ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿನಬಳ್ಳಿ ಕಾರು ಅದು, ಆ ಆಧಿಕಾರಿಯು "ನೀವು ಒಳ್ಳೆ ಚುರುಕು ಬುದ್ಧಿಯ ಯಾಂತ್ರಿಕರೆಂದು ಮರೆ ಸಾಹೇಬರು ಹೇಳಿದ್ದರಿಂದ ನಾವೇ ನಿಮಗೆ ತಂತಿ ಕೊಟ್ಟಿದ್ದೇವೆ, ನಿಮಗೆ ಮೋಟಾರುಗಳನ್ನು ಸರಿ ಪಡಿಸುವ ಪ್ರತ್ಯಕ್ಷ ಅನು ಭವವು ಎಷ್ಟಿದೆ ?” ಎಂದರು. ಆಗ ಲಕ್ಷಣರಾಯರು “ವಿಲಾಯತಿಯ ಮಾಸಿಕಗಳಿಂದ ಮೋಟಾ ರಿನ ರಚನೆ ಹೇಗಿರುತ್ತದೆಂಬದನ್ನು ತಿಳಿದುಕೊಂಡಿದ್ದೇನೆ, ತಾವು ಇಷ್ಟಪಟ್ಟರೆ ಗಾಡಿಯು ಏಕೆ ನಿಂತಿದೆ ಎಂಬುದನ್ನು ತೋಧಿಸಿ ಸಾಧಿಸಿದರೆ ಅದನ್ನು ಸರಿ ಪಡಿಸಿಯೂ ಕೊಡುವೆ' ಎಂದು ಉತ್ತರಿಸಿದರು, “ಒಳ್ಳೇದು, ಹಾಗಾದರೆ ಕೆಲಸಕ್ಕೆ ಹತ್ತಿರಿ." ಎಂದರು ಅಧಿಕಾರಿಗಳು, ಆಗ ಲಕ್ಷಣರಾಯರು ಮೋಟಾರಿನ ಮುಚ್ಚಳವನ್ನು (ಹೂಡ) ತೆಗೆದು ಯಂತ್ರದ ರಚನೆಯನ್ನು ಸೂಕ್ಷ್ಮವಾಗಿ ನಿರೀಕ್ಷಿಸಿದರು, ಆದರೆ ಮೇಲೆ ಮೇಲಿನ ನಿರೀಕ್ಷಣದಿಂದ ಯಂತ್ರವು ಎಲ್ಲಿ ಕೆಟ್ಟಿದೆಯಂಬುದು ತಿಳಿಯಲಿಲ್ಲ. ಹ್ಯಾಂಡಲ್ಲನ್ನು ಅನೇಕ ಸಲ ತಿರುವಿ ನೋಡಿದರು. ಅದಕ್ಕೆ ಎಲ್ಲಿಯೂ ಆತಂಕವಾಗದೆ ಸುಲಭವಾಗಿ ತಿರುಗಹತ್ತಿತಲ್ಲದೆ ಬಹು ಹಗುರಾಗಿ ತಿರುಗ ಹತ್ತಿತು. ಆಗ ಲಕ್ಷಣರಾಯರು ಇಂಜೀನಿಗೆ ಸರಿಯಾಗಿ ಕಾಂಗ್ರೆಶನ್ (ಒತ್ತಡ) ಆಗದ ಮೂಲಕ ಅದರ ೩ಾಟ್ಟುಗಳು ಸರಿಯಾಗಿ ಕೆಲಸ ಮಾಡುವ ದಿಲ್ಲ ಎಂದು ತರ್ಕಿಸಿದರು, ಆಗ ಅವರು ವ್ಯಾಖ್ಯಗಳ ಮುಚ್ಚಳವನ್ನು ತೆಗೆದು ನೋಡಿದೊಡನೆಯೇ ತಮ್ಮ ತರ್ಕವು ಸರಿಯೆಂದು ಕಂಡುಬಂದಿತು. ಕೆಲವು ವಾಹಿಟ್ಟುಗಳ ಸಂಪರ್ಕವು ತಪ್ಪಿದ್ದರಿಂದ ಈ ತೊಂದರೆಯುಂಟಾಗಿತ್ತು. ತಪ್ಪು ಎಲ್ಲಿದೆ ಎಂದು ತಿಳಿದಮೇಲೆ ತಿದ್ದು ವದು ಎಷ್ಟು ತಡ ? ಆಗ ಅವರು ಎಲ್ಲ ಟಾಪೆಟ್ಟುಗಳನ್ನು ಶೋಧಿಸಿ ತಿರುಗಿ ಜೋಡಿಸಿದ ನಂತರ ಇಂಜೀನಿನಲ್ಲಿ ಪುನಃ ಜೀವವು ಸಂಚಾರವಾಯಿತು, ಅದರ ಹೃದಯವು ಮೊದಲಿನಂತೆ ಕಾರ್ಯ ಮಾಡಹತ್ತಿತು. ಇಬ್ಬರೂ ನಾಹೇಬರು ಲಕ್ಷ್ಮಣರಾಯರ ಈ ಪ್ರಯತ್ನವನ್ನು ಕಣ್ಣಿಟ್ಟು ನೋಡುತ್ತಿದ್ದರು. ಬೆಳಿಗ್ಗೆ ಚಹಾ ತೆಗೆದುಕೊಂಡು ಗಡಿಬಿಡಿಯಿಂದ ಹೊರ ಬಿದ್ದು ಬಂದು ಕೂಡಲೇ ಕೆಲಸಕ್ಕೆ ಹತ್ತಿದೆ, ಹಸಿವೆ ನೀರಡಿಕೆಗಳ ಪರಿವೆಯಿಲ್ಲದೆ ದುಡಿಯುತ್ತಿದ್ದ ಈ ವ್ಯಕ್ತಿಯ ಬಗೆಗೆ ಆ ಇಬ್ಬರಲ್ಲಿಯೂ ಆದರ, ಮಿಶ್ರಿತವಾದ ಕೌತುಕವು ಉಂಟಾಗಿದ್ದರೆ ಆಶ್ಚರ್ಯವೇನು ? ಈಗಂತೂ ಮೋಟಾರ ನಡೆಯು