ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಲ್ಲಿ ಮಿಂಚಿನಬಳ್ಳಿ ವಾದರೆ ನಮಗೂ ಸಂತೋಷ?” ಎನ್ನುತ್ತಿದ್ದರು. ಹೀಗೆ ಅನೇಕರಿಂದ ಲಕ್ಷಣ ರಾಯರಿಗೆ ಸಹಾಯ ದೊರೆತದ್ದು ಉಂಟು. ಆ ಕಾಲದಲ್ಲಿ ಸ್ವದೇಶಿ ಕಾರ್ಖಾನೆದಾರರಿಗೆ ಅನುಕೂಲವಾದ ಗಾಳಿಯು ಬೀಸಹತ್ತಿತು. ಲೋಕಮಾನ್ಯರು ತಮ್ಮ ಪ್ರಭಾವೀ ವಾಣಿಯಿಂದಲೂ ಬರಹ ಗಳಿಂದಲೂ, ಪರದೇಶಿ ವಸ್ತುಗಳ ಬಹಿಷ್ಕಾರ, ಸ್ವದೇಶೀ ವಸ್ತುಗಳ ಪ್ರಚಾರವನ್ನು ಪ್ರಾರಂಭಿಸಿದ್ದರು. “ನಮಗೆ ರಾಜಕೀಯ ಸ್ವಾತಂತ್ರವು ಬೇಕಿದ್ದರೆ ಅದ ಕ್ಕಿಂತಲೂ ಮೊದಲು ಆರ್ಥಿಕ ಸ್ವಾತಂತ್ರದ ಮಾರ್ಗದಲ್ಲಿರುವ ನಮ್ಮ ಕಾಲ ಲ್ಲಿಯ ಬೇಡಿಗಳನ್ನೆಲ್ಲ ಕಳಚೊಗೆಯಬೇಕು, ಅದರ ಸಾಧನವೆಂದು ಸ್ವದೇಶೀ ವೃತ ಸ್ವೀಕರಿಸಬೇಕು' ಎಂದು ಜನತೆಗೆ ಬಿಂಬಿಸಿದರು. * ೧೯೦೫ರಲ್ಲಿ ಪ್ರಾರಂಭವಾದ ಈ ಚಳವಳಿಯು ದೇಶದಲ್ಲೆಲ್ಲ ಹಬ್ಬಿತು. ಪರದೇಶೀ ವಸ್ತುಗಳಿಗೆ ಬಹಿಷ್ಕಾರ ಹಾಕುವಷ್ಟು ಸುಲಭ; ಸ್ವದೇಶಿ ವಸ್ತುಗಳ ನಿರ್ಮಾಣವಿರಲಿಲ್ಲ. ಜೀವನಾವಶ್ಯಕವಾದ ವಸ್ತುಗಳನ್ನು ನಿಮ್ಮಿಸುವ ಕಾರ ಖಾನೆಗಳು ನಮ್ಮಲ್ಲಿ ಹುಟ್ಟಿದ್ದ ವೆಲ್ಲಿ ? ಅಂತಹ ಕಾರ್ಖಾನೆಗಳು ಕಲ್ಪಿಸಿ ದೊಡನೆಯೇ ಜನ್ಮತಾಳುವನೇ? ಇಂತಹ ಸಮಯದಲ್ಲಿ ಕಿರ್ಲೋಸ್ಕರ ಕಾರ್ಖಾನೆಯು ಚಿಕ್ಕದಿದ್ದರೂ ಅದಕ್ಕೆ ಮಹತ್ವ ಪ್ರಾಪ್ತವಾಯಿತು. ಲೋಕಮಾನ್ಯರು ಈ ಕಾರರ್ಖಾನೆಗೆ ಬೆಟ್ಟಿಯನ್ನಿತ್ತರು. ಈ ಸಂಸ್ಮರಣೀಯ ಪ್ರಸಂಗ ವನ್ನು ಲಕ್ಷ್ಮಣರಾಯರ ಶಬ್ದಗಳಲ್ಲಿಯೇ ವಕ್ಸಿ ಸುವದು ಮೇಲು. “ಲೋಕಮಾನ್ಯರು ಕಾರ್ಖಾನೆಗೆ ಬಂದೊಡನೆ ನಸುನಗುತ್ತ ನನ್ನೊಡ ನೆಯೇ ಇನ್ನೊಬ್ಬ ಅತಿಧಿಯೂ ಬಂದಿದ್ದಾನೆ. ನೋಡಿದ್ದೀರಾ ? ಎಂದು ದೂರ ದಲ್ಲಿ ಗಿಡದ ಬುಡಕ್ಕೆ ಕುಳಿತ ಮನುಷ್ಯನ ಕಡೆಗೆ ಬೊಟ್ಟು ಮಾಡಿ ತೋರಿಸಿ ದರು. ಆ ಮಾತು ನನಗೆ ಸ್ವಲ್ಪು ವಿಚಿತ್ರವೆನಿಸಿತು. ನಾನು ಅವರನ್ನು ಕರೆಯಲು ಕಳುಹಿಸಿದೆ. ಆದರೆ ಅವನು ಸಿ. ಆಮ್, ಡಿ, ಇದ್ದು ಲೋಕ ಮಾನ್ಯರ ಮೇಲೆ ಕಣ್ಣು ಇಡುವದೇ ಅವನ ಕಾರ್ಯವೆಂದು ತಿಳಿದು ಬಂದಿತು. ಆಗ ನಮಗೆಲ್ಲ ನಗೆ, ಲೋಕಮಾನ್ಯರು ಹೊರಟೊಡನೆ ಮೈ ನೆರಳಿನಂತೆ ಅವನೂ ಹೊರಟುಹೋದ. ನಮ್ಮ ಕಾರ್ಖಾನೆಯಲ್ಲಿ ಲೋಕಮಾನ್ಯರು ಅರ್ಧಘಂಟೆ ಕಳೆದರು. ನಮ್ಮ ತೊಂದರೆಗಳನ್ನೆಲ್ಲ ಕೇಳಿಕೊಂಡರು. ಆಗ ನಾನು ಸರಕಾರ ಹಾಗೂ ಒಕ್ಕಲುತನ ಭಾತೆಂನಿಂದ ನನ್ನು ಕಾರ್ಖಾನೆಗೆ ಬಹಳ ತೊಂದರೆಯಾಗುತ್ತದೆ.