ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JC ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ನಾಯಿತು, ಆಗ ಅವರು ಬಹಳ ಸಿಟ್ಟಿಗೆದ್ದು “ಇಷ್ಟು ದಿನಗಳ ವರೆಗೆ ಕಷ್ಟಪಟ್ಟು ಒಂದು ಯಂತ್ರವನ್ನು ಸಿದ್ದಪಡಿಸಲು ಕೂಡಿಸಿದ ಸಾಮಾನುಗಳ. ನೆಲ್ಲ ಕಸವೆಂದು ಮಾರಿ ಹಾಳು ಮಾಡಿದೆಯಲ್ಲ ? ನಾಲ್ಕು ಕವಡಿಯನ್ನು ನನ್ನ ಮುಂದೆಸೆದು ಸಮಾಧಾನಪಡಿಸುವಿಯಾ? ಯಾರು ಹೇಳಿದರು ಈ ಕಾರಭಾರ ಮಾಡಲಿಕ್ಕೆ ? ಇನ್ನು ಮುಂದೆ ಯಾರಾದರೂ ನನ್ನ ಸಾಮಾನುಗಳಿಗೆ ಕೈ ಹಚ್ಚಿದರೆ ಅದರ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ : ಎಚ್ಚರಿಕೆ !” ಎಂದು ಗದರಿಸಿದರು, ಕೆಲವು ದಿನಗಳಲ್ಲಿ ಲಕ್ಷ್ಮಣರಾಯರು ಅದನ್ನು ಮರೆತುಬಿಟ್ಟರು. ಮಾನವನ ಜೀವನದಲ್ಲಿ ಏರಿಳಿತಗಳು ಒರುವನಷ್ಟೆ ? ಲಕ್ಷ್ಮಣರಾಯರ ಜೀವನವನ್ನೇ ಬದಲಿಸುವ ಒಂದು ದುರ್ಧರ ಪ್ರಸಂಗವನ್ನು ಅವರು ಎದುರಿಸಬೇಕಾಯಿತು, ಅವರು ಇನ್ ಸ್ಟಿಟ್ಯೂಟದಲ್ಲಿ ಕೆಲಸ ಹಿಡಿದು ಹತ್ತು ವರ್ಷ ಗಳಾಗಿದ್ದವು. ಅವರ ಸಂಬಳವು ೩೫ ರಿಂದ ಪ್ರಾರಂಭವಾಗಿ ಏರುತ್ತ ೫೦ ಕ್ಕೆ ಬಂದು ಮುಟ್ಟಿತ್ತು, ಅವರ ಕೆಲಸವು ಕೂಡ ವರಿಷ್ಟರಿಗೆ ಮೆಚ್ಚಿಗೆಯಾಗಿತ್ತು. ಸಂಬಳನ್ನು ಹೆಚ್ಚುತ್ತ ಹೋಗಿ ಕೆಲವು ವರ್ಷಗಳಲ್ಲಿ ಮುಸ್ಪಿನ ವೇತನವು ( ಸೆನ್ಶನ್ ) ಸಿಗುವು ನಿಶ್ಚತವಿದ್ದಿತು, ಸಂಬಳವು ಹೆಚ್ಚುವ ಒಂದು ಸಂಧಿಯೂ ಒದಗಿತು. - ಮಿಸ್ಟರ ಗುಡ್ ಎಂಬ ಇಂiಷ ಗೃಹಸ್ಥನು ಲಕ್ಷ್ಮಣರಾಯರ ವಿಭಾ ಗದ ಮೇಲಧಿಕಾರಿಯು, ಈ ಸಾಹೇಬನ ವೃತ್ತಿಯ ವಿಚಿತ್ರವಾಗಿದ್ದಿತು. ವಿದ್ಯಾರ್ಥಿಗಳಿಗೆ ಯಾಂತ್ರಿಕ ಶಿಕ್ಷಣ ಕೊಡುವದಕ್ಕಿಂತಲೂ ಭಾರತದಲ್ಲಿ ಕ್ರಿಸ್ತ ಧರ್ನುದ ಪ್ರಸಾರ ಮಾಡುವದರಲ್ಲಿ ಅವನಿಗೆ ಹೆಚ್ಚು ಆನಂದವೆನಿಸುತ್ತಿತ್ತು. ಮಿಶನರಿಯಾಗುವದನ್ನು ನಿಶ್ಚಯಿಸಿ ಕೆಲಸಕ್ಕೆ ಶರಣು ಹೊಡೆದನು. ಇದ ರಿಂದ ಗುಡ್ ಸಾಹೇಬನ ಸ್ಥಳವನ್ನು ಹೇಗೆ ತುಂಬಬೇಕೆಂಬ ಪ್ರಶ್ನೆಯ ಸಂಚಾಲಕರ ಎದುರಿಗೆ ಉಪಸ್ಥಿತವಾಯಿತು. - ಇದೇ ಸುಮಾರಿಗೆ ಈ ಸಂಸ್ಥೆಯ ಪ್ರಿನ್ಸಿಪಾಲನು ಸ್ವರ್ಗವಾಸಿಯಾದನು. ಅವನ ಸೃಳಕ್ಕೆ ಹೊಸ ಪ್ರಿನ್ಸಿಪಾಲನು ಬಂದಿದ್ದನು. ಗುಡ್‌ಸಾಹೇಬನ ಕಾರ್ಯ ವನ್ನು ಲಕ್ಷ್ಮಣರಾಯರಾಗಲೀ ಅವರ ಸಹ ಶಿಕ್ಷಕರಾದ ಮಾಡುಲಕರರಾಗಲೀ ಸಮಾಧಾನಕರವಾಗಿ ಸಾಗಿಸಬಲ್ಲರೆಂಬುದನ್ನು ಅವನು ಮನಗಂಡಿದ್ದನು. ಅವರ ಹತ್ತು ವರ್ಷದ ಕಾರ್ಯವು ಅವರ