೨೪ ೪ ಚ. ನಿಂತಿಸಬಳ್ಳಿ ಪ್ರತಿಯೊಬ್ಬರಿಗೂ ಅನಿಸುತ್ತಿತ್ತು, C.ರಿಯರು ಈ ದೃಷ್ಟಿಯಿಂದಲೇ ಅವರ ಕಡೆಗೆ ನೋಡುತ್ತಿದ್ದರು. ಲಕ್ಷ್ಮಣರಾಯರ ತಲೆಯಲ್ಲಿ ಯಾವಾಗಲೂ ಯಂತ್ರದ ಚಕ್ರಗಳೇ ತಿರುಗುತ್ತಿದ್ದವು. ಇನ್ಸ್ಟಿಟೂಟದಿಂದ ಕೆಲಸ ಮುಗಿಸಿಕೊಂಡು ಮನೆಗೆ ಬಂದೊಡನೆಯೇ ಸಾಯಕಲ್ಲಿನ ಉದ್ಯೋಗದಲ್ಲಿ ನಿರತರಾಗುತ್ತಿದ್ದರು, ಅದರಲ್ಲಿ ವೇಳೆ ಉಳಿದರೆ ಮನೆಗೆ ಬಂದು ಕೋಣೆಯಲ್ಲಿ ಯಾಂತ್ರಿಕ ಮಾಸಿಕಗಳನ್ನು ಓದುತ್ತಿದರು, ಇಲ್ಲವೇ ಯಾವುದಾದರೊಂದು ಕೆಟ್ಟ ವಸ್ತುವನ್ನು ಸರಿಪಡಿಸುವದರಲ್ಲಿಯೋ ಅಥವಾ ಹೊಸದೊಂದು ಯಂತ್ರವನ್ನು ಜೋಡಿಸುವದ ರಲ್ಲಿಯೋ ತಲ್ಲೀನರಾಗಿರುತ್ತಿದ್ದರು. ಲಕ್ಷ್ಮಣರಾಯರಿಗೆ ಅಡಿಕೆಯ ಚಟ ಕೂಡ ಇರಲಿಲ್ಲ, ಆದರೆ ಅವರ ಗಳಿಕೆಯಲ್ಲಿ ಪುಸ್ತಕ ಹಾಗೂ ಮಾಸಿಕೆಗಳನ್ನು ಕೊಳ್ಳು ವದರಲ್ಲಿಯಾಗಲಿ ಇಲ್ಲವೆ ಹಳೇ ವಸ್ತುಗಳ ಸೇವೆಯಲ್ಲಿ ಕಬ್ಬಿಣದ ಪಟ್ಟಿ - ಗಳನ್ನು ಯಂತ್ರಗಳನ್ನು ಸರಿಪಡಿಸುವ ಸಾಮಾನುಗಳನ್ನು ಕೊಳ್ಳುವದ ರಲ್ಲಿಯಾಗಲಿ ನೆಚ್ಚನಾಗಿ ಹೋಗುತ್ತಿದ್ದಿತು, ಆದ್ದರಿಂದ ತಿಂಗಳ ಕೊನೆಗೆ ಬೊಕ್ಕಸದಲ್ಲಿ ಏನೂ ಉಳಿಯುತ್ತಿರಲಿಲ್ಲ. ರಾಧಾಬಾಯಿಯವರು ತನ್ನ ಗಂಡನನ್ನು ಬಹಳ ಆದರದಿಂದ ಕಾಣ) ೩ ಪತಿಯು ತಮ್ಮ ಗಳಿಕೆಯನ್ನೆಲ್ಲ ಕಬ್ಬಿಣದ ಕಸ ಕೊಳ್ಳುವದರಲ್ಲಿ ವ್ಯಯ ಮಾಡುತ್ತಿರುವದು ಮಾತ್ರ ಅವರ ಮನಸ್ಸಿಗೆ ಬರುತ್ತಿ ದಿಲ್ಲ. ಆದರೆ ಇದನ್ನು ಅಡಿ ತೋರಿಸುವ ಧೈರ ಯಾರಿಗೆ ಮನೆಯಲ್ಲಿ ದಿನದಿನಕ್ಕೆ ಬೆಳೆಯುತ್ತಿರುವ ಕಬ್ಬಿಣದ ಚೂರುಗಳ ಗುಂಪಿಯನ್ನು ನೋಡುವದು ರಾಧಾಬಾಯಿಯವರಿಗೆ ಸವಾಯಿತು, ಒಂದುದಿನ ಬಾಗಿಲಿಗೆ ಒಂದ ಮುರುಕು ಸಾಮಾನುಗಳನ್ನು ಕೊಳ್ಳುವವನಿಗೆ ಕೋಣೆಯಲ್ಲಿ ಕಬ್ಬಿಣದ ಚೂರುಗಳನ್ನೆಲ್ಲ ಮಾರಿಬಿಟ್ಟರು. ಸಾಸ ! ಈ ಚೂರುಗಳಿಂದಲೇ ಹೊಸ ಯಂತ್ರವನ್ನು ಸಿದ್ದಪಡಿಸಲು ಪ್ರತಿಯು ಆಲೋಚಿಸಿರುವೆನೇ.. ಈ ಬಡಪಾಣಿಗೆ ಏನು ಗೊತ್ತು ? ಸಂಜೆಗೆ ಮನೆಗೆಂದ ಲಕ್ಷ್ಮಣರಾಯರು ತನ್ನ ಕೋಣೆಯಲ್ಲಿದ ಕಬ್ಬಿಣದ ರಾಶಿ ಮಾಯವಾಗಿರುವದನ್ನು ಕಂಡು ಗಾಬರಿಯಾದರು. ಅದರ ವ್ಯವಸ್ಥೆ ಏನಾಯಿತೆಂಬುದು ತಿಳಿದೊಡನೆ ಅವರ ಸಿಟ್ಟು ಮಿತಿಮೀರಿತು. ಅವರ ಸಿಟ್ಟು ಇಳಿಯಬೇಕೆಂಬ ಉದ್ದೇಶದಿಂದ ರಾಧಾಬಾಯಿಯವರು ಮಾರಿ ಬಂದ ಹಣವನ್ನು ಅವರ ಮುಂದೆ ಇರಿಸಿದರು, ಆದರೆ ಅದರ ಪರಿಣಾಮವು ವಿಪರೀತ.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.