ಯಾರಾದರೂ ಮಾತನಾಡಿದರೆ ಅದೊಂದು ಮಹಾಪರಾಧವೆಂದು ತಿಳಿಯುವಂಥ ಕಾಲವದು. - ಈ ನೂತನ ದಂಪತಿಗಳು ಮುಂಬಯಿಗೆ ಬಂದ ನಂತರ ತಮ್ಮ ಬೀಗ ರಾದ ಬಾಳಕೃಷ್ಣ ಸಂತ ಉರ್ಫ ಬಾಬಾ ಜಾಂಭೀಕರರ ಮನೆಯಲ್ಲಿ ಅರಹತ್ತಿ. ದರು, ಜಾಂಬೇಕರರು ಸುಂಕದ (ಕಸ್ಟಮ್) ಖಾತೆಯಲ್ಲಿ ದೊಡ್ಡ ಹುದ್ದೆಯ ಮೇಲೆ ಇದ್ದರು, ಅವರ ಧರ್ಮಪತ್ನಿಯವರಾದ ಬಟಅಕ್ಕಾ ಬಹಳ ದೊಡ್ಡ ಮನಸ್ಸಿನವರು, ಪ್ರೇಮಿಗಳು, ಇವರ ಮನೆಯಲ್ಲಿ ಅತಿಥಿ ಅಭ್ಯಾಗತರಿಗೆ ಒಳ್ಳೆಯ ಪ್ರೇಮದ ಸ್ವಾಗತವಿರುತ್ತಿದಿತು, ಜಾಂಬೇಕರು ಈ ಮನೆ ಅವರ ಆಪ್ರೇಷ್ಠರಿಗೆಲ್ಲ ಆಧಾರಸ್ತಂಭವಾಗಿದ್ದಿತು. “ ಪುರುಷಾರ್ಥ ಮಾಸಿಕದ ಸಂಪಾದಕರಾದ ಡಾll ಸಾತವಳೇಕರ ಮತ್ತು ಡಾ|! . ನಿ, ಪುರೋಹಿತ ಹಾಗೂ ಅವರ ಅಣ್ಣ ಇವರಲ್ಲಿಯೇ ಇದ್ದು ಶಿಕ್ಷಣ ಪಡೆಯುತ್ತಿದ್ದರು. ಲಕ್ಷ್ಮಣರಾಯರ ಗೆಳೆಯರಾದ ಬೆಳಗಾವಿಯ ನಾಜೀರಾವ ಗುತ್ತೀಕರ, ಗಂಗಾಧರರಾವ ದೇಶಪಾಂಡೆಯವರೂ ಆಗಾಗ ಬಂದು ಹೋಗುತ್ತಿದ್ದರು. ಔಂಧದ ರಾಜಾಸಾಹೇಬ ಶ್ರೀಮಂತ ಬಾಳಾಸಾಹೇಬ ಸಂತ ಪ್ರತಿನಿಧಿ ಇವರು ಲಾ, ಕಾಲೇಜಿನಲ್ಲಿ ಟರ್ಮ ತುಂಬುತ್ತಿದ್ದರು. ಮೇಲಿನ ಮಿತ್ರದ್ವಯರ ಹಾಗೂ ಸಾತವಳೇ. ಕರರ ಮುಖಾಂತರ ಶ್ರೀಮಂತರ ಸ್ನೇಹವು ಲಕ್ಷಣರಾಯರಿಗೆ ಉಂಟಾ ಯಿತು, ಅದು ಬೆಳೆದು ವೃಕವಾಗಿ ಮಧುರ ಫಲ ಕೊಟ್ಟಿತು. ಈ ಜನರಲ್ಲದೆ ಜಾಂಭೀಕರರ ಗೆಳೆಯರಾದ ಶ್ರೀ ಭಾವೂಸಾಹೇಬ