ಶಳಕವಾಡಿಯ ಸ್ಥಾಪನೆ ಕಬ್ಬಿಣದ ರಂಟೆಗಳು ರಾಯರ ಕೈ ಹಿಡಿದು, ಅವುಗಳ ಬೇಡಿಕೆಗಳೂ ಮೊದಲಿನ ಹತ್ತು ಪಟ್ಟು ಬೆಳೆದವು, ಸ್ಥಳವು ಸಾಲದಾಯಿತು. ತಗಡಿನ ಹೊಸ ಛಾವಣಿಗಳನ್ನು ಹಾಕಿ ಕೆಲಸ ಸಾಗಿಸಲಾಯಿತು, ಕೆಲಸಗಾರರ ಸಂಖ್ಯೆಯೂ ೪೦ಕ್ಕೆ ಏರಿತು, ಎರಡೂವರಿ ಅಶ್ವಶಕ್ತಿಯ ಬದಲು ಎಂಟು ಅಶ್ವಶಕ್ತಿಯು ಇಂಜೀನು ಕಾರ್ಯ ಮಾಡಹತ್ತಿತು. ಈ ನೇಗಿಗಳ ಮಾರಾಟದ ಹಂಗಾಮು ಸಪ್ಟೆಂಬರದಿಂದ ಫೆಬ್ರುವರಿ ವರೆಗೆ ಮಾತ್ರ, ಈ ಆವಧಿಯಲ್ಲಿ ಎಷ್ಟು ಮಾರಾಟವಾಗುವವೋ ಅಷ್ಟೇ, ಉಳಿದ ದಿನ ಕಾರಖಾನೆಯಲ್ಲಿ ಏನು ಮಾಡಬೇಕೆಂಬುದೇ ಪ್ರಶ್ನೆ ಇದ್ದಿ ತು. (ಕಾರಖಾನೆಯನ್ನು ಬೆಳೆಸಲ, ಇದೇ ಆತಂಕವಾಗಿದ್ದಿತು.) ಈ ಪ್ರಶ್ನೆಯನ್ನು ಆಲೋಚಿಸುವಾಗ ಲಕ್ಷಣರಾಯರಿಗೆ ಆ ಸಮಯದಲ್ಲಿ ಬೀಡಿನಿಂದ ದೋಸೆ ಹಂಚುಗಳನ್ನು ಮಾಡಬೇಕೆಂಬ ಕಲ್ಪನೆಯು ಹೊಳೆಯಿತು. ದೋಸೆಯ ಹಂಚು ತೀರ ಸಾದಾ ಪಸ್ಸು, ಅವ್ರ ಬಹಳವೆಂದರ ಎಷ್ಟು ಓರ್ಚಾದಾವು ? ಇದು ಜಾಹೀರಾತಿನ ಮೂಗವೆಂಬುದನ್ನು ರಾಯರು ಪಕ್ಕಾ ತಿಳಿದಿದ್ದರು. ಲಕ್ಷ್ಮಣರಾಯರು ಉಪ್ಪು-ಖಾರ ಹಚ್ಚಿ ಹೆಂಗಳೆಯರ ಬಾಯಲ್ಲಿ ನೀರು ಬಿಡುವಂತೆ ಜಾಹೀರಾತನ್ನು ಕೊಟ್ಟರು, ಇಂತಹ ವಸ್ತುಗಳ ಕಡೆಗೆ ಹೆಂಗಳೆಯರ ಮನಸ್ಸು ಬೇಗ ಹರಿಯುವದೆಂದೂ, ಒಬ್ಬಳು ತೆಗೆದುಕೊಂಡರೆ ಎಲ್ಲರೂ ಅದಕ್ಕೆ ಮುಗಿಬೀಳುವರೆಂದೂ ಅವರಿಗೆ ಗೊತ್ತು. ಅವರ ಎಣಿಕೆ ಯಂತೆಯೇ ಕಾರಖಾನೆಯಿಂದ ಹೊರಬೀಳುವ ಸಾವಿರಾರು ಹಂಚುಗಪಿ ಅಟ್ಟ ಸಮಯದಲ್ಲಿಯೇ ಮನೆಮನೆಯಲ್ಲಿ ಪ್ರಸಾರವಾದವು. ಹೀಗೆ ಕಾರಖಾನೆಯ ವ್ಯಾಪವು ಬೆಳೆಯುತ್ತ ನಡೆಯಿತು. ೪ ಬೈಲು ಪ್ರದೇಶದಲ್ಲಿ ಜನವಸತಿಯು ಹೆಚ್ಚಿತು, ಜನರು ಒಳ್ಳೆಯ ಮನೆಗಳನ್ನು ಕಟ್ಟಿಸ ಹತ್ತಿದರು. ಊರಲ್ಲಿಯ ಆನೇಕ ಪ್ರತಿಷ್ಠಿತ ಗೃಹಸ್ಥರು ಬಂದು ನೆಲೆಸಿದರು. ಆದರೂ ಅಲ್ಲಿ ಅಂಚೆಕಚೇರಿ ಇರಲಿ, ಅದರಿಂದ ಕಾರಖಾನೆಗೂ ವಿಶೇಷ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.