ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಆಠಲೆ, ಡಾ. ನಾನಾಸಾಹೇ» ದೇಶಮುಖ, ಡಾ. ವಿನಾಯಕರಾವ ಭಾಜೇಕರ, ಡಾ, ವೇಲಣಕರ, ಡಾ. ರಾನ್ ಮೊದಲಾದವರು ಬಂದು ಕೂಡುವ ಸ್ಥಳವೂ ಈ ಮನೆಯೇ ! ಇವರೆಲ್ಲರೂ ಒಂದುಗೂಡಿದರೆ ಚರ್ಚಾಕೂಟವೇ ಏರ್ಪಡುತಿದ್ದಿತು, ನಮ್ಮ ಸಮಾಜದ ಹಾಗೂ ದೇಶದ ಪರಿಸ್ಥಿತಿ ಸುಧಾರಿಸುವ ಬಗೆಗೆ ಚರ್ಚೆಗಳು ನಡೆಯುತ್ತಿದ್ದವು, ಅವರಲ್ಲಿ ಕೆಲವರು ನನಾತನಿಗಳೂ ಕೆಲವರು ಸುಧಾರಕರೂ ಇದ್ದುದರಿಂದ ಚರ್ಚೆಗೆ ಒಳ್ಳೆ ಕಾವೇರುತ್ತಿದ್ದಿತು, ಲಕ್ಷಣರಾಯರು ಅಲ್ಲಿ ಇದ್ದರೂ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಿಲ್ಲ. ಏಕೆಂದರೆ ಅವರಿಗೆ ಮಾತಿಗಿಂತ ಕೃತಿಯಲ್ಲಿಯೇ ವಿಶ್ವಾಸವಿದ್ದಿತು. “ಕೆಲಸ ಮಾಡಿರಿ. ನಿಮಗೆ ಬೇಕಾದದ್ದು ದೊರೆಯುವದು. ಸುಮ್ಮನೆ ಚರ್ಚೆಯಲ್ಲಿ ಕಾಲ ಕಳೆಯುವದರಲ್ಲಿ ಅರ್ಥವಿಲ್ಲ' ಎಂಬುದೇ ಅವರ ಬೀಜಮಂತ್ರ. ರಾಧಾಬಾಯಿಯವರು ಬಟಅಕ್ಕನ ಕೈಯಲ್ಲಿ (ಅಕ್ಷಣರಾಯರ ಅಕ್ಕ ಜಾಂಭೀಕರರ ಹೆಂಡತಿ) ಸಂಸಾರವನ್ನು ಹೂಡಿದರು. ರಾಧಾಬಾಯಿಯು ಬಟೂಅಕ್ಕನಿಗೆ ನಾದಿನಿಯಲ್ಲವೇ? ರಾಧಾಬಾಯಿಯು ಅವರನ್ನು ಅತ್ತೆ. ಯವರೆಂದು ತಿಳಿದು ನಡೆದುಕೊಳ್ಳುತಿದ್ದಳು. ಬನ್ಯಾ ಬಾಪೂ, ಅಂಬೂತಾಯಿ ಹಾಗೂ ಶಂಭುರಾವ ಈ ಮೂವರೂ ಜಾಂಭೀಕರರ ಮಕ್ಕಳು, ಇವರೆಲ್ಲರೂ ಸಾಧಾರಣವಾಗಿ ರಾಧಾಬಾಯಿಯ ಓರಿಗೆಯವರು, ಮನೆಯ ವಾತಾವರಣವೆಲ್ಲವೂ ಪ್ರೇಮಮಯ ಹಾಗೂ ಒಕ್ಕಟ್ಟನದು ಇದ್ದುದರಿಂದ, ರಾಧಾ, ಬಾಯಿಯ ಈ ದಿವಸಗಳು ಸುಖಸಮಾಧಾನಗಳಲ್ಲಿ ಕಳೆದವು. ಕಸೂತಿ ತೆಗೆಯುವದರಲ್ಲಿಯೂ ಕರವಸ್ತ್ರಗಳನ್ನು ಹೆಣೆಯುವದರಲ್ಲಿಯೂ ಹಾಗೂ ಚಿತ್ರ ಗಳನ್ನು ತುಂಬುವದರಲ್ಲಿಯೂ ರಾಧಾಬಾಯಿಗೆ ಬಲು ಪ್ರೀತಿ, ಸೋನೋಬಾ ನಾತವಳೇಕರರಂಥ ಚಿತ್ರಕಾರರು ಮನೆಯಲ್ಲಿ ಇದ್ದಮಲಕ ಈ ವಿಷಯದಲ್ಲಿ ಒಳ್ಳೆ ಅನುಕೂಲತೆ ಉಂಟಾಗಿತ್ತು. * ರೇಶಿಮೆಯಿಂದತುಂಬಿ ಸಿದ್ದಪಡಿಸಿದ ನವಿಲನ್ನು ಕಟ್ಟು ಹಾಕಿಸಿ ದಿವಾಣಖಾನೆಯಲ್ಲಿ ತೂಗಹಾಕಿದ್ದರು. ಈ ನವಿಲು ಅನೇಕ ಪ್ರದರ್ಶನಗಳಲ್ಲಿ ಮೆಚ್ಚುಗೆಯನ್ನು ಪಡೆಯಿತು. - ಲಕ್ಷ್ಮಣರಾಯರು ವಯಸ್ಸಿನಿಂದ ತರುಣರೂ ಚಿಕ್ಕ ಸಂಬಳದವರೂ ಇದ್ದರೂ ಸತತೋದ್ಯೋಗ, ಕಲ್ಪ ಕತೆ ಅವರ ಗಂಭೀರ ಸ್ವಭಾವಗಳು ಎಲ್ಲ ಹಿರಿಯರಲ್ಲಿ ಅವರ ಬಗ್ಗೆ ಆದರವನ್ನುಂಟು ಮಾಡಿದ್ದವು. ಮುಂದೆ ಲಕ್ಷಣರಾಯರು ತಮ್ಮ ಕರ್ತೃತ್ವ ಶಕ್ತಿಯಿಂದ ಜಗತ್ತಿನಲ್ಲಿ ಪ್ರಸಿದ್ಧರಾಗುವರೆಂದು